ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಹಿಪ್ಪರಗಿ: ಬರ ಪರಿಹಾರ ನೀಡಲು ಆಗ್ರಹ

ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿಗಳಿಂದ ಮನವಿ
Published 20 ಮೇ 2024, 14:33 IST
Last Updated 20 ಮೇ 2024, 14:33 IST
ಅಕ್ಷರ ಗಾತ್ರ

ದೇವರಹಿಪ್ಪರಗಿ: ತಾಲ್ಲೂಕಿನಲ್ಲಿ ರೈತರಿಗೆ ಬೆಳೆ ವಿಮೆ, ತೊಗರಿ ನೆಟೆ ರೋಗ, ಬರಗಾಲ ಪರಿಹಾರ ನೀಡುವುದು, ಜಮೀನುಗಳಿಗೆ ಸುಗಮ ದಾರಿ, ವೃದ್ಧರ ಪಿಂಚಣಿ ಸಮಸ್ಯೆಗಳಿಗೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿಗಳು ತಹಶೀಲ್ದಾರ್‌ ಕಾರ್ಯಾಲಯದ ಶಿರಸ್ತೇದಾರ ಡಿ.ಎಸ್. ಭೋವಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ತಾಲ್ಲೂಕಿನ ಎಲ್ಲ ಹಳ್ಳಿಗಳಲ್ಲಿ ಮುಂಗಾರು ಹಾಗೂ ಹಿಂಗಾರು ಬೆಳೆ ಬಾರದೆ ಹಾನಿಗೊಳಗಾದ ರೈತರಿಗೆ ರಾಜ್ಯ ಹಾಗೂ ಕೇಂದ್ರದಿಂದ ಪ್ರತಿ ಹೇಕ್ಟರ್‌ಗೆ ₹8,500  ಹಾಗೂ ₹8,500 ರಂತೆ ಒಟ್ಟು ₹17,000 ಪರಿಹಾರ ನೀಡಬೇಕಾಗಿತ್ತು. ಆದರೆ ರಾಜ್ಯ ಸರ್ಕಾರ ಮಾತ್ರ ಕೇಂದ್ರದ ಹಣದಲ್ಲಿ ₹2000 ಮುರಿದು ಹೇಕ್ಟರ್‌ಗೆ ₹6500 ನೀಡುತ್ತಿದೆ. ತೊಗರಿ ನೆಟೆರೋಗದ ಪರಿಹಾರ ಕೇವಲ ₹4200 ನೀಡಿದ್ದು ಉಳಿದ ಬಾಕಿ ಹಣ ನೀಡಬೇಕಾಗಿದೆ ಎಂದರು.

ಜಿಲ್ಲಾ ಉಪಾಧ್ಯಕ್ಷ ಸಂಪತ್ ಜಮಾದಾರ ಮಾತನಾಡಿ, ಫಸಲು ಭೀಮಾಯೋಜನೆಯಡಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ತಾಲ್ಲೂಕು ಗೌರವಾಧ್ಯಕ್ಷ ಶಿವಾನಂದಯ್ಯ ಹಿರೇಮಠ, ಸಿ.ಎಸ್. ಪ್ಯಾಟಿ, ಅಪ್ಪಾಸಾಹೇಬ ಹರವಾಳ (ಮಣೂರ), ಚನ್ನಪ್ಪ ಕಾರಜೋಳ(ನಿವಾಳಖೇಡ), ಸುನಂದಾ ಸೊನ್ನಳ್ಳಿ ಮಾತನಾಡಿ, ರೈತರ ಜಮೀನುಗಳ ರಸ್ತೆಯಲ್ಲಿ ಕಂಟಿ ಕಡೆಸಿ ಸುಗಮಗೊಳಿಸುವುದು, ವೃದ್ಧರ ಪಿಂಚಣಿ ಸರಿಯಾಗಿ ಬರಲು ಕ್ರಮವಹಿಸುವುದು, ನಿಂಬೆಗೆ ಬೆಂಬಲ ಬೆಲೆ ದೊರಕಿಸುವುದು ಹಾಗೂ ಹಳ್ಳಗಳಿಗೆ ನೀರು ಹರಿಸಲು ಕ್ರಮವಹಿಸುವ ಕುರಿತು ಆಗ್ರಹಿಸಿ, ಮನವಿ ಸಲ್ಲಿಸಿದರು.

ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಈರಪ್ಪ ಕುಳೇಕುಮಟಗಿ, ಮಲ್ಲನಗೌಡ ಬಿರಾದಾರ, ರುದ್ರಯ್ಯ ಹಿರೇಮಠ, ಬಾಬು ಬಾಗವಾನ, ಶಂಕರಗೌಡ ಹೊಸಗೌಡರ, ಶಕೀರಾ ಹೆಬ್ಬಾಳ, ಸಾಯಬ್ಬಿ ತಾಂಬೋಳಿ, ಜಾಯಿದಾ ಕೋರಬು, ವಿಠ್ಠಲ ಮರಾಠೆ, ಅಶೋಕ ನಾಯ್ಕೋಡಿ, ನೀಲು ಚವ್ಹಾಣ, ಸುಭಾಸ ಸಜ್ಜನ, ರಾಮು ಮೆಟಗಾರ, ಬಶೀರ್‌ಅಹ್ಮದ್ ಯಲಗಾರ, ರೂಪಸಿಂಗ್ ರಾಠೋಡ, ಮಾಳಪ್ಪ ಮೆಟಗಾರ, ಭೀಮರಾಯ ಕಲಕೇರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT