ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಆಯೋಗ ನಮೂನೆ 17ಸಿ ಘೋಷಿಸಲು ಆಗ್ರಹ

Published 26 ಮೇ 2024, 15:41 IST
Last Updated 26 ಮೇ 2024, 15:41 IST
ಅಕ್ಷರ ಗಾತ್ರ

ವಿಜಯಪುರ: ಲೋಕಸಭೆ ಚುನಾವಣೆಯ ಹಿಂದಿನ ಹಂತಗಳ ವಿವರವಾದ ಮತದಾನದ ಮಾಹಿತಿಯನ್ನು ಚುನಾವಣಾ ಆಯೋಗ ಘೋಷಿಸಲು ಎಸ್‍ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಉಮಾ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಚುನಾವಣಾ ಆಯೋಗಕ್ಕೆ ಅನೇಕ ಪಕ್ಷಗಳು ಮತದಾನದ ಅಂಕಿ–ಅಂಶಗಳಿರುವ ನಮೂನೆ 17ಸಿ ಮಾಹಿತಿ ಘೋಷಿಸಲು ಮನವಿ ಮಾಡಿದರು ಆದರೇ ಚುನಾವಣಾ ಆಯೋಗ ಅದನ್ನು ನಿರಾಕರಿಸಿರುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ.

ನಮೂನೆ 17ಸಿ ಯಲ್ಲಿ ಆಯಾ ಮತಗಟ್ಟೆ ಅಧ್ಯಕ್ಷರು ನೀಡಿದ ಬೂತ್‌ ಮಟ್ಟದ ಮತದಾನದ ಸಂಖ್ಯೆಗಳು ಚುನಾವಣಾ ಆಯೋಗದ ಕೈಯಲ್ಲಿರುವಾಗ, ಅದನ್ನು ಸಾರ್ವಜನಿಕವಾಗಿ ಘೋಷಿಸುವುದನ್ನು ತಡೆಯುತ್ತಿರುವ ಶಕ್ತಿ ಯಾವುದು ಎಂದು ಆಯೋಗ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಚುನಾವಣಾ ಆಯೋಗದಿಂದ ಘೋಷಿಸಲಾದ ಅಂತಿಮ ಮತದಾನದ ಅಂಕಿ ಅಂಶಗಳ ಶೇಕಡಾವಾರು ಪ್ರಮಾಣದಲ್ಲಿಯೂ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ, ಪ್ರಾಥಮಿಕ ಮಾಹಿತಿಗಿಂತ ಶೇ.6 ಹೆಚ್ಚಿನ ಅಸಹಜ ಏರಿಕೆಯಿದೆ. ಪ್ರತಿ ಹಂತದ ಮತದಾನದ ದಿನದ ತಡರಾತ್ರಿಯ ಮತ್ತು ಇತ್ತೀಚಿನ ನವೀಕರಿಸಿದ ಅಂಕಿ ಅಂಶಗಳನ್ನು ವಿಶ್ಲೇಷಿಸಿದ ಕೆಲ ಮಾಧ್ಯಮಗಳ ವರದಿ ನಡುವೆ ಸುಮಾರು 1.07 ಕೋಟಿ ಮತಗಳ ಅಂತರವಿದೆ. ಇದು ಚುನಾವಣೆಯ ಪ್ರಕ್ರಿಯೆಯ ಬಗ್ಗೆ ಅನುಮಾನ ಸೃಷ್ಟಿಸುತ್ತಿದೆ!

ಚುನಾವಣೆಗಳನ್ನು ಮುಕ್ತ ಹಾಗೂ ನ್ಯಾಯಯುತವಾಗಿ ನಡೆಸಲು, ಮತಗಳ ಎಣಿಕೆಯನ್ನು ಖಚಿತಪಡಿಸಿಕೊಳ್ಳಲು, 17ಸಿ ಯನ್ನು ತಕ್ಷಣವೇ ಅಪ್ಲೋಡ್‌ ಮಾಡಬೇಕು. ಅದಕ್ಕೆ ಅನುಗುಣವಾಗಿ ಕ್ಷೇತ್ರ ಮತ್ತು ಬೂತ್‌ವಾರು ಮತದಾನದ ಸಂಖ್ಯೆಯನ್ನು ಘೋಷಿಸಲು ಹಾಗೂ ಮತಗಳ ಎಣಿಕೆಯ ಸಮಯದಲ್ಲಿ ಅದೇ ಮತಗಳ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲು ನಾವು ಒತ್ತಾಯಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT