ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ವಿಜಯಪುರ: ಜನಮನ ಗೆದ್ದ ಶ್ವಾನಗಳ ಕಸರತ್ತು

22ಕ್ಕೂ ಹೆಚ್ಚು ತಳಿಗಳ 246ಕ್ಕೂ ಹೆಚ್ಚು ನಾಯಿಗಳು ಪ್ರದರ್ಶನದಲ್ಲಿ ಭಾಗಿ
ಆನಂದ ರಾಠೋಡ
Published : 24 ಫೆಬ್ರುವರಿ 2025, 5:22 IST
Last Updated : 24 ಫೆಬ್ರುವರಿ 2025, 5:22 IST
ಫಾಲೋ ಮಾಡಿ
Comments
ವಿಜಯಪುರ ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಭಾನುವಾರ ನಡೆದ ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಿದ್ದ ಶ್ವಾನಗಳನ್ನು ವೀಕ್ಷಿಸಿದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ.
ವಿಜಯಪುರ ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಭಾನುವಾರ ನಡೆದ ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಿದ್ದ ಶ್ವಾನಗಳನ್ನು ವೀಕ್ಷಿಸಿದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ.
ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಿದ್ದ ಜರ್ಮನ್‌ ಶೆಫರ್ಡ್‌
ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಿದ್ದ ಜರ್ಮನ್‌ ಶೆಫರ್ಡ್‌
ಶ್ವಾನ ಪ್ರದರ್ಶನ ಮೂಲಕ ಜಿಲ್ಲೆಯ ಶ್ವಾನ ಪ್ರಿಯರಿಗೆ ಯುವಕರಿಗೆ ಸ್ವಯಂ ಉದ್ಯೋಗ ಮಾಡಲು ಪ್ರೇರಣೆಯಾಗಲಿದೆ. ಜೊತೆಗೆ ರೆಬಿಸ್‌ ರೋಗದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಲಾಗಿದೆ.
ಡಾ. ಬಿ.ಎಸ್ ಕನಮಡಿ ಮುಖ್ಯ ಪಶು ವೈದ್ಯಾಧಿಕಾರಿಗಳು ಪಶುಪಾಲನ ಮತ್ತು ಪಶು ವೈದ್ಯಕೀಯ ಇಲಾಖೆ ಆಡಳಿತ
ವಿಜಯಪುರದಲ್ಲಿ ನಡೆಯುತ್ತಿರುವ ಶ್ವಾನ ಪ್ರದರ್ಶನದಲ್ಲಿ ಇದೇ ಮೊದಲ ಬಾರಿಗೆ ಭಾಗವಹಿಸಿದ್ದೇನೆ. ಜಿಲ್ಲೆಯಲ್ಲಿ ಈ ರೀತಿ ಶ್ವಾನ ಪ್ರದರ್ಶನ ಆಯೋಜಿಸುತ್ತಿರುವದು ಸಂತಸ ಮೂಡಿಸಿದೆ
– ಚೇತನ್‌ ಚವ್ಹಾಣ ವಿಜಯಪುರ
ಆಕರ್ಷಕ ಬಹುಮಾನ
ವಿಜಯಪುರ ನಗರದಲ್ಲಿ ನಡೆದ ಶ್ವಾನ ಪ್ರದರ್ಶನದಲ್ಲಿ ಸಣ್ಣ ಮರಿಗಳು ದೇಸಿ ತಳಿಗಳು ಹಾಗೂ ಅನ್ಯ ತಳಿಗಳು ಹೀಗೆ ಮೂರು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು. ಸಣ್ಣ ಮರಿಗಳ ವಿಭಾಗದಲ್ಲಿ ಮೊದಲ ಸ್ಥಾನ ₹5 ಸಾವಿರ ನಗದು ಮತ್ತು ಟ್ರೋಫಿ 2ನೇ ಸ್ಥಾನ ₹3 ಸಾವಿರ ನಗದು ಮತ್ತು ಟ್ರೋಫಿ ನೀಡಲಾಯಿತು. ದೇಸಿ ತಳಿಗಳ ವಿಭಾಗದಲ್ಲಿ ಮೊದಲ ಸ್ಥಾನ ಬಂದ ಶ್ವಾನಕ್ಕೆ ₹11 ಸಾವಿರ ನಗದು ಮತ್ತು ಟ್ರೋಫಿ 2ನೇ ಸ್ಥಾನ ₹9 ಸಾವಿರ ನಗದು ಮತ್ತು ಟ್ರೋಫಿ 3ನೇ ಸ್ಥಾನ 7ಸಾವಿರ ನಗದು ಮತ್ತು ಟ್ರೋಫಿ ನೀಡಲಾಯಿತು. ಅನ್ಯ ತಳಿಗಳ ವಿಭಾಗದಲ್ಲಿ ಮೊದಲ ಸ್ಥಾನ ₹15 ಸಾವಿರ ನಗದು ಮತ್ತು ಟ್ರೋಫಿ 2ನೇ ಸ್ಥಾನ ₹13 ಸಾವಿರ ನಗದು ಮತ್ತು ಟ್ರೋಫಿ 3ನೇ ಸ್ಥಾನಕ್ಕೆ 11 ಸಾವಿರ ನಗದು ಮತ್ತು ಟ್ರೋಫಿ 4ನೇ ಸ್ಥಾನಕ್ಕೆ 9 ಸಾವಿರ ನಗದು ಮತ್ತು ಟ್ರೋಫಿ 5ನೇ ಸ್ಥಾನಕ್ಕೆ 7 ಸಾವಿರ ನಗದು ಮತ್ತು ಟ್ರೋಫಿ 6ನೇ ಸ್ಥಾನಕ್ಕೆ 5 ಸಾವಿರ ನಗದು ಮತ್ತು ಟ್ರೋಫಿ ನೀಡಲಾಯಿತು. ಪ್ರದರ್ಶನದಲ್ಲಿ ಭಾಗವಹಿಸಿದ್ದ ಎಲ್ಲ ಶ್ವಾನಗಳಿಗೆ ಪ್ರಮಾಣಪತ್ರಗಳನ್ನು ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT