ತಾಳಿಕೋಟೆ: ‘ಸಾರಿಗೆ ನಿಗಮದಲ್ಲಿ ಕೆಲಸ ಮಾಡುವ ಚಾಲಕರು ನಿಗಮದ ಆರ್ಥಿಕತೆಗೆ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದು, ಅವರ ಸೇವೆ ಅನನ್ಯವಾಗಿದೆ’ ಎಂದು ಸ್ಥಳೀಯ ಸಾರಿಗೆ ಘಟಕ ವ್ಯವಸ್ಥಾಪಕ ಪಿ.ಕೆ.ಜಾಧವ ಹೇಳಿದರು.

ಅಂತರರಾಷ್ಟ್ರೀಯ ಚಾಲಕರ ದಿನಾಚರಣೆ ಅಂಗವಾಗಿ ಸ್ಥಳೀಯ ಸಾರಿಗೆ ಘಟಕ ಹಾಗೂ ಬಸ್ ನಿಲ್ದಾಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಚಾಲಕರು ತಮ್ಮ ಜೀವ ಹಾಗೂ ಆರೋಗ್ಯದ ಕುರಿತೂ ಹೆಚ್ಚು ಕಾಳಜಿ ವಹಿಸಬೇಕು. ಎಲ್ಲಾ ಒತ್ತಡಗಳಿಂದ ಮುಕ್ತರಾಗಿ ಎಚ್ಚರಿಕೆ ಹಾಗೂ ಸ್ವಯಂಚಿತ್ತದಿಂದ ವಾಹನ ಚಾಲನೆ ಮಾಡಬೇಕು’ ಎಂದು ಸಲಹೆ ನೀಡಿದರು.

ಲೆಕ್ಕ ಪತ್ರ ಅಧಿಕಾರಿ ಮಹಾಂತೇಶ ಕರಾಳೆ, ಪೀರಾಪೂರ ಪಿ.ಎಚ್.ಸಿ.ಆರೋಗ್ಯಾಧಿಕಾರಿ ಅಕ್ಷತಾ ವಂದಾಲ ಹಾಗೂ ವಿದ್ಯಾರ್ಥಿ ಅಮೂಲ ದ್ಯಾಪೂರ ಮಾತನಾಡಿದರು.

ಸಾರಿಗೆ ಘಟಕ ಹಾಗೂ ಬಸ್ ನಿಲ್ದಾಣದಲ್ಲಿ ಸಿಬ್ಬಂದಿ ವರ್ಗ, ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಂದ ಚಾಲಕರನ್ನು ಗೌರವಿಸಲಾಯಿತು.

ಸಾರಿಗೆ ನೌಕರ ಸಂಘದ ಅಧ್ಯಕ್ಷ ಕುಮಾರ ಅಸ್ಕಿ, ವಿಭಾಗೀಯ ಉಪಾಧ್ಯಕ್ಷ ಜಿ.ಜಿ.ಬಿರಾದಾರ, ಎಸ್ಸಿ, ಎಸ್ಟಿ ನೌಕರರ ಸಂಘದ ಅಧ್ಯಕ್ಷ ಮರೆಪ್ಪ ಚಲವಾದಿ, ಎಎಸ್ಐ ಚಂದ್ರಶೇಖರ ಭಂಗಿ, ಸಾರಿಗೆ ಸಿಬ್ಬಂದಿಗಳಾದ ನಿಂಗನಗೌಡ ಬಿರಾದಾರ,ಶಿವಾನಂದ ಬಿ.ಎಚ್.ಕನಕಪ್ಪ ಓಲೇಕಾರ, ಬಸನಗೌಡ ಚೋಕಾವಿ, ಚಂದ್ರಕಲಾ ಮೇಟಿ, ಪ್ರತಿಭಾ ಹಜೇರಿ, ಶರಣಮ್ಮ ಅರೆನಾಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.