ಮುದ್ದೇಬಿಹಾಳ: ಪಟ್ಟಣದ ಇಂದಿರಾ ವೃತ್ತದ ಬಳಿ ಇದ್ದ ಸೋಡಾ ಅಂಗಡಿಯೊಂದರಲ್ಲಿ ಶುಕ್ರವಾರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ವಸ್ತುಗಳು ಸುಟ್ಟಿರುವ ಘಟನೆ ನಡೆದಿದೆ.

ಸೋಠೆ ಗಲ್ಲಿ ನಿವಾಸಿ ಶಬ್ಬೀರ ಅತ್ತಾರ ಅವರಿಗೆ ಸೇರಿದ ಸೋಡಾ ಅಂಗಡಿಯಲ್ಲಿ ಈ ದುರ್ಘಟನೆ ನಡೆದಿದೆ. ಅಂಗಡಿಯಲ್ಲಿದ್ದ ರೆಫ್ರೀಜರೇಟರ್, ಐಸ್ ಕೂಲರ್, ಫ್ಯಾನ್ ಹಾಗೂ ಇನ್ನಿತರ ಸಾಮಗ್ರಿಗಳು ಸುಟ್ಟಿವೆ. ಅಲ್ಲದೇ ಫ್ರಿಡ್ಜ್ ದುರಸ್ತಿ ಮಾಡುವ ವಸ್ತುಗಳಿಗೆ ಹಾನಿಯಾಗಿವೆ.

ಅಂಗಡಿ ಮಾಲೀಕನ ಪುತ್ರ ಸೋಹೈಲ್ ಅತ್ತಾರ ಮಾತನಾಡಿ, ‘ನಮ್ಮ ಅಂಗಡಿಯಲ್ಲಿ ಫ್ರಿಡ್ಜ್‌ಗಳನ್ನು ದುರಸ್ತಿ ಮಾಡುತ್ತಿದ್ದೆವು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿತು. ಅಂಗಡಿಗೆ ಬೆಂಕಿ ಹತ್ತಿದ ವಿಷಯವನ್ನು ಪರಿಚಿತರೊಬ್ಬರು ಕರೆ ಮಾಡಿ ಮಾಹಿತಿ ನೀಡಿದ್ದರು. ತಕ್ಷಣ ಅಗ್ನಿಶಾಮಕ ಠಾಣೆಯವರಿಗೆ ಮಾಹಿತಿ ನೀಡಿದ್ದರಿಂದ ಅವರು ಬಂದು ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.