ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ: ತಾಯಿ ಹಾಲು ಸಂಗ್ರಹಣ ಕೇಂದ್ರ ಸ್ಥಾಪನೆ

ಹೈದರಾಬಾದ್‌ನ ಸುಶೇನಾ ಹೆಲ್ತ್‌ ಫೌಂಡೇಶನ್, ಜಿಲ್ಲಾಸ್ಪತ್ರೆಯೊಂದಿಗೆ ಒಪ್ಪಂದ
Published : 11 ಸೆಪ್ಟೆಂಬರ್ 2024, 15:42 IST
Last Updated : 11 ಸೆಪ್ಟೆಂಬರ್ 2024, 15:42 IST
ಫಾಲೋ ಮಾಡಿ
Comments

ವಿಜಯಪುರ: ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ವಿಜಯಪುರ ನಗರದ ಜಿಲ್ಲಾ ಆಸ್ಪತ್ರೆಯ ಮಕ್ಕಳ ಘಟಕದಲ್ಲಿ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ತಾಯಿ ಹಾಲು ಸಂಗ್ರಹಣ ಕೇಂದ್ರ ಸ್ಥಾಪಿಸಲು ಹೈದರಾಬಾದ್‌ನ ಸುಶೇನಾ ಹೆಲ್ತ್‌ ಫೌಂಡೇಶನ್ ಹಾಗೂ ವಿಜಯಪುರ ಜಿಲ್ಲಾಸ್ಪತ್ರೆ ಒಪ್ಪಂದ ಮಾಡಿಕೊಂಡಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರ ನೇತೃತ್ವದಲ್ಲಿ ನಗರದ ಜಿಲ್ಲಾಸ್ಪತ್ರೆಯ ಚಿಕ್ಕ ಮಕ್ಕಳ ಘಟಕದಲ್ಲಿ ತಾಯಿ ಹಾಲು ಸಂಗ್ರಹಣ ಕೇಂದ್ರ ಸ್ಥಾಪನೆಗೆ ಸಹಿ ಹಾಕಲಾಯಿತು.

ತಾಯಿ ಹಾಲು ಸಂಗ್ರಹಣ ಕೇಂದ್ರವು ನಿಯಮಗಳ ಪ್ರಕಾರ ತಾಯಿಯ ಎದೆಹಾಲನ್ನು ಪಡೆದು, ನ್ಯಾಷನಲ್ ಹೇಲ್ತ್ ಮಿಷನ್‌ ನಿಯಮಗಳನ್ವಯ ಹಾಲನ್ನು ಸಂಗ್ರಹಿಸಲಾಗುತ್ತದೆ ಎಂದರು.

ನವಜಾತ ಶಿಶುವಿನಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್‍ನ ಹಾಲಿನಿಂದ ಎನ್‌ಇಸಿಎ ಯನ್ನು ತಡೆಗಟ್ಟುವುದು, ಹಾಲು ಪಚನ ಕ್ರಿಯೆಯಲ್ಲಿ ಯಾವುದೇ ತೊಂದರೆ ಇದ್ದರೆ, ಇದು ಅತ್ಯಂತ ಪ್ರಯೋಜನಕಾರಿಯಾಗಿದೆ. ಅವಧಿ ಪೂರ್ವ ನವಜಾತ ಶಿಶುಗಳಲ್ಲಿ–ಮರಣ ಪ್ರಮಾಣವನ್ನು ಕಡಿಮೆ ಮಾಡಲು ಅತ್ಯಂತ ಸಹಕಾರಿಯಾಗಿದೆ. ನವಜಾತ ಶಿಶುಗಳಲ್ಲಿ ತೂಕ ಹೆಚ್ಚಿಸುವುದು ಹಾಗೂ ಅಪೌಷ್ಠಿಕತೆಯನ್ನು ನಿಯಂತ್ರಿಸಲಿದೆ.

ಸಂಗ್ರಹಿಸಲಾದ ಹಾಲನ್ನು ನವಾಜಾತ ಶಿಶುಗಳಿಗೆ ತುಂಬಾ ಉಪಯುಕ್ತವಾಗಿದ್ದು, ಕಡಿಮೆ ತೂಕದ ಶಿಶುಗಳು, ಶಸ್ತ್ರಚಿಕಿತ್ಸೆಗೆ ಒಳಗಾದ ನವಜಾತ ಶಿಶುಗಳಿಗೆ, ತಾಯಿಯರಿಗೆ ಹಾಲು ಬಾರದೇ ಇರುವ ಸಂದರ್ಭದಲ್ಲಿ ಸಹಕಾರಿಯಾಗಲಿದೆ. ತಾಯಿ ಹಾಲು ಸಂಗ್ರಹಣ ಕೇಂದ್ರದಿಂದ ಶಿಶುಗಳನ್ನು ಸದೃಢವಾಗಿ ಬೆಳೆಸುವ ಗುರಿಯನ್ನು ಹೊಂದಲಾಗಿದೆ ಎಂದರು.

ಜಿಲ್ಲಾಧಿಕಾರಿ ಟಿ.ಭೂಬಾಲನ್, ಹೈದರಾಬಾದ್‌ನ ಸುಶೇನಾ ಹೆಲ್ತ್ ಪೌಂಡೇಶನ್ ಎನ್‍ಜಿಒ ಜನರಲ್ ಸೆಕ್ರೇಟರಿ ಡಾ. ಸಂತೋಷಕುಮಾರ ಕಾರ್ಲೇಟಿ, ಹೈದ್ರಾಬಾದ್‍ನ ಯುನಿಸೆಫ್ ಹೆಲ್ತ ಸ್ಪೇಶಾಲಿಸ್ಟ್ ಡಾ.ಶ್ರೀಧರ ರ್ಯಾವಂಕಿ, ಡಾ.ಚಂದು ರಾಠೋಡ, ಡಾ.ಸುರೇಶ ಚವ್ಹಾಣ, ಡಾ.ಅನೀಲ ರಾಠೋಡ, ಡಾ.ಸುನೀಲ ರೂಡಗಿ, ಡಾ.ಶೈಲಶ್ರೀ, ಡಾ.ಸುಧೀರ ಚವ್ಹಾಣ, ಡಾ.ಅಕ್ಕಿ, ಡಾ.ಪವನ, ರಮೇಶ ರಾಠೋಡ ಸೇರಿದಂತೆ ಅನೇಕರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT