ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಡಚಣ | ಬೆಂಕಿ: ಕಟಾವಿಗೆ ಬಂದ 20 ಎಕರೆ ಕಬ್ಬು ಭಸ್ಮ

Published 28 ನವೆಂಬರ್ 2023, 16:58 IST
Last Updated 28 ನವೆಂಬರ್ 2023, 16:58 IST
ಅಕ್ಷರ ಗಾತ್ರ

ಚಡಚಣ: ತಾಲ್ಲೂಕಿನ ಧೂಳಖೇಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಿರನಾಳ ಗ್ರಾಮದ ಹಲವು ರೈತರ ಗದ್ದೆಗಳಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು 20 ಎಕರೆ ಕಟಾವಿಗೆ ಬಂದ ಕಬ್ಬು ಸುಟ್ಟು ಕರಕಲಾದ ಘಟನೆ ಮಂಗಳವಾರ ನಡೆದಿದೆ.

ಗ್ರಾಮದ ಅನಿತಾ ಪ್ರಬುಲಿಂಗ ಕೋರೆ, ಶಿವುಕುಮಾರ ಕೋರೆ, ಪರಸಣ್ಣಾ ನಿಲೂರೆ, ಜಗನ್ನಾಥ ರೇವತಗಾಂವ, ವಿರೇಶ ಕೋರೆ, ವಿಶ್ವನಾಥ್ ಕಾಮಾಟೆ ಅವರಿಗೆ ಸೇರಿದ ಗದ್ದೆಗಳು ಸುಟ್ಟು, ₹20 ಲಕ್ಷಕೂ ಅಧಿಕ ಮೌಲ್ಯದ ಬೆಳೆ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ರೈತರು ತಿಳಿಸಿದ್ದಾರೆ.

ರೈತರ ಸಹಕಾರದೊಂದಿಗೆ ಬೆಂಕಿ ನಂದಿಸುವಲ್ಲಿ ಅಗ್ನಿ ಶಾಮಕ ಸಿಬ್ಬಂದಿ ಮೂರ್ನಾಲ್ಕು ಗಂಟೆಗಳ ಕಾಲ ಶ್ರಮಿಸಿ ಯಶಸ್ವಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT