ನಿಡಗುಂದಿ(ವಿಜಯಪುರ): ಪಟ್ಟಣದ ಸಮೀಪ ಅರಣ್ಯ ಪ್ರದೇಶಕ್ಕೆ ಬೆಂಕಿ ತಗುಲಿ ಅಪಾರ ಪ್ರಮಾಣದ ಮರಗಿಡಗಳು ಬೆಂಕಿಗಾಹುತಿಯಾದ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.

ಆಲಮಟ್ಟಿ ರಸ್ತೆಯ ನಿರ್ಮಾಣ ಹಂತದಲ್ಲಿರುವ ಉದ್ಯಾನ ಪಕ್ಕದಲ್ಲಿರುವ ಕೆಬಿಜೆಎನ್ಎಲ್‌ಗೆ ಸೇರಿದ ನೂರಾರು ಎಕರೆ ಅರಣ್ಯ ಪ್ರದೇಶವಿದ್ದು ನಾನಾ ಜಾತಿಯ ಮರಗಿಡಗಳನ್ನು ಬೆಳೆಸಲಾಗಿದ್ದು ಶನಿವಾರ ರಾತ್ರಿ ಸಂಭವಿಸಿದ ಬೆಂಕಿ ಅವಘಡದಿಂದ ಬೇವು, ಹೊಂಗೆ, ಗೋಡಂಬಿ, ಆಲ ಸೇರಿದಂತೆ ನಾನಾ ಜಾತಿಯ ಗಿಡಗಳಿಗೆ ಹಾನಿಯುಂಟಾಗಿದೆ.

ಬೆಂಕಿ ನಂದಿಸಲು ಹರಸಾಹಸ: ಶಾರ್ಟ್ ಸರ್ಕಿಟ್ ನಿಂದ ಉಂಟಾದ ಬೆಂಕಿ ಕೆಲ ನಿಮಿಷಗಳಲ್ಲಿಯೇ ಅಪಾರ ಪ್ರದೇಶಕ್ಕೆ ವ್ಯಾಪಿಸಿದೆ. ಮರಗಿಡಗಳ ಕೆಳಗಿದ್ದ ಹುಲ್ಲು ಬೇಸಿಗೆಯಿಂದ ಒಣಗಿದ ಪರಿಣಾಮ ಬೆಂಕಿ ಕೆಲ ಕ್ಷಣಗಳಲ್ಲಿ ವ್ಯಾಪಿಸಲು ಕಾರಣವಾಗಿದೆ.ಬೆಂಕಿ ನಂದಿಸಲು ಬಸವನ ಬಾಗೇವಾಡಿ ಹಾಗೂ ಮುದ್ದೇಬಿಹಾಳ ಅಗ್ನಿ ಶಾಮಕ ದಳ ಸಿಬ್ಬಂದಿ ಹರಸಾಹಸ ಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.