ಮುದ್ದೇಬಿಹಾಳ: ಮೂಲ ಕಲಾವಿದರ ಉಳಿಸಿ ಬೆಳೆಸುವ ಕಾರ್ಯ ಸಮಾಜದಿಂದ ಆಗಬೇಕಾಗಿದೆ. ಸರ್ಕಾರವು ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡಬೇಕಾಗಿದೆ ಎಂದು ಮೈಸೂರಿನ ಕಿರುತೆರೆ ಕಲಾವಿದೆ ಮಾಲತಿ ಎಂ. ಹೇಳಿದರು.

ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಬಾಲಕಿಯ ಪ್ರೌಢಶಾಲೆಯ ಆವರಣದಲ್ಲಿ ಶನಿವಾರ ನಡೆದ ಹಿಂದಿ ಶಿಕ್ಷಕ ಎಚ್.ಆರ್.ಬಾಗವಾನ ಬರೆದಿರುವ ತತ್ವಪದಕಾರ ಬಸಪ್ಪ ಶರಣ ಜೀವನಗಾಥೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾನಪದ, ಹಿರಿಯ, ಕಿರಿಯ ಟಿವಿ ಕಲಾವಿದರು ಸಾಕಷ್ಟು ಜನರಿದ್ದು ಅದರಲ್ಲಿ ಸಂಕಷ್ಟದ ಬದುಕು ಸಾಗಿಸುತ್ತಿರುವವರಿಗೆ ಗುರುತಿಸಬೇಕಿದೆ ಎಂದರು.

ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಲ್ಲವಿ ನಾಡಗೌಡ ಮಾತನಾಡಿ, ಪುಸ್ತಕವನ್ನು ಓದಿದಾಗ ಸರಳವಾಗಿ ಓದಿಸಿಕೊಂಡು ಹೋಗುವಂತಹ ವಿಷಯ, ತತ್ವಪದಕಾರರ ಜೀವನ ಮೌಲ್ಯಗಳು ಇದರಲ್ಲಿ ಅಡಕವಾಗಿದೆ ಎಂದರು.

ಸಾಹಿತಿ ಚಂದ್ರೇಗೌಡ ಕುಲಕರ್ಣಿ ಮಾತನಾಡಿ, ಸಾಲಿಗೆ ಹೋಗಿಲ್ಲ. ಅಕ್ಷರ ಕಲಿತಿಲ್ಲ. ಆದರೂ ಸಹಿತ ಬಸಪ್ಪ ಶರಣರು ಜೀವನದ ಅನುಭವಗಳನ್ನು ಅನುಭವಿಸುತ್ತಾ ತಮ್ಮ ಅನುಭವದ ದಾರಿಯಲ್ಲಿ ನಡೆದವರು. ಹಾಡುಗಾರಿಕೆಯಲ್ಲಿನ ಲೋಪಗಳನ್ನು ಎತ್ತಿ ತೋರಿಸುವಂತಹ ಕೆಲಸ ಮಾಡುತ್ತಿದ್ದರು ಎಂದರು.

ವಕೀಲ ಎನ್.ಆರ್.ಮೊಕಾಶಿ, ಲೇಖಕ ಎಚ್.ಆರ್. ಬಾಗವಾನ ಮಾತನಾಡಿದರು. ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ, ಇಳಕಲ್ ಗುರುಮಹಾಂತ ಸ್ವಾಮೀಜಿ ಮಾತನಾಡಿದರು. ಹಿರಿಯ ಸಾಹಿತಿ ಎಂ.ಎಂ. ಪಡಶೆಟ್ಟಿ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಸಾಹಿತಿ ಬಿ.ಎಂ.ಹಿರೇಮಠ, ಗಣ್ಯರಾದ ಕೆ. ಎಚ್.ಚೌಡಕೇರ, ಹಿರಿಯ ವಕೀಲರಾದ ಎಂ.ಎಸ್.ನಾವದಗಿ ಇದ್ದರು. ಎಸ್.ಎ.ಬೇವಿನಗಿಡದ ಸ್ವಾಗತಿಸಿದರು. ಬಿ.ವಿ.ಕೋರಿ ಹಾಗೂ ಸಾಹಿತಿ ಸಿದ್ಧನಗೌಡ ಬಿಜ್ಜೂರು ನಿರೂಪಿಸಿದರು. ಸಂಗಮೇಶ ಶಿವಣಗಿ ಹಾಗೂ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮಹಾದೇವ ಗುಡಗುಂಟಿ ವಂದಿಸಿದರು.

ಪುಸ್ತಕ ಪರಿಚಯ
ತತ್ವ ಪದಕಾರ ಬಸಪ್ಪ ಶರಣರ ಜೀವನಗಾಥೆ
ಲೇಖಕ: ಎಚ್.ಆರ್.ಬಾಗವಾನ
ರಾಜ್ ಪ್ರಕಾಶನ, ಮುದ್ದೇಬಿಹಾಳ
ಪುಟಗಳು:25

ಬೆಲೆ:250 ರೂ.
ಮುದ್ರಕರು: ತ್ವರಿತ ಮುದ್ರಣ ಆಫಸೆಟ್, ಗದಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.