ವಿಜಯಪುರ: ನಗರದ ಗ್ಯಾಂಗ್ ಬಾವಡಿಯ ಮನೆಯೊಂದರಲ್ಲಿ ಹಾಗೂ ಬಸ್ ನಿಲ್ದಾಣದಲ್ಲಿ ಬ್ಯಾಗ್ ಅಪಹರಿಸಿ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದ ನಾಲ್ಕು ಜನ ಕಳ್ಳರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಶಿಕಾರಖಾನೆಯ ರಫೀಕ್ ಮಹಿಬೂಬಸಾಬ್ ಬೇಪಾರಿ, ಲಂಗರ ಬಜಾರ್‌ನ ಶಾಹಿದ್ ಇಬ್ರಾಹಿಂ ಕಮತಗಿ, ಇಂಡಿ ಪಟ್ಟಣದ ಕರೀಂ ನಗರದ ಅಶ್ಫಾಕ್ ಅಲಿಯಾಸ್ ಗೊಡ್ಯಾ ಸೈಫನಸಾಬ ಶೇಖ ಹಾಗೂ ಗಾಂಧಿ ನಗರದ ಆರೀಫ ನೂರಸಾಬ ಕಡದೇಕರ ಬಂಧಿತರು.

ಬಂಧಿತರಿಂದ ₹6.92 ಲಕ್ಷ ಮೌಲ್ಯದ 173 ಗ್ರಾಂ ಚಿನ್ನಾಭರಣ ಹಾಗೂ ₹2 ಸಾವಿರ ಮೌಲ್ಯದ 54 ಗ್ರಾಂ ಬೆಳ್ಳಿ ಆಭರಣ ಸೇರಿದಂತೆ ಒಟ್ಟು ₹6.94 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ ಎಲ್.ಅರಸಿದ್ದಿ, ಡಿವೈಎಸ್‌ಪಿ ಲಕ್ಷ್ಮೀನಾರಾಯಣ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಎಸ್.ಆರ್.ಕಾಂಬಳೆ, ರವೀಂದ್ರ ನಾಯ್ಕೋಡಿ, ಸಬ್ ಇನ್‌ಸ್ಪೆಕ್ಟರ್ ಎಸ್.ಬಿ.ಗೌಡರ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.