ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಭೀಮಾ ನದಿಯಲ್ಲಿ ಈಜಲು ಹೋದ ನಾಲ್ಕು ಮಕ್ಕಳು ನೀರು ಪಾಲು

Last Updated 30 ಮೇ 2021, 11:09 IST
ಅಕ್ಷರ ಗಾತ್ರ

ವಿಜಯಪುರ: ಕರ್ನಾಟಕದ ಗಡಿಯಲ್ಲಿರುವ ಮಹಾರಾಷ್ಟ್ರ ರಾಜ್ಯದ ಲವಗಿ ಗ್ರಾಮದ ಬಳಿ ಭೀಮಾ ನದಿಯಲ್ಲಿ ಈಜಲು ಹೋಗಿದ್ದ ನಾಲ್ಕು ಮಕ್ಕಳು ನೀರು ಪಾಲಾಗಿದ್ದಾರೆ.

ಲವಗಿ ಗ್ರಾಮದ ಶಿವಾನಂದ ಪಾರ್ಶೆಟ್ಟಿ ಅವರ ಮಕ್ಕಳಾದ ಆರತಿ(13), ವಿಠ್ಠಲ(10) ಹಾಗೂ ಶಿವಾಜಿ ತಾನವಡೆ ಎಂಬುವವರ ಮಕ್ಕಳಾದ ಸಮೀಕ್ಷಾ(14), ಅರ್ಪಿತಾ(13) ನೀರುಪಾಲಾಗಿದ್ದಾರೆ.

ಆರತಿ ಶವ ಮಾತ್ರ ಸಿಕ್ಕಿದ್ದು, ಉಳಿದ ಮೂವರಿಗಾಗಿ ಶೋಧ ಮುಂದುವರೆದಿದೆ. ಕುಟುಂಬಸ್ಥರು ಮನೆ ಕೆಲಸದಲ್ಲಿ ತೊಡಗಿದ್ದಾಗ ಮಕ್ಕಳು ನದಿಯಲ್ಲಿ ಸ್ಥಾನಕ್ಕೆ ತೆರಳಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ.

ಮಹಾರಾಷ್ಟ್ರದ ಮಂದ್ರೂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT