ಬುಧವಾರ, ಏಪ್ರಿಲ್ 14, 2021
32 °C

ನಾಲ್ವರು ಅಂತರರಾಜ್ಯ ಕಳ್ಳರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಜಿಲ್ಲೆಯ ತಿಕೋಟಾ, ಬಬಲೇಶ್ವರ ಹಾಗೂ ವಿಜಯಪುರ ಗ್ರಾಮೀಣ ಠಾಣೆಗಳ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಮನೆಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರ್ಯಾಚರಣೆ ನಡೆಸಿ, ನಾಲ್ವರು ಅಂತರರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಜತ್‌ನ ಪಾರದಿ ತಾಂಡಾದ ಕಿಶನ್‌ ಚವ್ಹಾಣ, ರೋಹಿತ ಚವ್ಹಾಣ, ಸಂತೋಷ ಚವ್ಹಾಣ ಮತ್ತು ಕಿರಣ ಕಾಳೆ ಎಂಬುವವರನ್ನು ಬುಧವಾರ ಬಂಧಿಸಿದ್ದಾರೆ.

ಆರೋಪಿಗಳ ಬಳಿ ಇದ್ದ ₹4.60 ಲಕ್ಷ ಮೌಲ್ಯದ 100 ಗ್ರಾಂ ಬಂಗಾರದ ಆಭರಣ, ₹15 ಸಾವಿರ ಮೌಲ್ಯದ 200 ಗ್ರಾಂ ಬೆಳ್ಳಿಯ ಆಭರಣ ಮತ್ತು ₹5 ಲಕ್ಷ ಮೊತ್ತದ ಕಾರು ಸೇರಿದಂತೆ ಒಟ್ಟು ₹9.75 ಲಕ್ಷ ಮೊತ್ತದ ಮಾಲನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ತಿಳಿಸಿದ್ದಾರೆ.

ವಿಜಯಪುರ ಗ್ರಾಮೀಣ ಸಿಪಿಐ ಎಸ್.ಬಿ.ಪಾಲಭಾವಿ ನೇತೃತ್ವದಲ್ಲಿ ಗಾಂಧಿಚೌಕ ಸಿಪಿಐ ರವಿಂದ್ರ ನಾಯಕೊಡಿ, ತಿಕೊಟಾ ಪೊಲೀಸ್‌ ಠಾಣೆ ಪಿ.ಎಸ್.ಐ  ಬಿ.ಬಿ.ಬಿಸನಕೊಪ್ಪ ಮತ್ತು ಎಸ್.ಕೆ.ಲಂಗೂಟಿ ಹಾಗೂ ಸಿಬ್ಬಂದಿಗಳಾದ ಎಂ.ಎನ್. ಮುಜಾವರ, ಆರ್.ಡಿ.ಅಂಜುಟಗಿ, ಎಲ್.ಎಸ್.ಹಿರೇಗೌಡರ, ಎಂ.ಬಿ.ಜನಗೊಂಡ, ಸಲೀಂ ಸೌದಿ, ಸಿದ್ದು ದಾನಪ್ಪಗೋಳ, ಎಂ.ಎನ್.ಇಚ್ಚುರ, ಹೊನಗೌಡ, ಅನೀಲ ಚೌಗಲೆ, ಎಸ್.ಎಸ್.ಹರಿಜನ, ಶಿವು ಕುಂಬಾರ ಅವರನ್ನು ಒಳಗೊಂಡ ತಂಡವು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು