ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದ ಜಿಲ್ಲೆಯಲ್ಲಿ ನಾಲ್ವರ ಸಾವು

ಆಯುಷ್ಮಾನ್‌ ಭಾರತ್‌; ದೂರು ನೋಂದಾಯಿಸಲು ಅವಕಾಶ: ಡಿಸಿ 
Last Updated 21 ಆಗಸ್ಟ್ 2020, 14:44 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ ಶುಕ್ರವಾರ ಕೋವಿಡ್‌ನಿಂದ ನಾಲ್ವರು ಸಾವಿಗೀಡಾಗಿರುವುದಾಗಿಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

38 ಮತ್ತು 64 ವರ್ಷ ವಯಸ್ಸಿನ ಇಬ್ಬರು ಪುರುಷರು ಹಾಗೂ 52 ಮತ್ತು 55 ವರ್ಷದ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ ಎಂದು ತಿಳಿಸಿದ್ದಾರೆ.

ಪೋರ್ಟಲ್‌ನಲ್ಲಿಕೋವಿಡ್ ಫಲಿತಾಂಶ:

ಎಸ್ ಆರ್ ಎಫ್ ಐಡಿ ಫೀಡಿಂಗ್ ಮಾಡುವ ಮೂಲಕ ಸಾರ್ವಜನಿಕರು ತಮ್ಮ ಕೋವಿಡ್ ಫಲಿತಾಂಶ ಪಡೆಯಲು ಈ ಕೆಳಗಿನ ಪೋರ್ಟಲ್https://www.covidwar.karnataka.gov .in/service1 ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

ಕೋವಿಡ್ ಪಾಸಿಟಿವ್ ಬಂದ ತಕ್ಷಣ ಆತಂಕ ಪಡುವ ಅಗತ್ಯವಿಲ್ಲ. ಶಾಂತಚಿತ್ತರಾಗಿ ಮನೆಯಲ್ಲೇ ಐಸೊಲೇಷನ್‌ ಇರುವಂತೆ ತಿಳಿಸಿದ್ದಾರೆ.

ಮೊಬೈಲ್ ಫೋನ್‌ ಮೂಲಕ ರೋಗಿಗಳಿಂದಿಗೆ ನೇರ ಸಂಪರ್ಕ ಸಾಧಿಸಲಿದ್ದು, ತುರ್ತು ಸಂದರ್ಭದಲ್ಲಿ ತಕ್ಷಣ 108ಕ್ಕೆ ಕರೆ ಮಾಡಬೇಕು ಎಂದರು.

ಜತೆಗೆ, ರಾಜ್ಯ ವಾರ್ ರೂಂಗೂ ವೈದ್ಯಕೀಯ ನೆರವಿಗೆ ಆಪ್ತ ಮಿತ್ರ ಸಹಾಯವಾಣಿ 14410ಗೆ ಕರೆ ಮಾಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ದೂರು ನೋಂದಾಯಿಸಲು ಅವಕಾಶ:

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಗೆ ಸಂಬಂಧಿಸಿದ ಜಿಲ್ಲಾ ಕುಂದುಕೊರತೆ ನಿವಾರಣಾ ಸಮಿತಿಯು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚನೆಯಾಗಿದೆ.

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಗೆ ಸಂಬಂಧಿಸಿದ ದೂರುಗಳನ್ನು www.cgrms.pmjay.gov.in ವೆಬ್‌ಸೈಟ್‌ನಲ್ಲಿ ನೋಂದಾಯಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT