ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಗಾಂಧಿ ಕೊಡುಗೆ ಮರೆಯಲಾಗದು: ಮುಶ್ರೀಫ್‌

Last Updated 30 ಜನವರಿ 2023, 12:49 IST
ಅಕ್ಷರ ಗಾತ್ರ

ವಿಜಯಪುರ: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 75ನೇ ಪುಣ್ಯತಿಥಿಯ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹುತಾತ್ಮರ ದಿನವನ್ನು ಆಚರಿಸಲಾಯಿತು.

ಮುಖಂಡ ಅಬ್ದುಲ್‌ ಹಮೀದ್‌ ಮುಶ್ರೀಫ್‌ ಮಾತನಾಡಿ, ಅಹಿಂಸಾಮೂರ್ತಿ, ಸರಳತೆಯ ಪ್ರತಿಪಾದಕ, ಜಗತ್ತಿನ ಹಲವಾರು ಮಹಾನ್ ಚಳವಳಿಗಳಿಗೆ ಪ್ರೇರಕರಾಗಿದ್ದ ಮಹಾತ್ಮ ಗಾಂಧಿಯವರ ಕೊಡುಗೆಗಳನ್ನು ಯಾರೂ ಮರೆಯುವಂತಿಲ್ಲ. ಸತ್ಯ, ಶಾಂತಿ, ಅಹಿಂಸೆ, ಅಸ್ಪೃಶ್ಯತೆ ನಿವಾರಣೆಗಾಗಿ ಗಾಂಧೀಜಿಯವರು ಪಾಲಿಸಿದ ತತ್ವಗಳು ನಾವೆಲ್ಲರೂ ಸದಾ ಸ್ಮರಿಸುವಂತಾಗಬೇಕು ಎಂದು ಹೇಳಿದರು.

ಧ್ವಜಾರೋಹಣ:

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ನಡೆಸಿದ ‘ಭಾರತ ಜೋಡೊ’ ಪಾದಯಾತ್ರೆಯು ಸೋಮವಾರ ಮುಕ್ತಾಯವಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲ ಕಾಂಗ್ರೆಸ್ ಕಚೇರಿಗಳ ಎದುರು ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಧ್ವಜಾರೋಹಣ ಮಾಡಲಾಯಿತು.

ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರ ದವರೆಗೆ 4080 ಕಿ.ಮೀ ದೂರವನ್ನು 134 ದಿನಗಳಲ್ಲಿ ಕ್ರಮಿಸಿದ್ದು, ಒಂದು ಐತಿಹಾಸಿಕ ದಾಖಲೆಯಾಗಿದೆ. ಒಟ್ಟು 12 ರಾಜ್ಯಗಳ 75 ಜಿಲ್ಲೆಗಳಲ್ಲಿ ಪಾದಯಾತ್ರೆ ನಡೆಸಿದ ರಾಹುಲ್ ಗಾಂಧಿಯವರು ಕಾಶ್ಮೀರದ ಲಾಲ್‍ಚೌಕ್‍ನಲ್ಲಿ ಭಾರತದ ತ್ರಿವರ್ಣ ಧ್ವಜಾರೋಹಣ ಮಾಡಿದ್ದು, ಚಾರಿತ್ರಿಕ ದಾಖಲೆಯಾಗಿದೆ ಎಂದು ಅಬ್ದುಲ್‌ ಹಮೀದ್‌ ಮುಶ್ರಿಫ್‌ ಹೇಳಿದರು.

ಪಂಡಿತ್‌ ನೆಹರು ಅವರ ನಂತರ ಧ್ವಜಾರೋಹಣ ಮಾಡಿದ ಎರಡನೇ ಕಾಂಗ್ರೆಸ್‌ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ ಎಂದರು.

ಕಾಂಗ್ರೆಸ್ ಮುಖಂಡರಾದ ಬಿ.ಎಸ್. ಪಾಟೀಲ ಯಾಳಗಿ, ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಸುಭಾಷ್ ಕಾಲೇಬಾಗ, ಶ್ರೀದೇವಿ ಉತ್ಲಾಸರ, ಡಿ.ಎಲ್. ಚವ್ಹಾಣ, ಸುಜಾತಾ ಕಳ್ಳಿಮನಿ, ಜಮೀರ ಅಹ್ಮದ ಬಕ್ಷಿ, ಆರತಿ ಶಹಾಪೂರ, ಸಾಹೇಬಗೌಡ ಬಿರಾದಾರ, ವಸಂತ ಹೊನಮೊಡೆ, ಎ.ಪಿ. ಇನಾಮದಾರ, ಸಮದ್ ಸುತಾರ, ಚನಬಸಪ್ಪ ನಂದರಗಿ, ಹಾಜಿಲಾಲ ದಳವಾಯಿ, ಅಂಬಣ್ಣ ಕಲ್ಮನಿ, ಮಲ್ಲಿಕಾರ್ಜುನ ಪರಸಣ್ಣವರ, ಭಾರತಿ ಹೊಸಮನಿ, ಆಸ್ಮಾ ಕಾಲೇಬಾಗ, ಶಮಿಮಾ ಅಕ್ಕಲಕೋಟ, ಪ್ರಭಾವತಿ ನಾಟೀಕಾರ, ಲಕ್ಷ್ಮೀ ಕ್ಷೀರಸಾಗರ, ಲಲಿತಾ ದೊಡಮನಿ, ಇಲಿಯಾಸ ಅಹ್ಮದ ಸಿದ್ದಿಕಿ, ಹಮೀದ್ ಲೋಗಾಂವಿ, ಗೌರಿಶಂಕರ ಬೇನೂರ, ಮಹ್ಮದ ಮುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT