ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇವೂರ; ಭಾವೈಕ್ಯ ಬೆನಕ ಪ್ರತಿಷ್ಠಾಪನೆ

Published : 8 ಸೆಪ್ಟೆಂಬರ್ 2024, 14:27 IST
Last Updated : 8 ಸೆಪ್ಟೆಂಬರ್ 2024, 14:27 IST
ಫಾಲೋ ಮಾಡಿ
Comments

ದೇವರಹಿಪ್ಪರಗಿ: ಗಣೇಶನನ್ನು ಪ್ರತಿಷ್ಠಾಪಿಸಿ ಐದು ದಿನಗಳ ಕಾಲ ಪೂಜಿಸುವುದರ ಮೂಲಕ ಗ್ರಾಮದ ಮುಸ್ಲೀಂ ಸಮುದಾಯದ ಯುವಕರು ಭಾವೈಕ್ಯ ಮೆರೆದು ಇತರರಿಗೂ ಮಾದರಿಯಾಗಿದ್ದಾರೆ.

ತಾಲ್ಲೂಕಿನ ದೇವೂರ ಗ್ರಾಮದಲ್ಲಿ ಮುಸ್ಲೀಂ ಸಮುದಾಯ ಯುವಕರಾದ ಅಬ್ಬಾಸಲಿ ಬಾಗವಾನ, ಪೈಗಂಬರ್ ನದಾಫ್, ಸಿಕಂದರ್ ನದಾಫ್, ರಫೀಕ್ ಮುಲ್ಲಾ, ರಾಜು ನದಾಫ್, ಬಂದಗೀಸಾಬ್ ಅಳಗುಂಡಗಿ, ಅಬ್ಬಾಸಲಿ ಅಳಗುಂಡಗಿ ಸೇರಿದಂತೆ ಹಲವು ಯುವಕರು ಕಳೆದ 10 ವರ್ಷಗಳಿಂದ ನಿರಂತರವಾಗಿ ಗಣೇಶನನ್ನು ಪ್ರತಿಷ್ಠಾಪಿಸುವುದರ ಮೂಲಕ ಸಾಂಪ್ರದಾಯಿಕ ಹಬ್ಬಕ್ಕೆ ಚಾಲನೆ ನೀಡಿ ನಂತರ ನಿತ್ಯ ಪೂಜೆ ಹಾಗೂ ಅನ್ನ ಸಂತರ್ಪಣೆ ಕೈಗೊಳ್ಳುತ್ತಿದ್ದಾರೆ.

ಗ್ರಾಮದ ಗಣೇಶನ ಹಬ್ಬದಲ್ಲಿ ಅವರು, ಇವರು ಎನ್ನದೇ ಪ್ರತಿಯೊಬ್ಬರು ಭಾಗವಹಿಸುತ್ತಿದ್ದು, ಇದು ಹಬ್ಬಕ್ಕೆ ಹೆಚ್ಚಿನ ಕಳೆ ತಂದಿದೆ ಎನ್ನುತ್ತಲೇ ಗ್ರಾಮದ ಮುದುಕಪ್ಪ ಮೆಟಗಾರ, ಸಾಯಿನಾಥ ಕಂಬಾರ, ಸಂತೋಷ ಮೆಟಗಾರ, ಭೀಮು ತಾಂಬೆ, ಲಕ್ಷ್ಮಣ ಅಳೂರ, ಭೀರಣ್ಣ ಪೂಜಾರಿ, ಯಲ್ಲಾಲಿಂಗ ತಳವಾರ, ಮಲ್ಲಪ್ಪ ಮಸಬಿನಾಳ ಪ್ರತಿಷ್ಠಾಪನೆಯ ಪೂಜಾಕಾರ್ಯದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT