ವಿಜಯಪುರ: ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಬಿಳಿ ಜೋಳವನ್ನು ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಣೆ ಮಾಡುವ ಉದ್ದೇಶ ಹೊಂದಿದ್ದು, ಜಿಲ್ಲೆಯ ರೈತರು ಈ ಬೆಂಬಲ ಬೆಲೆ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ತಿಳಿಸಿದ್ದಾರೆ.

ಸರ್ಕಾರವು 2020-21 ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಬಿಳಿಜೋಳ (ಮಾಲ್ದಂಡಿ ಹಾಗೂ ಹೈಬ್ರಿಡ್) ಖರೀದಿಸಲು ಉದ್ದೇಶಿಸಿ ಮಾಲ್ದಂಡಿ ಜೋಳ ಪ್ರತಿ ಕ್ವಿಂಟಲ್‌ಗೆ ₹2640 ಹಾಗೂ ಹೈಬ್ರಿಡ್ ಜೋಳಕ್ಕೆ ಪ್ರತಿ ಕ್ವಿಂಟಲ್‍ಗೆ ₹ 2620ರಂತೆ ಬೆಂಬಲ ಬೆಲೆ ನಿಗದಿಪಡಿಸಿದೆ.

ಈ ಖರೀದಿ ಮತ್ತು ಸಂಗ್ರಹಣೆಗಾಗಿ ಕರ್ನಾಟಕ ಆಹಾರ ನಾಗರಿಕ, ಸರಬರಾಜು ನಿಗಮಕ್ಕೆ ವಹಿಸಲಾಗಿದ್ದು, ಈ ನಿಗಮದವರು ಈಗಾಗಲೇ ಜಿಲ್ಲಾದ್ಯಂತ ಖರೀದಿ ಕೇಂದ್ರಗಳನ್ನು ತೆರೆದಿರುತ್ತಾರೆ. ನೋಂದಣಿಯನ್ನು ಏಪ್ರಿಲ್ 30 ರವರೆಗೆ ವಿಸ್ತರಿಸಿದ್ದು, ರೈತರು ಇದರ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.

ರೈತರು ಏಪ್ರಿಲ್ 30ರ ಒಳಗಾಗಿ ಆಯಾ ಸಂಗ್ರಹಣೆ ಕೇಂದ್ರಗಳನ್ನು ಸಂಪರ್ಕಿಸಿ, ನೋಂದಣಿಯನ್ನು ಮಾಡಿಸಿ ಬಿಳಿ ಜೋಳವನ್ನು ನೀಡಬಹುದಾಗಿದೆ.

ವಿಜಯಪುರ-9845093631, ಬಸವನಬಾಗೇವಾಡಿ-8748007370, ಮುದ್ದೇಬಿಹಾಳ-8762355097, ಇಂಡಿ-7676630663 ಸಿಂದಗಿ-9740880080 ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕೆಎಫ್‍ಸಿಎಸ್‍ಸಿ ವಿಜಯಪುರ ಇವರನ್ನು ದೂರವಾಣಿ ಸಂಖ್ಯೆ-9448496016 ಸಂಪರ್ಕಿಸಬೇಕು ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.