ವಿಜಯಪುರ: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಕ್ರಮ ಖಂಡಿಸಿ ಕಾಂಗ್ರೆಸ್ ಮತ್ತು ಅಹಿಂದ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿ ಚೌಕದಲ್ಲಿ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ರಾಜ್ಯಪಾಲರ ಪ್ರತಿಕೃತಿ ದಹಿಸಿ, ರಸ್ತೆ ಮೇಲೆ ಮಲಗಿ ಆಕ್ರೋಶ ವ್ಯಕ್ತಪಡಿಸಿದರು.
‘ಸಿದ್ಧರಾಮಯ್ಯ ಅವರನ್ನು ತೇಜೋವಧೆ ಮಾಡುವ ಉದ್ದೇಶದಿಂದ ರಾಜ್ಯಪಾಲರು ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರವು ರಾಜ್ಯದ ಜನತೆಗೆ ಕೊಡುತ್ತಿರುವ ಗ್ಯಾರಂಟಿಗಳ ವಿರುದ್ಧ ಬಿಜೆಪಿ, ಜೆಡಿಎಸ್ ಪಿತೂರಿ ಮಾಡಿ, ರಾಜ್ಯ ಸರ್ಕಾರವನ್ನು ಬುಡಮೇಲು ಮಾಡಲು ಯತ್ನಿಸುತ್ತಿದ್ದಾರೆ. ಇದು ಸಂವಿಧಾನ ವಿರೋಧಿ ನಡೆ ರಾಜ್ಯಪಾಲರಿಗೆ ಕಾನೂನಿನ ಹೋರಾಟದಲ್ಲಿ ಸೋಲಾಗಲಿದೆ. ಜನ ಬಿ.ಜೆ.ಪಿ ವಿರುದ್ಧ ದಂಗೆ ಏಳಲಿದ್ದಾರೆ’ ಎಂದು ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಹೇಳಿದರು.
ಕೆಪಿಸಿಸಿ ವಕ್ತಾರ ಎಸ್. ಎಂ. ಪಾಟೀಲ ಗಣಿಹಾರ ಮಾತನಾಡಿ, ‘ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೆ ರಾಜೀನಾಮಿ ಕೊಡಬಾರದು, ರಾಜ್ಯದ ಜನ ತಮ್ಮೊಂದಿಗೆ ಇದ್ದಾರೆ’ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಗುರನಗೌಡ ಪಾಟೀಲ, ಅಬ್ದುಲ್ ರಜಾಕ್ ಹೊರ್ತಿ, ಸಂಜೀವ ಕೊಂಬೋಗಿ, ಆರತಿ ಶಹಪೂರ, ಡಾ. ರವಿ ಬಿರಾದಾರ, ಮಹಮ್ಮದ್ ರಫೀಕ ಟಪಾಲ, ಚಾಂದಸಾಬ ಗಡಗಲಾವ, ಗಂಗಾಧರ ಸಂಬಣ್ಣಿ, ಡಿ. ಎಲ್. ಚವ್ಹಾಣ, ಸಂಗನಗೌಡ ಹರನಾಳ, ಜಮೀರ ಅಹ್ಮದ ಬಕ್ಷಿ, ಸುರೇಶ ಗೊಣಸಗಿ, ಬೀರಪ್ಪ ಸಾಸನೂರ, ಮಲ್ಲು ಬಿದರಿ, ಸಾಹೇಬಗೌಡ ಬಿರಾದಾರ, ವಸಂತ ಹೊನಮೋಡೆ, ಫಯಾಜ ಕಲಾದಗಿ, ಗಂಗೂಬಾಯಿ ಧುಮಾಳೆ, ಜಯಶ್ರೀ ಭಾರತೆ, ಸರಿತಾ ಚವ್ಹಾಣ, ಆಸ್ಮಾ ಕಾಲೇಬಾಗ, ಕಾಶಿಬಾಯಿ ಹಡಪದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.