ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರ್ಶನಿಕರ ಆದರ್ಶ ಪಾಲಿಸೋಣ

Published 10 ಮೇ 2024, 15:47 IST
Last Updated 10 ಮೇ 2024, 15:47 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ‘ಕಾಯಕದ ಮಹತ್ವ ಹಾಗೂ ಭಕ್ತಿಯ ನಿಷ್ಠೆಯನ್ನು ಜಗತ್ತಿಗೆ ಸಾರಿದ ಮಹಾನ್ ದಾರ್ಶನಿಕರಾದ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಹಾಗೂ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣವರ ಆದರ್ಶಗಳನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕು’ ಎಂದು ಮಕ್ಕಳ ಯುವ ಸಾಹಿತಿ ಸಿದ್ಧನಗೌಡ ಬಿಜ್ಜೂರ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ ಹಾಗೂ ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಸಾಪ ಮಾಜಿ ಅಧ್ಯಕ್ಷ ಎಂ.ಬಿ. ನಾವದಗಿ ಮಾತನಾಡಿ, ಬಸವಣ್ಣನವರನ್ನು ಕರ್ನಾಟಕ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಅವರ ವಚನಗಳನ್ನು ವಿಶ್ವವ್ಯಾಪಕವಾಗಿ ಹರಡುವ ಕಾರ್ಯ ಆಗಬೇಕು ಎಂದರು.

ಶಿರಸ್ತೇದಾರ ಎಂ.ಎಸ್. ಬಾಗೇವಾಡಿ,ಪುರಸಭೆ ಮಾಜಿ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ವೆಂಕನಗೌಡ ಪಾಟೀಲ್, ಕಂದಾಯ ನಿರೀಕ್ಷಕ ಮಹಾಂತೇಶ ಮಾಗಿ, ಪವನ್ ತಳವಾರ, ಮುಖಂಡರಾದ ಅಶೋಕ ನಾಡಗೌಡ, ಸೋಮನಗೌಡ ಮೇಟಿ, ರುದ್ರಗೌಡ ಅಂಗಡಗೇರಿ ಇದ್ದರು.

ಹೇಮರಡ್ಡಿ ಮಲ್ಲಮ್ಮ ವೃತ್ತ: ಪಟ್ಟಣದ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಹೇಮರಡ್ಡಿ ಮಲ್ಲಮ್ಮನವರ ಜಯಂತಿ ಆಚರಿಸಲಾಯಿತು.

ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಯಿತು. ಪ್ರಥಮ ದರ್ಜೆ ಗುತ್ತಿಗೆದಾರ ಸುರೇಶಗೌಡ ಪಾಟೀಲ್ (ಇಂಗಳಗೇರಿ), ಅಶೋಕ ನಾಡಗೌಡ, ಬಸವರಾಜ ಮುದ್ನೂರ, ಸರಸ್ವತಿ ಪೀರಾಪೂರ, ಶೋಭಾ ಶೆಳ್ಳಗಿ, ಅಕ್ಷತಾ ಚಲವಾದಿ ಇದ್ದರು. ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲೂ ಜಯಂತಿ ಆಚರಿಸಲಾಯಿತು. ತೊಟ್ಟಿಲು ಸೇವೆ ಮಾಡಲಾಯಿತು.

ಮುದ್ದೇಬಿಹಾಳ ಪಟ್ಟಣದ  ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲೂ ಜಯಂತಿ ಆಚರಿಸಲಾಯಿತು.ತೊಟ್ಟಿಲು ಸೇವೆ ಮಾಡಲಾಯಿತು.
ಮುದ್ದೇಬಿಹಾಳ ಪಟ್ಟಣದ  ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲೂ ಜಯಂತಿ ಆಚರಿಸಲಾಯಿತು.ತೊಟ್ಟಿಲು ಸೇವೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT