ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ: ₹15.21 ಕೋಟಿ ವೆಚ್ಚದಲ್ಲಿ ಹೈಟೆಕ್ ಆಗಲಿದೆ ರೈಲು ನಿಲ್ದಾಣ

ಆಧುನೀಕರಣಕ್ಕೆ ಚಾಲನೆ ನಾಳೆ
ಚಂದ್ರಶೇಖರ ಕೋಳೇಕರ
Published 25 ಫೆಬ್ರುವರಿ 2024, 4:56 IST
Last Updated 25 ಫೆಬ್ರುವರಿ 2024, 4:56 IST
ಅಕ್ಷರ ಗಾತ್ರ

ಆಲಮಟ್ಟಿ: ಅಮೃತ ಭಾರತ ರೈಲು ನಿಲ್ದಾಣಗಳ ಯೋಜನೆಯಡಿ ಸೇರ್ಪಡೆಗೊಂಡಿರುವ ಆಲಮಟ್ಟಿ ರೈಲು ನಿಲ್ದಾಣದ ಆಧುನೀಕರಣ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಫೆ. 26 ಸೋಮವಾರ ಚಾಲನೆ ನೀಡಲಿದ್ದಾರೆ.

ಆನ್‌ಲೈನ್‌ ಮೂಲಕ ಏಕಕಾಲದಲ್ಲಿಯೇ ದೇಶಾದ್ಯಂತ ನಡೆಯುವ ಅಡಿಗಲ್ಲು ಸಮಾರಂಭದಲ್ಲಿ ಆಲಮಟ್ಟಿಯಲ್ಲಿ ಸಂಸದರು, ಸ್ಥಳೀಯ ಜನಪ್ರತಿನಿಧಿಗಳು, ರೈಲ್ವೆ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಆಧುನೀಕರಣದ ಕಾಮಗಾರಿಗಳು ಆರಂಭಗೊಂಡಿವೆ.

ಪ್ರವಾಸಿ ತಾಣವಾಗಿರುವ ಆಲಮಟ್ಟಿಯ ರೈಲು ನಿಲ್ದಾಣದ ಆಧುನೀಕರಣ ಕಾಮಗಾರಿಯನ್ನು ನೈರುತ್ಯ ರೈಲ್ವೆ ವಲಯ ₹ 15.21 ಕೋಟಿ  ವೆಚ್ಚದಲ್ಲಿ ಆರಂಭಿಸಿದೆ. 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಜಿ+1 ಅಂತಸ್ತಿನ ರಚನೆಯು ಆಧುನಿಕ ಸೌಲಭ್ಯಗಳ ಕಟ್ಟಡ ನೋಡಲು ಸುಂದರವಾಗಿರಲಿದೆ.

ಫ್ಲಾಟ್ ಫಾರ್ಮ್ ಶೆಲ್ಟರ್‌ಗಳು (ಚಾವಣಿ), ಪಾರ್ಕಿಂಗ್ ವ್ಯವಸ್ಥೆ ಸುಧಾರಣೆ, ಈಗಿರುವ ಪಾದಚಾರಿ ಮೇಲ್ಸೆತುವೆ 12 ಮೀಗೆ ವಿಸ್ತರಿಸಲಾಗುವುದು ಎಂದು ನೈರುತ್ಯ ರೇಲ್ವೆ ವಲಯದ ಹುಬ್ಬಳ್ಳಿ ವಿಭಾಗೀಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಾಣೇಶ ಕವಲಗಿ ತಿಳಿಸಿದರು. ದಟ್ಟಣೆ ತಡೆಗಟ್ಟಲು ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರ ನಿರ್ಮಿಸಲಾಗುತ್ತದೆ. ವೇಟಿಂಗ್ ಹಾಲ್, ಕ್ಯಾಂಟೀನ್, ರಿಸರ್ವೇಷನ್ ಕೌಂಟರ್, ಹೈಟೆಕ್ ಶೌಚಾಲಯ ಸೇರಿದಂತೆ ವಿವಿಧ ಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದರು.

2 ಎಸ್ಕಲೇಟರ್, 2 ಲಿಫ್ಟ್: ರೈಲು ಸೂಚನಾ ಫಲಕಗಳು ಹಾಗೂ ವಿವಿಧ ಕೌಂಟರ್‌ಗಳ ಸೂಚನಾ ಫಲಕಗಳನ್ನು ಆಧುನೀಕರಣಗೊಳಿಸಲಾಗುತ್ತದೆ.
ನಿಲ್ದಾಣವು ದಿವ್ಯಾಂಗ-ಸ್ನೇಹಿಯಾಗಲಿದ್ದು, 2 ಲಿಫ್ಟ್‌ಗಳು ಮತ್ತು 2 ಎಸ್ಕಲೇಟರ್‌ಗಳು ಪ್ರಯಾಣಿಕರಿಗೆ ಅನುಕೂಲ ಒದಗಿಸಲಿವೆ. ಪ್ಲಾಟ್‌ಫಾರ್ಮ್‌ಗೆ ಸಬ್ ವೇ ಸಂಪರ್ಕದೊಂದಿಗೆ ಎರಡನೇ ಪ್ರವೇಶ ದ್ವಾರ ನಿರ್ಮಾಣಗೊಳ್ಳಲಿದೆ. ಈಗಿರುವ ಫ್ಲಾಟ್ ಫಾರ್ಮ್ ವಿಸ್ತರಣೆ ಕಾರ್ಯವೂ ನಡೆಯಲಿದೆ ಎಂದು ಅವರು ತಿಳಿಸಿದರು.

ಆಲಮಟ್ಟಿ ರೈಲು ನಿಲ್ದಾಣದ ಆಧುನೀಕರಣದಿಂದ ಪ್ರಯಾಣಿಕರ ಸ್ನೇಹಿ ನಿಲ್ದಾಣವಾಗಲಿದೆ. ಎಲ್‌ಇಡಿ ದೀಪವನ್ನು ನಿಲ್ದಾಣದಾದ್ಯಂತ ಅಳವಡಿಸಲಾಗುತ್ತದೆ. ಪಾರ್ಕಿಂಗ್ ವ್ಯವಸ್ಥೆ ಸುಧಾರಿಸಲಿದೆ

-ಪ್ರಾಣೇಶ ಕವಲಗಿ ಸಾರ್ವಜನಿಕ ಸಂಪರ್ಕಾಧಿಕಾರಿ ಹುಬ್ಬಳ್ಳಿ ವಿಭಾಗೀಯ ರೈಲ್ವೆ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT