ಹೊರ್ತಿ: ಹೊರ್ತಿ ಈ ಗ್ರಾಮವು ಸುಮಾರು 15 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು, ವಿಜಯಪುರ ಸೋಲ್ಲಾಪುರ ರಾಷ್ಟ್ರೀಯ ಹೆದ್ದಾರಿ -52 ರಲ್ಲಿದೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಹಾಗೂ ವೈದ್ಯರ ಕೊರತೆ ಇರುವುದರಿಂದ ಸ್ಥಳೀಯ ಹಾಗೂ ಸುತ್ತಲೀನ ಹತ್ತಾರು ಗ್ರಾಮಗಳ ಜನರಿಗೆ ಸೂಕ್ತ ಆರೋಗ್ಯ ಸೌಲಭ್ಯ ಸಿಗುತ್ತಿಲ್ಲ.

‘ಹೊರ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಈ ಹಿಂದೆ ಎಂಬಿಬಿಎಸ್ ವೈದ್ಯರಿದ್ದರು. ಆಗ ಜ್ವರ ಮೈ-ಕೈ ನೋವು ಬಂದು ಬಳಲಿದರೆ ಒಂದು ಇಂಜೆಕ್ಷನ್ ಮತ್ತು 3 ದಿನಗಳ ಮಾತ್ರೆ ಕೊಟ್ಟು ಕಳುಹಿಸುತ್ತಿದ್ದರು. ಅತಿ ಅವಶ್ಯಕತೆ ಇದ್ದವರಿಗೆ ಸಲೈನ್ ಹಚ್ಚುತ್ತಿದ್ದರು. ಕೂಡಲೇ ಆರಾಮವಾಗುತ್ತಿತ್ತು. ಈಗ ಅದೂ ಸಾಧ್ಯವಿಲ್ಲದಂತಾಗಿದೆ’ ಎಂದು ಶಿವಲಿಂಗಪ್ಪ ಶಿ.ಪೂಜಾರಿ ಬೇಸರ ವ್ಯಕ್ತ ಪಡಿಸಿದರು.

‘ಒಬ್ಬರು ಎಂಬಿಬಿಎಸ್ ವೈದ್ಯರು, ಲ್ಯಾಬ್ ಟೆಕ್ನಿಶಿಯನ್ , ಒರ್ವ ಕಿರಿಯ ಆರೋಗ್ಯ ಸಹಾಯಕಿ ಇಲ್ಲದೇ ಇರುವುದರಿಂದ ಬಡ ರೋಗಿಗಳಿಗೆ ಉತ್ತಮ ಆರೋಗ್ಯ ಚಿಕಿತ್ಸಾ ಸೇವೆ ಸಿಗದೇ ಪರದಾಡುವಂತಾಗಿದೆ. ಬಾಣಂತಿಯರು ಹಾಗೂ ಬಡರೋಗಿಗಳು ಸರಿಯಾದ ಚಿಕಿತ್ಸೆಗಾಗಿ ದೂರದ ವಿಜಯಪುರ, ಚಡಚಣ, ఇంಡಿ ಆಸ್ಪತ್ರೆಗೆ ತೆರಳುವಂತಾಗಿದೆ’ ಎಂದು- ಹೊರ್ತಿ ಗ್ರಾಮದ ಆಟಪ ಚಾಲಕ ಶರಣಬಸು ಎಂ. ಡೋಣಗಿ, ಕಾಂತು ರೂಗಿ ಮತ್ತು ಶಿವಲಿಂಗಪ್ಪ ಶಿ.ಪೂಜಾರಿಬೇಸರ ವ್ಯಕ್ತ ಪಡಿಸಿದರು.

ಹೊರ್ತಿ ಸರ್ಕಾರಿ ಆಸ್ಪತ್ರೆಗೆ ಎಂಬಿಬಿಎಸ್ ವೈದ್ಯ ಲ್ಯಾಬ್ ಟೆಕ್ನಿಶಿಯನ್, ಶುಶ್ರೂಕಿಯರ ಕೊರತೆ ದೂರದ ವಿಜಯಪುರ, ಚಡಚಣ, ఇంಡಿಗೆ ತೆರಳುವ ಅನಿವಾರ್ಯತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.