ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ನೌಕರರ ಭತ್ಯೆ ಹೆಚ್ಚಿಸಿ: ಅಶೋಕ ಜಾನರಾವ್

Published 25 ಮೇ 2024, 15:48 IST
Last Updated 25 ಮೇ 2024, 15:48 IST
ಅಕ್ಷರ ಗಾತ್ರ

ಸೋಲಾಪುರ: ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಭತ್ಯೆ ರೂಪದಲ್ಲಿ ಅತ್ಯಲ್ಪ ಮೊತ್ತವನ್ನು ಪಾವತಿಸಲಾಗುತ್ತಿದ್ದು, ಈ ಭತ್ಯೆಯನ್ನು ಪಾಲಿಕೆ ಹೆಚ್ಚಿಸಬೇಕು ಎಂದು ಪೌರಕಾರ್ಮಿಕರ ಸಂಘಟನೆಯ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಜಾನರಾವ್ ಆಗ್ರಹಿಸಿದ್ದಾರೆ.  

ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಪಾಲಿಕೆಯ ನೌಕರರು ಹಣದುಬ್ಬರ, ಬೆಲೆ ಏರಿಕೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ನೌಕರರಿಗೆ ಭತ್ಯೆಯನ್ನು ಅಗತ್ಯಕ್ಕೆ ತಕ್ಕಂತೆ ಕಾಲಕಾಲಕ್ಕೆ ಹೆಚ್ಚಿಸಬೇಕು ಎಂದಿದ್ದಾರೆ.

ಪಾಲಿಕೆಯಲ್ಲಿ ಅಂದಾಜು 4 ಸಾವಿರ ಜನರು ಕೆಲಸ ಮಾಡುತ್ತಿದ್ದಾರೆ. ಪೌರಕಾರ್ಮಿಕರು, ಆರೋಗ್ಯ ನಿರೀಕ್ಷಕರು ಹಾಗೂ ವಿವಿಧ ವಿಭಾಗದ ಉದ್ಯೋಗಿಗಳಿಗೆ ವಿವಿಧ ಭತ್ಯೆಗಳನ್ನು ನೀಡಲಾಗುತ್ತಿದೆ. ಆದರೇ ಕಳೆದ ಅನೇಕ ವರ್ಷಗಳಿಂದ ಈ ಭತ್ಯೆಗಳ ಮೊತ್ತದಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ. 

ಆರೋಗ್ಯ ನಿರೀಕ್ಷಕರಿಗೆ ಪೆಟ್ರೋಲ್ ಭತ್ಯೆಗೆ ಕಳೆದ 25 ವರ್ಷಗಳಿಂದ ಮಾಸಿಕ ₹ 100 ನೀಡಲಾಗುತ್ತಿದೆ. ಸದ್ಯ ಪೆಟ್ರೋಲ್ ದರ ಗಗನಕ್ಕೇರಿದ್ದು ದಿನಕ್ಕೆ ₹ 100 ಅಗತ್ಯವಿದೆ. ಆರೋಗ್ಯ ನಿರೀಕ್ಷಕರು ದಿನಕ್ಕೆ 30 ರಿಂದ 40 ಕಿ.ಮೀ ಪ್ರಯಾಣಿಸುತ್ತಾರೆ. ಪ್ರಸ್ತುತ ಸಾರಿಗೆ ಭತ್ಯೆಯಾಗಿ ಮಾಸಿಕ ₹400 ನೀಡಲಾಗುತ್ತಿದೆ. ಸ್ವಚ್ಛತೆ ನೌಕರರಿಗೆ ಸಮವಸ್ತ್ರ ತೊಳೆಯುವ ಭತ್ಯೆ ಮಾಸಿಕ ₹ 30 ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸೋಲಾಪುರ ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುವ ನೌಕರರಿಗೆ ಅನೇಕ ವರ್ಷಗಳಿಂದ ಭತ್ಯೆಗಳನ್ನು ಹೆಚ್ಚಿಸಿಲ್ಲ. ತಕ್ಷಣ ಪಾಲಿಕೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ನೌಕರರ ಭತ್ಯೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT