ವಿಜಯಪುರ: ‘ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿಯರು ಬಸವಣ್ಣನವರ ವಚನ ಶಿಲಾಶಾಸನ ಮಂಟಪ ನಿರ್ಮಿಸಿ ವಚನ ಸಂರಕ್ಷಣೆ ಮಾಡಿದ ಕೀರ್ತಿ ಇಂಗಳೇಶ್ವರ ಮಠಕ್ಕೆ ಸಲ್ಲುತ್ತದೆ’ ಎಂದು ಸಚಿವ ಶಿವಾನಂದ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಇಂಗಳೇಶ್ವರ ವಿರಕ್ತಮಠದ ಉತ್ಸವದ ಅಂಗವಾಗಿ ಮಂಗಳವಾರ ಜರುಗಿದ ಧರ್ಮ ಸಭೆಯಲ್ಲಿ ಮಾತನಾಡಿದ ಅವರು, ‘ಬಸವಾದಿ ಶರಣರ ತತ್ವ ಸರ್ವಕಾಲಿಕ ಉಪಯುಕ್ತವಾಗಿವೆ’ ಎಂದರು.

ಧಾರವಾಡ ವಿರಕ್ತಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ಬಸವಾದಿ ಶರಣರ ಕಾಯಕ ತತ್ವ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಹಾತ್ಮರ ನೆನೆಯುವುದೇ ಪುಣ್ಯ. ಇಂಗಳೇಶ್ವರ ವಿರಕ್ತಮಠದ ವಚನ ಶಿಲಾಶಾಸನ ಮಂಟಪ ಸ್ಥಾಪನೆ ಮಾಡಿದ್ದು ಶ್ಲಾಘನೀಯ ಕಾರ್ಯ’ ಎಂದು ಹೇಳಿದರು.

ಇಂಗಳೇಶ್ವರ ವಿರಕ್ತಮಠದ ಹಿರಿಯ ಸ್ವಾಮೀಜಿ ಚನ್ನಬಸವ ಸ್ವಾಮೀಜಿ ಮಾತನಾಡಿ, ‘ಬಸವಾದಿ ಶರಣರ ವಚನಗಳನ್ನು ರಕ್ಷಿಸುವುದೇ ವಿರಕ್ತಮಠದ ಉದ್ದೇಶ’ ಎಂದರು.

ಅಥರ್ಗಾ ವಿರಕ್ತಮಠದ ಮುರಘೇಂದ್ರ ಸ್ವಾಮೀಜಿ, ಕುದುರೆಮುಖ ಸ್ವಾಮೀಜಿ, ಪಡೇಕನೂರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಹರಸೂರ ಕಲ್ಮಠ ಕರಿಸಿದ್ದೇಶ್ವರ ಸ್ವಾಮೀಜಿ, ಹೂವಿನ ಹಿಪ್ಪರಗಿ ಪತ್ರಿಮಠದ ದ್ರಾಕ್ಷಾಯಿಣಿ ಮಾತಾಜಿ, ಚಡಚಣ ವಿರಕ್ತಮಠದ ಷಡಕ್ಷರಿ ಸ್ವಾಮೀಜಿ, ವಡವಡಗಿ ವಿರಕ್ತಮಠ ವೀರಸಿದ್ಧ ಸ್ವಾಮೀಜಿ, ಲೋಟಗೇರಿ ಗುರುಮೂರ್ತಿ ಶಾಸ್ತ್ರೀಗಳು, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಇತರರು ಇದ್ದರು.

‘ಮಹಿಳೆಯರಿಂದ ವೃದ್ಧರ ಕಡೆಗಣನೆ’

ವಿದ್ಯಾವಂತ ಮಹಿಳೆಯರು ಕುಟುಂಬದ ವೃದ್ಧರನ್ನು ಕಡೆಗಣಿಸುತ್ತಿರುವುದು ಅತ್ಯಂತ ಆತಂಕದ ವಿಷಯ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಅಧ್ಯಕ್ಷೆ ಭಾರತಿ ಪಾಟೀಲ ಹೇಳಿದರು. ಇಂಗಳೇಶ್ವರ ವಿರಕ್ತಮಠದ ಉತ್ಸವದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು ‘ಮಹಿಳೆಯರು ಜಂಟಿ ಕುಟುಂಬದೊಂದಿಗೆ ಪ್ರೀತಿ ಮಮತೆಯಿಂದ ಬದುಕಬೇಕು. ಕುಟುಂಬದಲ್ಲಿ ಸಾಮರಸ್ಯ ವಾತಾವರಣ ಸೃಷ್ಟಿಸಬೇಕು’ ಎಂದರು. ಹೂವಿನ ಹಿಪ್ಪರಗಿ ಪತ್ರಿಮಠದ ದಾಕ್ಷಾಯಿಣಿ ಮಾತಾಜಿ ‘ಮಹಿಳೆಗೆ ತಾಯಿಯ ಸಂಸ್ಕಾರ ಪ್ರಭಾವ ಬೀರುವುದು. ತಾಯಿ ದೇವರ ಸ್ವರೂಪಿ. ಕುಟುಂಬದ ನಿರ್ವಹಣೆ ಜವಾಬ್ದಾರಿ ಮಹಿಳೆಯರ ಮೇಲಿದೆ’ ಎಂದರು. ಸಾಹಿತಿ ಮಡಿವಾಳಮ್ಮ ನಾಡಗೌಡ ಮಾತನಾಡಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಸಾಹಿತಿ ಶಿಲ್ಪಾ ಭಸ್ಮೆಕಮಲಾ ಮುರಾಳ ಸಾಹಿತಿ ರಶ್ಮೀ ಬದ್ನೂರ ರಾಜೇಶ್ವರಿ ಮೋಪಗಾರ ಶಾಂತಾ ಬಿರಾದಾರಗಿರಿಜಾ ಸಜ್ಜನ ಮಮತಾ ಮುಳಸಾವಳಗಿ ಶಾಂತಾ ಚೌರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.