ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಡಿ: ಜಟ್ಟಿಂಗೇಶ್ವರ ಅದ್ದೂರಿ ಜಾತ್ರಾ ಮಹೋತ್ಸವ

Published : 8 ಸೆಪ್ಟೆಂಬರ್ 2024, 14:37 IST
Last Updated : 8 ಸೆಪ್ಟೆಂಬರ್ 2024, 14:37 IST
ಫಾಲೋ ಮಾಡಿ
Comments

ಇಂಡಿ: ಇಲ್ಲಿನ ನರಸಿಂಹ ಅವತಾರಿ ಜಟ್ಟಿಂಗೇಶ್ವರರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.

ಜಟ್ಟಿಂಗೇಶ್ವರರ ಜಾತ್ರೆ ವರ್ಷದಲ್ಲಿ ಮೂರು ಬಾರಿ ನಡೆಯುವ ವಾಡಿಕೆಯಿದೆ. ಪ್ರತೀ ವರ್ಷ ಯುಗಾದಿ, ದೀಪಾವಳಿ ಹಾಗೂ ಗಣೇಶ ಚತುರ್ಥಿಯಂದು 11 ಗ್ರಾಮಗಳ ಪಲ್ಲಕ್ಕಿ ಉತ್ಸವ ನಡೆಯುತ್ತದೆ.

ಪಲ್ಲಕ್ಕಿ ಉತ್ಸವದಲ್ಲಿ ಸಿಂದಗಿ ತಾಲ್ಲೂಕಿನ ಬಳಗಾನೂರ ಗ್ರಾಮದ ಕೇದಾರ ಲಿಂಗೇಶ್ವರ, ಬನ್ನಟ್ಟಿ ಗ್ರಾಮದ ಲಾಯಮ್ಮತಾಯಿ, ಇಂಡಿ ತಾಲ್ಲೂಕಿನ ತೆನಹಳ್ಳಿ ಗ್ರಾಮದ ಜನವೇರಿಸಿದ್ದ, ಬೋಳೆಗಾಂವ ಗ್ರಾಮದ ಬೀರಲಿಂಗೇಶ್ವರ, ತಡವಲಗಾ ಗ್ರಾಮದ ಶವರಸಿದ್ದ, ರೂಗಿ ಗ್ರಾಮದ ಸರಗನಾಳ ರೇವಣಸಿದ್ದ ಹಾಗೂನರಸಮ್ಮ ತಾಯಿಯ ಚೌಕಿ, ಪ್ರಮುಖವಾಗಿ ಉಪಸ್ಥಿತಿಯಾಗುತ್ತವೆ.

ಒಟ್ಟು 11 ಗ್ರಾಮಗಳ ದೇವರ ಪಲ್ಲಕ್ಕಿಗಳು ಗಣೇಶ ಚತುರ್ಥಿಯಂದು ಹೂವಿನಲ್ಲಿ ಕೂಡುವುದು ವಿಶೇಷ. ದೇವರಿಗೆ ಮಹಾ ಅಭಿಷೇಕ, ಬಂದ ಭಕ್ತರಿಗೆ ದಾಸೋಹ, ವಾಲಗ, ಡೊಳ್ಳಿನ ಗಾಯನ, ಹಾಗೂ ಗಣೇಶ ಚತುರ್ಥಿ ದಿನ ಹಿರೇರೂಗಿ ಗ್ರಾಮದ ನಡುರ ಲಕ್ಷ್ಮಿ ದೇವಾಲಯದ ಹತ್ತಿರ ಪಟ್ಟದ ಪೂಜಾರಿಗಳಿಂದ ಮಳೆ ಬೆಳೆಗಳಿಗೆ ಸಂಬಂಧಿಸಿದ ದೇವರ ಹೇಳಿಕೆಗಳು ನಡೆಯುವವು.

ಈ ಜಾತ್ರೆಗೆ ಮಹಾರಾಷ್ಟ್ರ, ಗೋವಾ, ಕರ್ನಾಟಕದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಕೂನೆಯಲ್ಲಿ ಎಲ್ಲ ದೇವರುಗಳು ಭೇಟಿ ನಡೆಯುವುದು ವಿಶೇಷ. ದೇವಾಸ್ಥಾನ ಕಮಿಟಿಯ ಸದಸ್ಯರು ಗಣೇಶ ಚತುರ್ಥಿಯ ಸಂದರ್ಭದಲ್ಲಿ ನಡೆಯುವ 3 ದಿನಗಳ ಈ ಜಾತ್ರಾ ಮಹೋತ್ಸವದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT