ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಟ್ ಬ್ಯಾಂಕ್‌ಗಾಗಿ ರಾಜಕಾರಣ ಸಲ್ಲದು: ಶಾಸಕ ಅಶೋಕ ಮನಗೂಳಿ

Published 10 ಡಿಸೆಂಬರ್ 2023, 14:12 IST
Last Updated 10 ಡಿಸೆಂಬರ್ 2023, 14:12 IST
ಅಕ್ಷರ ಗಾತ್ರ

ಸಿಂದಗಿ: ರಾಜಕೀಯ ಲಾಭಕ್ಕಾಗಿ ಮತ್ತೊಬ್ಬ ವ್ಯಕ್ತಿಯನ್ನು ಟೀಕಿಸುವುದು ಸರಿಯಲ್ಲ. ವೋಟ್ ಬ್ಯಾಂಕ್‌ಗಾಗಿ ರಾಜಕಾರಣ ಮಾಡುವುದು ಸಲ್ಲದು. ಮೌಲ್ವಿ ತನ್ವೀರ್ ಪೀರ್ ಹಾಸ್ಮಿ ಅವರ ಬಗ್ಗೆ ಗಂಭೀರ ಆರೋಪ ಮಾಡಲಾಗಿದೆ. ಆರೋಪದಲ್ಲಿ ನಿಜ ಇರಬೇಕು. ಈ ಬಗ್ಗೆ ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕ ಅಶೋಕ ಮನಗೂಳಿ ಪರೋಕ್ಷವಾಗಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಟಾಂಗ್ ಕೊಟ್ಟರು.

ತಾಲ್ಲೂಕಿನ ಗುಬ್ಬೇವಾಡ ಗ್ರಾಮದ ಬಸ್ ನಿಲ್ದಾಣದ ಬಳಿ ಶನಿವಾರ ಮಟಿಪ್ಪು ಸುಲ್ತಾನ್‌ ಅಭಿಮಾನಿಗಳ ಮಹಾವೇದಿಕೆ ಹಮ್ಮಿಕೊಂಡಿದ್ದ ಟಿಪ್ಪು ಸುಲ್ತಾನ್‌ ಜಯಂತಿ ಸಮಾರಂಭ ಹಾಗೂ ಟಿಪ್ಪು ಸುಲ್ತಾನ್‌ ವೃತ್ತ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಟಿಪ್ಪು ಸುಲ್ತಾನ್‌ ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಸೇನಾನಿ. ಅವರ ಬಗ್ಗೆ ಟೀಕಿಸುವುದು ಒಳ್ಳೆಯದಲ್ಲ ಎಂದು ಹರಿಹಾಯ್ದರು.

ಮಹಮ್ಮದ ಪಟೇಲ್ ಬಿರಾದಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ದಸ್ತಗೀರ ಮುಲ್ಲಾ ಧ್ವಜಾರೋಹಣ ನೆರವೇರಿಸಿದರು.

ಸೈಯದ ಸೂಫಿ ಭಾಷಾ, ಆಲಮೇಲ ವಿರಕ್ತಮಠದ ಜಗದೇವಮಲ್ಲಿಬೊಮ್ಮಯ್ಯ ಸ್ವಾಮೀಜಿ, ಕನ್ನಯ್ಯ ಒಡೆಯರ ಸಾನ್ನಿಧ್ಯ ವಹಿಸಿದ್ದರು. ಸದ್ದಾಂಪಟೇಲ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಿಂದಗಿ ಪುರಸಭೆ ಸದಸ್ಯ ಹಾಸಿಂಪೀರ ಆಳಂದ, ಆನಂದಗೌಡ ಪಾಟೀಲ ಡಂಬಳ, ನಿತ್ಯಾನಂದ ಕಟ್ಟಿಮನಿ, ಮಾಂತೂ ಮಳ್ಳಿ, ಲಾಲಪಟೇಲ ಬಿರಾದಾರ, ಬಾಪುಗೌಡ ಪಾಟೀಲ ಕಣ್ಣಗುಡ್ಡಿಹಾಳ, ರಮೇಶ ಮೇಲಿನಮನಿ, ರಜಾಕ ಮುಜಾವರ, ಮೈಬೂಬ ಸಿಂದಗಿಕರ, ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT