ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ | ಕಾಯಕ ಶರಣರ ಜಯಂತಿ ಆಚರಣೆ ನಿರ್ಲಕ್ಷ್ಯ: ಆಕ್ಷೇಪ

Published 10 ಫೆಬ್ರುವರಿ 2024, 15:52 IST
Last Updated 10 ಫೆಬ್ರುವರಿ 2024, 15:52 IST
ಅಕ್ಷರ ಗಾತ್ರ

ಸಿಂದಗಿ: ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕಾಯಕ ಶರಣರ ಜಯಂತಿ ಬಗ್ಗೆ ನಿರ್ಲಕ್ಷ್ಯಧೋರಣೆ ಅನುಸರಿಸಲಾಗಿದೆ ಎಂದು ಸಭೆಯಲ್ಲಿ ಗದ್ದಲ ಉಂಟಾಗಿ ಕಾಯಕ ಶರಣರ ಅನುಯಾಯಿಗಳು ಸಭೆ ಬಹಿಷ್ಕರಿಸಲು ಮುಂದಾದಾಗ ಪುರಸಭೆ ಸದಸ್ಯ ರಾಜಣ್ಣ ನಾರಾಯಣಕರ ಎಲ್ಲರ ಮನವೊಲಿಸಿದ ನಂತರ ಕಾರ್ಯಕ್ರಮ ನಡೆಯಿತು.

ಸರ್ಕಾರಿ ವಿವಿಧ ಇಲಾಖೆಗಳ ಬಹುತೇಕ ಅಧಿಕಾರಿಗಳು ಜಯಂತಿ ಕಾರ್ಯಕ್ರಮಕ್ಕೆ ಗೈರು ಉಳಿದಿರುವುದು ಸರಿಯಲ್ಲ. ಗೈರಾದವರಿಗೆ ತಾಲ್ಲೂಕು ಆಡಳಿತ ನೋಟಿಸ್‌ ನೀಡಬೇಕು ಎಂದು ಸಾಯಬಣ್ಣ ಪುರದಾಳ ಒತ್ತಾಯಿಸಿದರು.

ಕಾಯಕ ಶರಣರ ವೃತ್ತಗಳನ್ನು ಸ್ವಚ್ಛಗೊಳಿಸಲು ಮುಂದಾಗದ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೇವರಮನಿ ಸಾಯಬಣ್ಣ ಆಗ್ರಹಿಸಿದರು.

ಕಾಯಕ ಶರಣ ಜಯಂತಿ ಸರಳವಾಗಿ ಆಚರಿಸಿರುವ ಕುರಿತಾಗಿ ಸಭೆಯಲ್ಲಿ ವ್ಯಾಪಕ ಆಕ್ಷೇಪ ಕೇಳಿ ಬಂದಿತು.
ತಹಶೀಲ್ದಾರ್‌ ಗ್ರೇಡ್-2 ಇಂದಿರಾಬಾಯಿ ಬಳಗಾನೂರ ಸಮ್ಮುಖದಲ್ಲಿ ಕಾಯಕ ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಪುರಸಭೆ ಸದಸ್ಯ ರಾಜಣ್ಣ ನಾರಾಯಣಕರ, ಸುನಂದಾ ಯಂಪೂರೆ, ರಾಜೂ ಗುಬ್ಬೇವಾಡ, ಅಂಬರೀಶ ಚೌಗಲೆ, ಖಾಜೂ ಬಂಕಲಗಿ, ಸದಾಶಿವ ಕಬಾಡೆ, ರವಿ ಕಟಕೆ ಹಾಗೂ ಉಪತಹಶೀಲ್ದಾರ ಜಿ.ಎಸ್.ರೋಡಗಿರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT