ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲತವಾಡ: ಡಿಜಿಟಲ್ ಪೇ ಮೂಲಕ ಬಸ್‌ ಪ್ರಯಾಣ

Published 18 ಫೆಬ್ರುವರಿ 2024, 4:16 IST
Last Updated 18 ಫೆಬ್ರುವರಿ 2024, 4:16 IST
ಅಕ್ಷರ ಗಾತ್ರ

ನಾಲತವಾಡ: ಬೆಳಗಾವಿಯಿಂದ ನಾಲತವಾಡಕ್ಕೆ ಹಲವು ವಿಶೇಷತೆ ಒಳಗೊಂಡ ಬೆಳಗಾವಿ ಡಿಪೊದ ನೂತನ ಬಸ್ ಓಡಿಸಲಾಗುತ್ತಿದೆ.

ಈ ಬಸ್‌ನಲ್ಲಿ ಮಹಿಳೆಯರ ಸುರಕ್ಷತಾ ದೃಷ್ಟಿಯಿಂದ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ. ಬಸ್‍ನಲ್ಲಿ ಹೋಗೋಕೆ ಜೇಬ್‍ನಲ್ಲಿ ದುಡ್ಡು ಇರಲೇ ಬೇಕು ಎನ್ನುವಂತಿಲ್ಲ. ಬಸ್‍ಗಳಲ್ಲಿ ಟಿಕೆಟ್ ಪಡೆಯಲು ಬೆಳಗಾವಿಯ ಈ ಬಸ್ ಇನ್ನಷ್ಟು ಅನುಕೂಲ ಮಾಡಿಕೊಟ್ಟಿದೆ. ಇನ್ಮುಂದೆ ನಿಮ್ಮ ಮೊಬೈಲ್‌ನಲ್ಲಿ ಯುಪಿಐ ಪೇಮೆಂಟ್ ಅವಕಾಶ ಇದ್ರೆ ಸಾಕು ಬಸ್‌ನಲ್ಲಿ ಟಿಕೆಟ್ ಪಡೆಯಬಹುದು.  ಫೋನ್ ಪೇ, ಗೂಗಲ್ ಪೇ ಸೇರಿದಂತೆ ಯುಪಿಐ ಮೂಲಕ ಪೇಮೆಂಟ್ ಮಾಡಬಹುದು.

ಪ್ರಯಾಣ ದರದ ಹಣ ನೇರವಾಗಿ ನಿರ್ವಾಹಕನ ಮೊಬೈಲ್ ಫೋನ್ ಗೆ ಜಮೆಯಾಗಲಿದೆ. ಇದನ್ನು ನೋಡಿ ಕಂಡಕ್ಟರ್ ಟಿಕೆಟ್‌ ಕೊಡುತ್ತಾರೆ. ಬೆಳಗಾವಿ ಡಿವಿಜನ್ ನ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಆರಂಭ ಮಾಡಲಾಗಿದೆ. ಆಧಾರ್‌ ಕಾರ್ಡ್‌ ಇರುವ ಮಹಿಳೆಯರು, ಅಂಗವಿಕಲರ ಗುರುತಿನ ಚೀಟಿ ಉಳ್ಳವರು, ಪತ್ರಕರ್ತರ ಗುರುತಿನ ಚೀಟಿಯನ್ನು ಪಡೆದವರು ಸಹ ಈ ಬಸ್ ನಲ್ಲಿ ಸಂಚರಿಸಬಹುದು.

ಅನುಕೂಲಗಳು

ನಗದು ರಹಿತ ಪಾವತಿ, ಮೊಬೈಲ್‌ನಲ್ಲಿ ಯುಪಿಐ ಆ್ಯಪ್ ಇದ್ದರೆ ಸಾಕು ಬಸ್‌ನಲ್ಲಿ ಸಂಚರಿಸಬಹುದು. ಮೊಬೈಲ್ ಯುಪಿಐ ಮೂಲಕ ಪೇಮೆಂಟ್ ಮಾಡಿ ಟಿಕೆಟ್ ಪಡೆಯಬಹುದು. ಚಿಲ್ಲರೆ ಸಮಸ್ಯೆಯಿಂದ ಮುಕ್ತಿ ಸಿಗುತ್ತೆ. ಚಿಲ್ಲರೆ ಇಲ್ಲ ಅನ್ನೋ ಪ್ರಯಾಣಿಕರು ಮತ್ತು ಕಂಡಕ್ಟರ್ ಜಗಳದ ಸಮಸ್ಯೆ ದೂರವಾಗುತ್ತೆ, ಇಬ್ಬರು, ಮೂವರು ಪ್ರಯಾಣಿಕರ ನಡುವೆ ಜಂಟಿಯಾಗಿ ಚಿಲ್ಲರೆ ಕೊಡುವ ಪರಿಪಾಠ ಇರುವುದಿಲ್ಲ, ಪ್ರಯಾಣಿಕ ಮನೆಗೆ ಬಂದ ಮೇಲೆ  ‘ಅಯ್ಯೋ ಕಂಡಕ್ಟರ್ ಚಿಲ್ಲರೆ ಕೊಡಬೇಕಿತ್ತು, ಮರೆತೆ..!’ ಎನ್ನುವ ತಾಕಲಾಟವೂ ಇರದು. ಸ್ಟೇಜ್ ಬಂತು ಕಂಡಕ್ಟರ್ ಟಿಕೆಟ್ ನೀಡಿಲ್ಲ ಅನ್ನೋ ಭಯವಿರಲ್ಲ. ಕಂಡಕ್ಟರ್ ಹಾಗೂ ಪ್ರಯಾಣಿಕರಿಬ್ಬರಿಗೂ ಸಮಯ ಉಳಿತಾಯವಾಗುತ್ತೆ. ಸಾರಿಗೆ ಸಂಸ್ಥೆಗೆ ಆಗುವ ನಷ್ಟ ತಡೆಯುವ ಜಾಣತನ ಇದಾಗಿದೆ.

ಸಮಸ್ಯೆಗಳು

ಸ್ಮಾರ್ಟ್ (ಆಂಡ್ರಾಯ್ಡ್)ಫೋನ್‌ಗಳಿರಬೇಕು. ಕಂಡಕ್ಟರ್ ಹಾಗೂ ಪ್ರಯಾಣಿಕನ ಇಬ್ಬರ ಮೊಬೈಲ್ ನಲ್ಲಿ
ನೆಟ್‌ವರ್ಕ್ ಇರಬೇಕು. ಇಬ್ಬರಲ್ಲಿ ಒಬ್ಬರ ನೆಟ್‌ವರ್ಕ್‌ ಇರದಿದ್ದರೂ ಈ ಸೌಲಭ್ಯ ಸಿಗದು. ಆಂಡ್ರಾಯ್ಡ್ ಮೊಬೈಲ್ ಫೋನ್ ಪೇ ಆಪ್ ಹೊಂದಿರಲೇಬೇಕು.

ಬೆಳಗಾವಿಯನ್ನು ನಿತ್ಯ ಬೆಳಿಗ್ಗೆ 7.30ಕ್ಕೆ ಬಿಡುವ ಬಸ್ ನಾಲತವಾಡವನ್ನು ಮಧ್ಯಾಹ್ನ 1.45 ಕ್ಕೆ ತಲುಪಲಿದೆ. ಪುನಃ ಮಧ್ಯಾಹ್ನ 2.15 ಕ್ಕೆ ನಾಲತವಾಡದಿಂದ ಹೊರಡುವ ಬಸ್ ಬಾಗಲಕೋಟೆ, ಗದ್ದನಕೇರಿ, ಲೋಕಾಪುರ, ಸಾಲಹಳ್ಳಿ, ಯರಗಟ್ಟಿ, ಹಲಕಿ ಕ್ರಾಸ್, ಚಚಡಿ ಕ್ರಾಸ್, ನೇಸರಗಿ, ಕರಡಿ ಗುದ್ದಿ, ಸಾಂಬ್ರಾ ವಿಮಾನ ನಿಲ್ದಾಣ ಮಾರ್ಗ ಮಧ್ಯದಲ್ಲಿ ಹಲವು ವಿಶಿಷ್ಟತೆಗಳನ್ನು ಹೊತ್ತು ಚಲಿಸಲಿದೆ. ಇದರ ಪ್ರಯಾಣ ದರವು ಸಾಮಾನ್ಯ ವೇಗದ ಬಸ್ ದರದಷ್ಟೇ ಇದೆ.

ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಕೆಎಸ್ಆರ್‌ಟಿಸಿಯ ಎಲ್ಲ ಬಸ್‌ಗಳಿಗೂ ವಿಸ್ತರಿಸಬೇಕು 
ಶರಣು ಗಂಗನಗೌಡರ, ಚಾಲಕರ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ, ನಾಲತವಾಡ 
ಬೆಳಗಾವಿಗೆ ಮಹಿಳೆಯರು ಸುರಕ್ಷಿತವಾಗಿ ಹೋಗಿ ಬರಲು ಈ ಬಸ್ ಅನುಕೂಲವಾಗಿದೆ. ಎಲ್ಲ ಬಸ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಬೇಕು. 
ಕಮಲಾ ಭಜಂತ್ರಿ, ಅಧ್ಯಕ್ಷ, ಯವಜನ ಸೇನೆಯ ಮಹಿಳಾ ಘಟಕ, ನಾಲತವಾಡ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT