ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡುಒಕ್ಕಲಿಗ ಗುರುಪೀಠಕ್ಕೆ ಭೂಮಿಪೂಜೆ

ದೇಶದ ಬೆನ್ನೆಲುಬು ರೈತ: ಸಿದ್ಧೇಶ್ವರ ಸ್ವಾಮೀಜಿ
Last Updated 2 ಜನವರಿ 2021, 13:02 IST
ಅಕ್ಷರ ಗಾತ್ರ

ವಿಜಯಪುರ: ಭಾರತ ದೇಶದ ಬೆನ್ನೆಲುಬು ಎಂದರೆ ರೈತರು ಆದ್ದರಿಂದ ಪ್ರತಿಯೊಬ್ಬ ನಾಗರಿಕನು ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯನ್ನು ಹೃದಯದಿಂದ ಮತ್ತು ಹೆಮ್ಮೆಯಿಂದ ಹೇಳಬೇಕು ಎಂದು ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ವಿಜಯಪುರ ತಾಲ್ಲೂಕಿನ ಕವಲಗಿ ಗ್ರಾಮದ ಜಗದ್ಗುರು ಶಿವಯೋಗಿ ಶ್ರೀಸಿದ್ಧರಾಮೇಶ್ವರ ಕುಡು ಒಕ್ಕಲಿಗ ಮಹಾಸಂಸ್ಥಾನ ಗುರುಪೀಠದ ಭೂಮಿಪೂಜೆನೆರವೇರಿಸಿ ಅವರು ಮಾತನಾಡಿದರು.

ಕುಡು ಒಕ್ಕಲಿಗರು ಎಂದರೆ ಪ್ರಪಂಚದ ಎಲ್ಲ ಜನರಿಗೆ ಆಹಾರ ಧಾನ್ಯ, ಕಾಳುಕಡಿಯನ್ನು ಕೊಡುವಂತವರು. ಆಹಾರ ಧಾನ್ಯ ಬೆಳೆಯುವವರೆಲ್ಲರೂ ಸಹ ರೈತರೆ ಎಂದು ಹೇಳಿದರು.

ಜನಿಸಿದ ಪ್ರತಿಯೊಬ್ಬ ಮನುಷ್ಯನಿಗೆ ಭೂಮಿಯ ಮೇಲೆ ಸಾಮರಸ್ಯ ಮತ್ತು ಸಂತಸದಿಂದ ಬದುಕ ಬೇಕೆಂದರೆ ಕಾಯಕ, ಆಧ್ಯಾತ್ಮಿಕ ಚಿಂತನೆ ಮತ್ತು ಉನ್ನತಮಟ್ಟದ ಶಿಕ್ಷಣ ಅತ್ಯವಶ್ಯಕವಾಗಿದೆ. ಜೊತೆಗೆ ಸಾಮಾಜಿಕ ಅಭಿವೃದ್ಧಿ ಕಾರ್ಯ ಮಾಡಬೇಕು ಎಂದರು.

ನಿಯೋಜಿತ ಪೀಠಾಧ್ಯಕ್ಷ ಡಾ.ಅಭಿನವ ಸಿದ್ದರಾಮೇಶ್ವರ ಮಹಾಸ್ವಾಮಿ,ಭೂಮಿಪೂಜೆ ನೆರವೇರಿಸಿದ ಈ ಸ್ಥಳ ಜ್ಞಾನ ಸತ್ರವಾಗಲಿದೆ ಎಂದರು.

ಮಾಜಿ ಶಾಸಕ ಎನ್.ಎಸ್.ಖೇಡ, ಕನ್ಹೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಶಿರೋಳ ರಾಮಾಮಠದ ಶಂಕರಾರೂಢ ಸ್ವಾಮೀಜಿ, ಬುರಾಣಪುರ ಆರೂಢಾ ಮಠದಯೋಗೇಶ್ವರಿ ತಾಯಿ, ಬೆಳಗಾವಿಯ ಗಣಿತ ತಜ್ಞ ಪ್ರೊ.ಎನ್.ವೆಂಕಟೇಶ, ಡಾ.ಸಿದ್ದಣ್ಣ ಉತ್ನಾಳ, ಮಂಜುನಾಥ ಜನಗೊಂಡ, ಭೀಮಾಶಂಕರ ಬಿರಾದಾರ ಉಪಸ್ಥಿತರಿದ್ದರು.

***

ದೇಶದಲ್ಲಿ ಸದಾ ಗೌರವಿಸಲ್ಪಡುವವರೆಂದರೆ ದೇಶ ಕಾಯುವ ವೀರ ಸೈನಿಕರು ಮತ್ತು ಬೆವರು ಸುರಿಸಿ ದುಡಿಯುವ ರೈತರು.
-ಸಿದ್ಧೇಶ್ವರ ಸ್ವಾಮೀಜಿ
ಜ್ಞಾನಯೋಗಾಶ್ರಮ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT