ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವನಬಾಗೇವಾಡಿ: ಲಕ್ಕಮ್ಮದೇವಿ ಜಾತ್ರೆ 5ರಿಂದ

Published 2 ಜೂನ್ 2024, 15:28 IST
Last Updated 2 ಜೂನ್ 2024, 15:28 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ತಾಲ್ಲೂಕಿನ ಇವಣಗಿ ಗ್ರಾಮದ ವರದಾನಿ ಲಕ್ಕಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಜೂನ್‌ 5 ರಿಂದ ಜೂನ್‌ 9 ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಜೂನ್‌ 5 ರಂದು ಬೆಳಿಗ್ಗೆ 10ಕ್ಕೆ ಲಕ್ಕಮ್ಮದೇವಿಯನ್ನು ಬರಮಾಡಿಕೊಳ್ಳಲಾಗುವುದು ಹಾಗೂ ವಿವಿಧ ಗ್ರಾಮಗಳಿಂದ 9 ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳಲಾಗುವುದು. ನಂತರ ಪಗಡಿ ಪಂದ್ಯಾವಳಿ ನಡೆಯಲಿದೆ. ರಾತ್ರಿ 9ಕ್ಕೆ ಶ್ರೀಕೃಷ್ಣ ಪಾರಿಜಾತ ಬಯಲಾಟ ನಡೆಯಲಿದೆ.

ಜೂನ್‌ 6ರಂದು ಬೆಳಿಗ್ಗೆ ಗಂಗಸ್ಥಳ ಪೂಜೆ ನೆರವೇರುವುದು. ಡೊಳ್ಳು, ವಿವಿಧ ವಾದ್ಯಗಳು ಸೇರಿದಂತೆ 11 ಪಲ್ಲಕ್ಕಿಗಳ ಉತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಿಯನ್ನು ದೇವಸ್ಥಾನಕ್ಕೆ ಕರೆತರಲಾಗುವುದು. ನಂತರ ಗ್ರಾಮದೇವತೆಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರುವುದು. ದೇವಿಯ ನುಡಿಮುತ್ತುಗಳು ಹಾಗೂ ಸಿದ್ಧಪುರುಷರ ಶಿವವಾಣಿ (ಹೇಳಿಕೆಗಳು) ನಡೆಯಲಿವೆ. ರಾತ್ರಿ 9ಕ್ಕೆ ವಾದಿ ಪ್ರತಿವಾದಿಗಳಿಂದ ಡೊಳ್ಳಿನ ಪದಗಳ ಕಾರ್ಯಕ್ರಮ ಜರುಗುವುದು.

ಜೂನ್‌ 7 ರಂದು ಬೆಳಿಗ್ಗೆ 9ಕ್ಕೆ ಭಾರ ಎತ್ತುವ ಸ್ಪರ್ಧೆ ಹಾಗೂ ಗುಂಡು, ಸಂಗ್ರಾಣಿ ಕಲ್ಲು, ಚೀಲ ಎತ್ತುವ ಕಾರ್ಯಕ್ರಮ, ಮಧ್ಯಾಹ್ನ 3ಕ್ಕೆ ಜಂಗಿ ಕುಸ್ತಿ ನಡೆಯಲಿದೆ. ರಾತ್ರಿ 9ಕ್ಕೆ ಗ್ರಾಮದ ಬಸವ ಚೇತನ ಕಲಾ ಬಳಗದವರಿಂದ ನಾಟಕ ಪ್ರದರ್ಶನವಾಗಲಿದೆ.

ಜೂನ್‌ 8ರಂದು ಬೆಳಿಗ್ಗೆ 8.30 ರಿಂದ ಸಂಜೆ 6 ರವರೆಗೆ ಸುಪ್ರಸಿದ್ಧ ಗೀಗಿ ಪದಗಳ ಕಾರ್ಯಕ್ರಮ ನಡೆಯಲಿದೆ, ರಾತ್ರಿ 9ಕ್ಕೆ ಸಿಂದಗಿಯ ಶ್ರೀಗುರು ಮೆಲೋಡಿಸ್ ಕಲಾ ತಂಡದವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಜೂ‌ನ್‌ 9ಕ್ಕೆ ಬೆಳಿಗ್ಗೆ 8ಕ್ಕೆ ಎತ್ತಿನಗಾಡಿ ರೇಸ್ (ಪುಟಿಗಾಡಿ) ಸ್ಪರ್ಧೆ, ಮಧ್ಯಾಹ್ನ 2ಕ್ಕೆ ತೇರ ಬಂಡಿ ಸ್ಪರ್ಧೆ ನಡೆಯಲಿದೆ, ರಾತ್ರಿ 8ಕ್ಕೆ ಪುರಾಣ ಮಂಗಲ ಕಾರ್ಯಕ್ರಮ ನಡೆಯುವುದು, 9ಕ್ಕೆ ನಾಟಕ ಪ್ರದರ್ಶನವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT