ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ: ಹುತಾತ್ಮ ಯೋಧ ರಾಜು ಕರ್ಜಗಿ ಪಾರ್ಥಿವ ಶರೀರದ‌ ಅಂತಿಮ‌ ದರ್ಶನ

Published 3 ಜುಲೈ 2024, 7:43 IST
Last Updated 3 ಜುಲೈ 2024, 7:43 IST
ಅಕ್ಷರ ಗಾತ್ರ

ವಿಜಯಪುರ: ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆಯಲ್ಲಿ ಹವಾಲ್ದಾರ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಿಕೋಟಾ ಪಟ್ಟಣದ ರಾಜು ಗಿರಮಲ್ಲ ಕರಜಗಿ ಹುತಾತ್ಮನಾಗಿದ್ದು, ಪಾರ್ಥಿವ ಶರೀರವನ್ನು ಪಟ್ಟಣಕ್ಕೆ ಬುಧವಾರ ಬೆಳಿಗ್ಗೆ ತರಲಾಗಿದೆ.

ಪಾರ್ಥಿವ ಶರೀರವನ್ನು ತಿಕೋಟಾಕ್ಕೆ ತರುತ್ತಿದ್ದಂತೆ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತು. ಸಾವಿರಾರು ಜನ ಸೇರಿದ್ದು, ಅಂತಿಮ ದರ್ಶನಕ್ಕೆ ವಾಡೆ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಅಮರ್ ರಹೇ ರಾಜು, ಬೋಲೊ ಭಾರತ್ ಮಾತಾಕಿ ಜೈ ಘೋಷಣೆಗಳು ಮೊಳಗಿದವು.

ರಾಜಕೀಯ ಧುರೀಣರು, ಸಾರ್ವಜನಿಕರು, ಮಾಜಿ ಸೈನಿಕರು, ವಿದ್ಯಾರ್ಥಿಗಳು ಯೋಧನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಅಂತಿಮ ದರ್ಶನದ ನಂತರ ತಿಕೋಟಾ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT