ಗುರುವಾರ , ಅಕ್ಟೋಬರ್ 29, 2020
20 °C

ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ನಗರದ ರೈಲು ನಿಲ್ದಾಣದಿಂದ ಕೆಎಫ್‌ಸಿಎಸ್‌ಸಿ ಗೋದಾಮಿಗೆ ಪಡಿತರ ಅಕ್ಕಿ ಚೀಲ ತುಂಬಿಕೊಂಡು ಹೊರಟ್ಟಿದ್ದ ಲಾರಿಯನ್ನೇ ಕಳವು ಮಾಡಲಾಗಿದೆ.

ಪಿ.ಎಂ.ಹೊಸೂರ ಎಂಬ ಪಡಿತರ ಅಕ್ಕಿ ಸಾಗಾಣಿಕೆ ಗುತ್ತಿಗೆದಾರರಿಗೆ ಸೇರಿದ ಕೆಎ 22 ಸಿ 0758 ಅಶೋಕ ಲೈಲ್ಯಾಂಡ್‌ ಲಾರಿಯಲ್ಲಿ ₹4.80 ಲಕ್ಷ ಮೌಲ್ಯದ 21.1 ಟನ್‌ ಪಡಿತರ ಅಕ್ಕಿಯನ್ನು ತುಂಬಿಕೊಂಡು ಹೊರಟ್ಟಿದ್ದ ಚಾಲಕ ಮದಾರಸಾಬ್‌ ಮುಲ್ಲಾ ಕಳೆದ ಸೋಮವಾರ ಸಂಜೆ 6.30ಕ್ಕೆ ನಗರದ ಐಒಸಿ ಮುಂದೆ ಇರುವ ವಿನಾಯಕ ಪೆಟ್ರೋಲ್‌ ಪಂಪ್‌ನಲ್ಲಿ ಡೀಸೆಲ್‌ ಹಾಕಿಸಿ, ಅಲ್ಲಿಯೇ‌ ಎದುರು ಲಾರಿಯನ್ನು ನಿಲ್ಲಿಸಿ, ಮನೆಗೆ ಹೋಗಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮರು ದಿನ ಮಂಗಳವಾರ ಬೆಳಿಗ್ಗೆ ಚಾಲಕ ಸ್ಥಳಕ್ಕೆ ಬಂದು ನೋಡಿದಾಗ ಲಾರಿ ಕಳುವಾಗಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಗೋಳಗುಮ್ಮಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು