ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದೇಬಿಹಾಳ | ಪ್ರೇಮ ಪ್ರಕರಣ: ಯುವಕನಿಗೆ ಬೆಂಕಿ

Published 26 ಮೇ 2024, 19:43 IST
Last Updated 26 ಮೇ 2024, 19:43 IST
ಅಕ್ಷರ ಗಾತ್ರ

ಮುದ್ದೇಬಿಹಾಳ (ವಿಜಯಪುರ ಜಿಲ್ಲೆ): ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನ ಯುವಕನೊಬ್ಬನಿಗೆ ಬೆಂಕಿ ಹೊತ್ತಿಕೊಂಡು ಗಂಭೀರವಾಗಿ ಗಾಯವಾಗಿದ್ದು, ಆತನ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಘಟನೆ ವಿವರ: ಪ್ರೇಮ ಪ್ರಕರಣವೊಂದರಲ್ಲಿ ಮುದ್ದೇಬಿಹಾಳ ತಾಲ್ಲೂಕಿನ ಢವಳಗಿ ಗ್ರಾಮದ ರಾಹುಲ್ ರಾಮನಗೌಡ ಬಿರಾದಾರ ಎಂಬವರನ್ನು ಹುಡುಗಿಯ ಮನೆಯವರು ಮನೆಗೆ ಕರೆಯಿಸಿಕೊಂಡು ಆತನ ಮೇಲೆ ಪೆಟ್ರೋಲ್‌ ಸುರುವಿ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾರೆ ಎಂದು ಯುವಕನ ತಂದೆ ಆರೋಪಿಸಿದ್ದಾರೆ.

‘ಯುವಕನೇ ಪೆಟ್ರೋಲ್‌ ಅನ್ನು ನಮ್ಮ ಮನೆಗೆ ತಂದು, ತನ್ನ ಮೈಮೇಲೆ ಸುರುವಿಕೊಂಡಿದ್ದಾನೆ. ಅಲ್ಲದೇ, ನಮ್ಮ ಮನೆಯವರ ಮೇಲೂ ಪೆಟ್ರೋಲ್‌ ಎರಚಿ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾನೆ. ಆತನ ದಾಳಿಯಿಂದ ಮನೆಯವರಿಗೂ ಸುಟ್ಟ ಗಾಯಗಳಾಗಿವೆ’ ಎಂದು ಹುಡುಗಿ ಮನೆಯವರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT