ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ: ರಾಯರ ಮಠದಲ್ಲಿ ಮಧ್ವನವಮಿ ಆಚರಣೆ

Published 18 ಫೆಬ್ರುವರಿ 2024, 14:12 IST
Last Updated 18 ಫೆಬ್ರುವರಿ 2024, 14:12 IST
ಅಕ್ಷರ ಗಾತ್ರ

ವಿಜಯಪುರ: ನಗರದ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಭಾನುವಾರ ಅನೇಕ ಸಂಖ್ಯೆಯ ಭಕ್ತಗಣ ಭಾಗಿವಹಿಸಿ ಮಧ್ವ ನವಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಬೆಳಿಗ್ಗೆ ಸುಮಧ್ವವಿಜಯ ಪಾರಾಯಣ, ವಾಯುಸ್ತುತಿ ಪುನಶ್ಚರಣೆಯಿಂದ ಧಾರ್ಮಿಕ ಕಾರ್ಯಕ್ರಮಗಳು, ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ಜರುಗಿದವು. ಶ್ರೀ ಮಧ್ವಾಚಾರ್ಯರ ಸರ್ವಮೂಲ ಗ್ರಂಥಗಳು ಹಾಗೂ ಆನಂದತೀರ್ಥರ ಭಾವಚಿತ್ರವನ್ನು ರಜತ ಪೀಠದಲ್ಲಿ ಇಟ್ಟು ರಥೋತ್ಸವ ಜರುಗಿತು.

ನಂತರ ಉಪನ್ಯಾಸ ನೀಡಿದ ಪಂಡಿತ ಡಾ. ಕೃಷ್ಟಾಚಾರ್ಯ ಕಾಖಂಡಕಿ, ‘ಆಚಾರ್ಯ ಮಧ್ವರ ಸಂದೇಶಗಳು ಸರ್ವಕಾಲಿಕ ಮಾರ್ಗದರ್ಶಕವಾಗಿವೆ. ಅವರ ಗ್ರಂಥಗಳಲ್ಲಿ ಮಾನವೀಯ ಗುಣಗಳ ಉಲ್ಲೇಖವಿದೆ. ಮಧ್ವಮತದ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಅಗ್ರಗಣ್ಯರಲ್ಲಿ ಮಧ್ವಾಚಾರ್ಯರು ಒಬ್ಬರಾಗಿದ್ದಾರೆ’ ಎಂದರು. 

ಮಠದ ಅರ್ಚಕರಾದ ರವಿ ಆಚಾರ್ಯ, ಶ್ರೀಧರ ಆಚಾರ್ಯ, ಗೋಪಾಲ ನಾಯಕ, ಬಂಡಾಚಾರ್ಯ ಜೋಶಿ (ಕೂಡಗಿ), ವಿಜಯೇಂದ್ರ ಜೋಶಿ, ಕೃಷ್ಣ ಬೀಡಕರ, ಶ್ರೀಧರ ಹರಿದಾಸ, ಪ್ರಕಾಶ ಬಿಜಾಪುರ, ಭೀಮಣ್ಣ ಕುಲಕರ್ಣಿ, ಗುರುರಾಜ ಸೊಂಡೂರ, ಡಿ.ಆರ್ ನಾಡಿಗ, ಜಯತೀರ್ಥ ಕಿರಸೂರ, ಕೃಷ್ಣ ದೇಶಪಾಂಡೆ, ಶ್ರೀಕೃಷ್ಣ ಪಡಗಾನೂರ, ಅರುಣ ತೊರವಿ, ಅಶೋಕ ತಾವರಗೇರಿ, ಮಧುಕರ ಹೆರಕಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT