ತಾಳಿಕೋಟೆ: ಪಟ್ಟಣದ ರಾಜವಾಡೆಯಲ್ಲಿರುವ ದಿಗಂಬರ ಜೈನ ಮಂದಿರದಲ್ಲಿ ಭಗವಾನ ಮಹಾವೀರರ ಜನ್ಮಕಲ್ಯಾಣ ಮಹೋತ್ಸವವು ಗುರುವಾರ ವಿಜೃಂಭಣೆಯಿಂದ ಜರುಗಿತು.

ಬೆಳಿಗ್ಗೆ ಐತಿಹಾಸಿಕ ಭೀಮನ ಬಾವಿಯಿಂದ ಪೂರ್ಣಕುಂಭ ಮಹಾವೀರರ ಭಾವಚಿತ್ರ ಮೆರವಣಿಗೆ ಪ್ರಾರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿಬಂದು ಜಿನಮಂದಿರ ತಲುಪಿತು.

ಮಂದಿರದಲ್ಲಿ ಪೂಜೆ, ಅಭಿಷೇಕ, ಭಗವಾನ ಮಹಾವೀರರ ನಾಮಕರಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಬಾಬಾನಗರದ ವೃಷಭ ಉಪಾಧ್ಯೆ, ಸ್ಥಳೀಯ ಅರ್ಚಕ ಶೀತಲ ಪಂಡಿತರು ನಡೆಸಿಕೊಟ್ಟರು.

ಕಾಗವಾಡ ತಾಲ್ಲೂಕು ಉಗಾರ ಖುರ್ದ ಗ್ರಾಮದ ಝಾಂಝ ಪಥಕ ವಾದ್ಯಮೇಳ ಮೆರವಣಿಗೆಗೆ ಜೀವಕಳೆ ತಂದಿತ್ತು. ಪಟ್ಟಣದ ಜೈನ ಸಮಾಜದ ಎಲ್ಲ ಶ್ರಾವಕ, ಶ್ರಾವಕಿಯರು ಭಾಗವಹಿಸಿದ್ದರು. ಸಂಜೆ ಧರ್ಮಸಭೆ, ಸನ್ಮಾನ ಸಮಾರಂಭ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.