ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾತ್ಮಕ ಆಭರಣಗಳ ಪ್ರದರ್ಶನ

Last Updated 25 ನವೆಂಬರ್ 2022, 14:47 IST
ಅಕ್ಷರ ಗಾತ್ರ

ವಿಜಯಪುರ: ನಗರದ ಮಲಬಾರ್‌ ಗೋಲ್ಡ್ ಅಂಡ್‌ ಡೈಮಂಡ್ಸ್ ಆಭರಣ ಮಳಿಗೆಯಲ್ಲಿ ಕಲಾತ್ಮಕ ಬ್ರ್ಯಾಂಡೆಡ್ ಆಭರಣಗಳ ಪ್ರದರ್ಶನ ಏರ್ಪಡಿಸಲಾಗಿದೆ.

ಶುಕ್ರವಾರದಿಂದ ಆರಂಭವಾಗಿರುವ ಈ ಪ್ರದರ್ಶನ ನವೆಂಬರ್‌ 28 ರ ವರೆಗೆ ನಡೆಯಲಿದೆ. ಈ ಪ್ರದರ್ಶನದಲ್ಲಿ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ಉಪ ಬ್ರ್ಯಾಂಡ್‌ಗಳಾದ ಮೈನ್ ಡೈಮಂಡ್ ಜ್ಯುವೆಲರಿ, ಏರಾ ಅನಕಟ್ ಡೈಮಂಡ್ ಜ್ಯುವೆಲರಿ, ಡಿವೈನ್ ಭಾರತೀಯ ಪಾರಂಪರಿಕ ಆಭರಣಗಳು ಎಥಿನಿಕ್ಸ್ ಕರಕುಶಲ ಆಭರಣಗಳು ಸಹ ಪ್ರದರ್ಶಿಸಲಾಗಿದೆ.

ಈ ಪ್ರದರ್ಶನಗಳಲ್ಲಿ ಆಭರಣಗಳ ಖರೀದಿಗೂ ಗ್ರಾಹಕರಿಗೆ ಅವಕಾಶ ಕಲ್ಪಿಸಲಾಗಿದ್ದು, ಮುಂಗಡ ಬುಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಗ್ರಾಹಕರಿಗೆ ಕಲಾತ್ಮಕ ಆಭರಣಗಳನ್ನು ಒದಗಿಸುವ ಸಲುವಾಗಿ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಅಲ್ಲದೇ, ಅತ್ಯುನ್ನತ ಕುಶಲಕರ್ಮಿಗಳಿಂದ ತಯಾರಿಸಿದ ಉತ್ತಮ ದರ್ಜೆಯ ಆಭರಣಗಳನ್ನು ಪ್ರದರ್ಶಿಸಲಾಗಿದೆ ಎಂದು ಮಲಬಾರ್ ಗ್ರೂಪಿನ ಮುಖ್ಯಸ್ಥ ಎಂ.ಪಿ.ಅಹ್ಮದ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT