ವಿಜಯಪುರ: ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಜುಲೈ 11ರಿಂದ 14ರ ವರೆಗೆ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಜುಲೈ 11ರಂದು ಬೆಳಿಗ್ಗೆ 10.30ಕ್ಕೆ ತಿಕೋಟಾ ತಾಲ್ಲೂಕಿನ ಕೊರಬು ಗಲ್ಲಿ ₹ 4.95 ಕೋಟಿ ವೆಚ್ಚದಲ್ಲಿ ತುಬಚಿ ಬಬಲೇಶ್ವರ ಏತನೀರಾವರಿ ಯೋಜನೆಯ ಡಿ.ಸಿ-2 ರಿಂದ ಜಂಕ್ಷನ್ ವರೆಗೆ ವಯಾ ತಿಕೋಟಾ ಕೆರೆ ಮತ್ತು ಕೊರಬು ಗಲ್ಲಿ ಮಸೂತಿ ವರೆಗೆ 5 ಕಿ.ಮೀ ರಸ್ತೆ ಸುಧಾರಣೆ ಮತ್ತು ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.

ಬಳಿಕ ಮಧ್ಯಾಹ್ನ 12ಕ್ಕೆ ₹4.95 ಕೋಟಿ ವೆಚ್ಚದಲ್ಲಿ ಸಿದ್ದಾಪುರ ಕೆ- ತಿಕೋಟಾ ಕೂಡು ರಸ್ತೆಯವರೆಗೆ 5.2 ಕಿ.ಮೀ ವಯಾ ಉತ್ತರ ಕಾಲುವೆ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಲಿದ್ದಾರೆ.

ಜುಲೈ 12ರಂದು ಬೆಳಿಗ್ಗೆ 10ಕ್ಕೆ ವಿಜಯಪುರ ನಗರದ ಜಾಮಿಯಾ ಮಸೀದಿ ರಸ್ತೆಯ ರೊಡಗಿಮಡ್ಡಿ ಖಬರಸ್ಥಾನ ಹತ್ತಿರ ರಾಜ್ಯ ವಿಪತ್ತು ಉಪಶಮನ ನಿಧಿ ₹2 ಕೋಟಿ ವೆಚ್ಚದಲ್ಲಿ ಕೋಟೆಗೋಡೆ ಕಂದಕ, ಮನಗೂಳಿ ಅಗಸಿಯಿಂದ ಕಸ್ತೂರಿ ಕಾಲೊನಿವರೆಗೆ ಹಾಗೂ ₹1 ಕೋಟಿ ವೆಚ್ಚದಲ್ಲಿ ರೊಡಗಿಮಡ್ಡಿ ಖಬರಸ್ಥಾನದಿಂದ ಸಿಂದಗಿ ರಸ್ತೆಯ ರೈಲ್ವೆ ಸೇತುವೆವರೆಗಿನ ಕಂದಕದಲ್ಲಿನ ಹೂಳು ತೆಗೆಯುವುದು ಹಾಗೂ ಪ್ರವಾಸ ನಿಯಂತ್ರಣ ಕಾಮಗಾರಿಗಳಿಗೆ ಚಾಲನೆ ನೀಡುವರು.

ನಂತರ ಬೆಳಿಗ್ಗೆ 10.30ಕ್ಕೆ ಇಂಡಿ ರಸ್ತೆ ಶಹಾಪೇಟ ಓಣಿ ಯಲ್ಲಮ್ಮ ದೇವಸ್ಥಾನದ ಹತ್ತಿರ ರಾಜ್ಯ ವಿಪತ್ತು ಉಪಶಮನ ನಿಧಿ ₹ 2 ಕೋಟಿ ವೆಚ್ಚದಲ್ಲಿ ಶಹಾಪೇಟೆ, ಸುಣಗಾರ ಗಲ್ಲಿಯಿಂದ ಸ್ಟೇಷನ್ ಹಿಂದಿನ ರಸ್ತೆ ಮೂಲಕ ಅಪ್ಸರಾ ಥೇಟರ್ ವರೆಗೆ ಮಳೆನೀರು ಚರಂಡಿ ಕಾಮಗಾರಿ ಮತ್ತು ಪ್ರವಾಹ ನಿಯಂತ್ರಣ ಕಾಮಗಾರಿಗೆ ಚಾಲನೆ ನೀಡುವರು.

13 ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಬಿ.ಎಂ.ಪಾಟೀಲ ರಸ್ತೆ ಗೃಹ ಕಚೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಲಿದ್ದಾರೆ.

ಜುಲೈ14 ರಂದು ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.