ವಿಜಯಪುರ: ಆರ್ಎಸ್ಎಸ್, ಬಿಜೆಪಿಯವರು ಗಾಂಧಿ ವಿರೋಧಿಗಳು. ಹೀಗಾಗಿ ಎನ್ಆರ್ಇಜಿಯಲ್ಲಿ ಇದ್ದ ಗಾಂಧಿ ಹೆಸರು ತೆಗೆದು ರಾಮನ ಹೆಸರು ಸೇರಿಸಿದ್ದಾರೆ. ರಾಮನ ಹೆಸರಲ್ಲಿ ಬಡವರು, ಕೂಲಿಕಾರ್ಮಿಕರಿಗೆ ಅನ್ಯಾಯ ಮಾಡಿದ್ದಾರೆ. ಅನ್ಯಾಯದ ಯೋಜನೆಗೆ ರಾಮನ ಹೆಸರು ಇಡಲು ಹೊರಟಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಹಾತ್ಮ ಗಾಂಧಿ ಕೊಂದವರೇ ಆರ್ಎಸ್ಎಸ್, ಬಿಜೆಪಿಯವರು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರಲ್ಲ ಇವರು. ಬ್ರಿಟೀಷರ ಏಜೆಂಟ್ ಆಗಿದ್ದರು’ ಎಂದರು.

‘ಯಾವುದೇ ಯೋಜನೆಗೆ ಇರುವ ಮೂಲ ಹೆಸರನ್ನು ಬದಲಿಸುವುದು ಸರಿಯಲ್ಲ. ರಾಮನ ಹೆಸರಲ್ಲಿ ಇವರು ಬಡವರು, ಕೂಲಿಕಾರ್ಮಿಕರಿಗೆ ಅನ್ಯಾಯ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಮನುವಾದಿಗಳಿಗೆ ಸಂವಿಧಾನ, ರಾಷ್ಟ್ರಗೀತೆ, ರಾಷ್ಟ್ರಧ್ವಜ ಯಾವುದೂ ಬೇಕಾಗಿಲ್ಲ. ರಾಷ್ಟ್ರಪಿತ ಗಾಂಧಿ ಹೆಸರು ತೆಗೆದು ಬೇರೆಯವರ ಹೆಸರು ಇಡುವುದು ತಪ್ಪು’ ಎಂದು ಹೇಳಿದರು.

"ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಸ್ವಾತಂತ್ರ ನಂತರದ ಜಾರಿಯಾದ ಐತಿಹಾಸಿಕ ಯೋಜನೆಯಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಉಳಿಸಲು ಜನಾಂದೋಲ ನಡೆಸಲು ನಿರ್ಧರಿಸಲಾಗಿದೆ' ಎಂದು ಹೇಳಿದರು.

ಎನ್ಆರ್ಇಜಿ ಮರಳಿ ಜಾರಿಗೆ ತರಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಸಂಬಂಧ ಜ.22ರಿಂದ 31ರ ವರೆಗೆ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ತಿಳಿಸಿದರು.

ಯುಪಿಎ ಸರ್ಕಾರ 2005 ರಲ್ಲಿ ಎನ್ ಆರ್ ಇಜಿ ಜಾರಿಗೆ ತರುವ ಮೂಲಕ ಸಂವಿಧಾನಾತ್ಮಕವಾಗಿ ಉದ್ಯೋಗ ಹಕ್ಕನ್ನು ನೀಡಿತ್ತು. ನರೇಗಾದಿಂದಲೇ ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆ ಸದೃಢವಾಗಿತ್ತು. ಇದನ್ನು ಸ್ಥಗಿತಗೊಳಿಸಿದರೆ ಗ್ರಾಮ ಪಂಚಾಯಿತಿಗಳಿಗೆ ಅನುದಾನವಿಲ್ಲದೇ ಬೀಗ ಹಾಕುವ ಪರಿಸ್ಥಿತಿ ಬರಲಿದೆ ಎಂದರು.

ಎನ್ಆರ್ಇಜಿ ಯೋಜನೆಯಡಿ ಗ್ರಾಮ ಪಂಚಾಯಿತಿಗಳು ತಮ್ಮ ಅಗತ್ಯಕ್ಕನುಗುಣವಾದ ಯೋಜನೆ ಕೈಗೊಳ್ಳಲು ಅವಕಾಶ ಕಲ್ಪಿಸಲಾಯಿತು. ಗ್ರಾಮೀಣ ಜನರಿಗೆ ವರ್ಷಕ್ಕೆ 100 ದಿನಗಳ ಉದ್ಯೋಗ ಭದ್ರತೆ ನೀಡಲಾಗಿತ್ತು. ಇದರಿಂದ ಬಡವರು, ರೈತರು, ಹಿಂದುಳಿದವರಿಗೆ ಅನುಕೂಲವಾಗಿತ್ತು. ಜನ ಉದ್ಯೋಗಕ್ಕಾಗಿ ವಲಸೆ ಹೋಗುವುದು ತಪ್ಪಿತ್ತು. ಸ್ವಾತಂತ್ರ್ಯ ನಂತರದ ಅತ್ಯಂತ ಮಹತ್ವದ ಯೋಜನೆಯನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೆಸರನ್ನು ಬದಲಾವಣೆ ನೆಪದಲ್ಲಿ ಯೋಜನೆಯನ್ನು ಕೈಬಿಟ್ಟು, ವಿಬಿ ಜಿ ರಾಮ್ ಜಿ ಎಂಬ ಹೊಸ ಯೋಜನೆ ಜಾರಿಗೆ ಮುಂದಾಗಿದೆ ಎಂದರು.

ರಾಷ್ಟ್ರ ವ್ಯಾಪ್ತಿ ಇದ್ದ ಎನ್ಆರ್ಇಜಿ ಯೋಜನೆಯನ್ನು ಕೇಂದ್ರದ ನಿರ್ಧಾರದಿಂದ ಇನ್ನು ಮುಂದೆ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಮಾತ್ರ ವಿಬಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಸಂವಿಧಾನಬದ್ದ ಉದ್ಯೋಗ ಹಕ್ಕು ಕಸಿದುಕೊಂಡಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಈಗಾಗಲೇ ಎನ್ಆರ್ಇಜಿ ಯೋಜನೆಗೆ ಹಂತ ಹಂತವಾಗಿ ಅನುದಾನ ಕಡಿತಮಾಡುವ ಮೂಲಕ ಕೊಲ್ಲುವ ಕೆಲಸ ಮಾಡಿದೆ ಎಂದು ಆರೋಪಿಸಿದರು.

ಎನ್ಆರ್ಇಜಿ ಯೋಜನೆಯಡಿ ಗ್ರಾಮ ಪಂಚಾಯಿತಿಗಳು ಗ್ರಾಮ ಸಭೆ ಮಾಡಿ ಅಗತ್ಯ ಯೋಜನೆ ಕೈಗೆತ್ತಿಕೊಳ್ಳಬಹುದಿತ್ತು. ಆದರೆ, ಇನ್ನು ಮುಂದೆ ವಿಬಿ ರಾಮ್ಜಿ ಯೋಜನೆಯಡಿ ಕೇವಲ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳನ್ನು ಮಾತ್ರ ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಕೂಲಿಯನ್ನು 100ರಿಂದ 150 ದಿನಕ್ಕೆ ಹೆಚ್ಚಿಸಲಾಗಿದೆ. ಆದರೆ ಇದುವರೆಗೂ ಎಷ್ಟು ಕೂಲಿ ಎಂಬುದು ಸ್ಪಷ್ಟಪಡಿಸಿಲ್ಲ. ಜೊತೆಗೆ ಕೃಷಿ ಹಂಗಾಮಿನಲ್ಲಿ ಎರಡು ತಿಂಗಳು ಕೆಲಸ ನೀಡುವಂತಿಲ್ಲ ಎಂದು ನಿರ್ಬಂಧ ವಿಧಿಸಿದೆ. ಯೋಜನೆಗೆ ರಾಜ್ಯ ಮತ್ತು ಕೇಂದ್ರದ ಅನುದಾನದ ಪಾಲು ಸಮನಾಗಿ ನಿಗದಿ ಪಡಿಸಿದೆ. ಇದು ರಾಜ್ಯಗಳಿಗೆ ಹೊರೆಯಾಗಲಿದೆ ಎಂದರು.

ಕೇಂದ್ರ ಸರ್ಕಾರ ಗ್ರಾಮೀಣ ದುಡಿಯುವ ವರ್ಗಕ್ಕೆ ಅನ್ಯಾಯ ಮಾಡಿದೆ. ಇನ್ನು ಮುಂದೆ ಗ್ರಾಮ ಪಂಚಾಯಿತಿ ಚುನಾವಣೆಗೆ ಯಾರೂ ಸ್ಪರ್ಧಿಸದಂತೆ ಮಾಡಿದೆ, ಗ್ರಾಮ ಪಂಚಾಯಿತಿಗಳಿಗೂ ಅನ್ಯಾಯ ಮಾಡಿದೆ. ಎನ್ಆರ್ಇಜಿ ಅನುಷ್ಠಾನದಲ್ಲಿ ಮೊದಲು ಗುತ್ತಿಗೆದಾರರು ಇರಲಿಲ್ಲ. ಈಗ ಗುತ್ತಿಗೆದಾರ ಮಧ್ಯಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ ಎಂದರು.

ಶಾಸಕ ವಿಠಲ ಕಟಕದೊಂಡ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.