ವಿಜಯಪುರ: ವಿಜಯಪುರ ನಗರದ ಪ್ರಮುಖ ವೃತ್ತಗಳಲ್ಲಿ(ಟ್ರಾಫಿಕ್ ಸಿಗ್ನಲ್) ವಾಹನ ಸವಾರರಿಗೆ ಬೇಸಿಗೆ ಬಿಸಿಲಿನಿಂದ ರಕ್ಷಣೆ ನೀಡಲು ಕಳೆದ ನಾಲ್ಕೈದು ವರ್ಷಗಳಿಂದ ನೆರಳಿನ ವ್ಯವಸ್ಥೆ ಮಾಡುತ್ತಿದ್ದ ಮಹಾನಗರ ಪಾಲಿಕೆಯು ಈ ವರ್ಷ ಇದುವರೆಗೂ ನೆರಳಿನ ವ್ಯವಸ್ಥೆ ಕಲ್ಪಿಸದೇ ಮೈಮರೆತಿದೆ.

ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ನಗರದ ಕೇಂದ್ರ ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಗಾಂಧಿ ಚೌಕಿ, ವಾಟರ್ ಟ್ಯಾಂಕ್ ವೃತ್ತದಲ್ಲಿ ಬೃಹತ್ ಹಸಿರಿನ ಪರದೆ(ಗ್ರೀನ್ ನೆಟ್)ಯನ್ನು ಅಳವಡಿಸಿ, ನೆರಳಿನ ವ್ಯವಸ್ಥೆ ಮಾಡುತ್ತಿತ್ತು. ಟ್ರಾಫಿಕ್ ಸಿಗ್ನಲ್ ಬಿದ್ದಾಗ ವಾಹನ ಸವಾರರು ಒಂದೆರಡು ನಿಮಿಷ ನೆರಳಿನ ಅಡಿ ನೆಮ್ಮದಿಯಿಂದ ಕಾಯುತ್ತಿದ್ದರು. ಬಳಿಕ ಮುಂದಕ್ಕೆ ತೆರಳುತ್ತಿದ್ದರು. ಪಾಲಿಕೆಯ ಈ ನೆರಳಿನ ವ್ಯವಸ್ಥೆ ರಾಜ್ಯದ ಗಮನ ಸೆಳೆದಿತ್ತು.

ಆದರೆ, ಈ ವರ್ಷ ಬೇಸಿಗೆ ಆರಂಭವಾಗಿ ಒಂದು ತಿಂಗಳಾದರೂ ಇದುವರೆಗೂ ನೆರಳಿನ ವ್ಯವಸ್ಥೆ ಮಾಡದೇ ಇರುವುದರಿಂದ ಅನಾರೋಗ್ಯ ಪೀಡಿತರು, ವಯೋ ವೃದ್ಧರು, ಮಕ್ಕಳು, ವಾಹನ ಸವಾರರು ರಣಬಿಸಿಲಿನಲ್ಲೇ ಕಾಯುತ್ತಿದ್ದು, ಬಿಸಿಲಾಘಾತಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ.

ನಗರದಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ಈ ವರ್ಷ ಪೊಲೀಸ್ ಇಲಾಖೆಯು ಕೋರ್ಟ್ ಸರ್ಕಲ್ (ಜಲನಗರ ಕ್ರಾಸ್), ಇಟಗಿ ಪೆಟ್ರೋಲ್ ಪಂಪ್, ಬಬಲೇಶ್ವರ ನಾಕಾ, ಸೋಲಾಪುರ ರಸ್ತೆಯ ದರ್ಗಾ ಕ್ರಾಸ್ ಸೇರಿದಂತೆ ಮತ್ತಷ್ಟು ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ಗಳನ್ನು ಅಳವಡಿಸಿದೆ. ಇದರಿಂದ ನಗರದ ವಾಹನ ಸವಾರರು ಬಹಳಷ್ಟು ಕಡೆ ಸುಡು ಬಿಸಿಲಲ್ಲೇ ಟ್ರಾಫಿಕ್ನಲ್ಲಿ ನಿಲ್ಲಬೇಕಾದ ಸ್ಥಿತಿ ಎದುರಾಗಿದೆ.

ಇಲ್ಲಿಯೂ ನೆರಳು ಬೇಕಿದೆ:

ಬಾಗಲಕೋಟೆ ರಸ್ತೆಯ ವಜ್ರಹನುಮಾನ್ ರೈಲ್ವೆ ಗೇಟ್ ಬಂದ್ ಆಗುವ ವೇಳೆ 5ರಿಂದ 10 ನಿಮಿಷ ಬಿಸಿಲಿನಲ್ಲಿ ವಾಹನ ಸವಾರರು ಕಾಯಬೇಕಾದ ಸ್ಥಿತಿ ಇದೆ. ಅದೇ ರೀತಿ ಮನಗೂಳಿ ಅಗಸಿ, ಬಂಜಾರ ಕ್ರಾಸ್, ಇಟಗಿ ಪೆಟ್ರೋಲ್ ಪಂಪ್, ಸೋಲಾಪುರ ರಸ್ತೆಯ ದರ್ಗಾ ಕ್ರಾಸ್ನಲ್ಲೂ ನೆರಳಿನ ವ್ಯವಸ್ಥೆ ಮಾಡಬೇಕು ಎಂದು ವಾಹನ ಸವಾರರು ಮಹಾ ಪಾಲಿಕೆಗೆ ಮನವಿ ಮಾಡಿದ್ದಾರೆ.

ಕಳಪೆ ಆರೋಪ:

ನಗರದ ಪ್ರಮುಖ ವೃತ್ತಗಳಲ್ಲಿ ಈ ಹಿಂದಿನ ವರ್ಷಗಳಲ್ಲಿ ಪಾಲಿಕೆ ನೆರಳಿನ ವ್ಯವಸ್ಥೆಯೇನೋ ಮಾಡಿತ್ತು. ಆದರೆ, ಕಳಪೆಯಾಗಿದ್ದ ಕಾರಣ ಪರದೆಗಳು ಹರಿದು ಹೋಗಿ, ಜನರು ಬಿಸಿಲಿನಲ್ಲೇ ನಿಲ್ಲುವ ಸ್ಥಿತಿ ಎದುರಾಗಿತ್ತು. ಕಾಟಾಚಾರಕ್ಕೆ ನೆರಳಿನ ವ್ಯವಸ್ಥೆ ಮಾಡಿ, ಹಣ ಪೋಲು ಮಾಡುವ ಬದಲು ಗುಣಮಟ್ಟದ ನೆರಳಿನ ವ್ಯವಸ್ಥೆ ಮಾಡಬೇಕು. ನಿರ್ವಹಣೆ ಜವಾಬ್ದಾರಿಯನ್ನು ಸಂಬಂಧಪಟ್ಟವರಿಗೆ ವಹಿಸಬೇಕು. ವೃತ್ತಗಳಲ್ಲಿ ಚಿಕ್ಕದಾಗಿ ನೆರಳಿನ ವ್ಯವಸ್ಥೆ ಮಾಡದೇ ಪರದೆಯನ್ನು ರಸ್ತೆಗಳಿಗೆ ಹೆಚ್ಚು ಉದ್ದ, ವಿಸ್ತಾರವಾಗಿ ಅಳವಡಿಸಲು ಕ್ರಮಕೈಗೊಳ್ಳಬೇಕು ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.

ವಿಜಯಪುರ ನಗರದ ಆರು ಪ್ರಮುಖ ಆರು ವೃತ್ತಗಳಲ್ಲಿ ನೆರಳಿನ ವ್ಯವಸ್ಥೆ ಕಲ್ಪಿಸಲು ಈಗಾಗಲೇ ₹15 ಲಕ್ಷ ಮೊತ್ತದ ಟೆಂಡರ್ ನೀಡಲಾಗಿದೆ. ಶೀಘ್ರ ನೆರಳಿನ ವ್ಯವಸ್ಥೆ ಆರಂಭವಾಗಲಿದೆ
–ವಿಜಯಕುಮಾರ್ ಮೆಕ್ಕಳಕಿ ಆಯುಕ್ತ ಮಹಾನಗರ ಪಾಲಿಕೆ ವಿಜಯಪುರ

ಬೇಸಿಗೆಯಲ್ಲಿ ಟ್ರಾಫಿಕ್ ಸಿಗ್ನಲ್ ಬೇಡ

ವಿಜಯಪುರ ನಗರದ ಬಹುತೇಕ ವೃತ್ತಗಳಲ್ಲಿ ಬೆಳಿಗ್ಗೆ 11 ರಿಂದ ಸಂಜೆ 4ರ ವರೆಗೆ ವಾಹನ ಸಂಚಾರ ವಿರಳವಾಗಿರುತ್ತದೆ. ಆದರೂ ಟ್ರಾಫಿಕ್ ಸಿಗ್ನಲ್ನಲ್ಲಿ ವಾಹನ ಸವಾರರು ಎರಡು ನಿಮಿಷ ಕಾಯಬೇಕಾಗುತ್ತದೆ. ಇದರಿಂದ ಬಿಸಿಲಾಘಾತಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಬೇಸಿಗೆ ಮುಗಿಯುವ ವರೆಗೆ ಸಂಚಾರ ಪೊಲೀಸರು ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದರೆ ವಾಹನ ಸವಾರರಿಗೆ ಅನುಕೂಲವಾಗುತ್ತದೆ ಎಂದು ಅನೇಕ ವಾಹನ ಸವಾರರು ಪ್ರಯಾಣಿಕರು ಮನವಿ ಮಾಡಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಪ್ರಯತ್ನಿಸಿದರೂ ಅವರು ಕರೆಯನ್ನು ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.