ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಷ್ಟದಲ್ಲಿದ್ದವರ ಕೈಹಿಡಿಯುವ ನಬಾರ್ಡ್‌ ಬ್ಯಾಂಕ್‌

Published 25 ಮೇ 2024, 15:47 IST
Last Updated 25 ಮೇ 2024, 15:47 IST
ಅಕ್ಷರ ಗಾತ್ರ

ತಾಂಬಾ: ಮಳೆ ಸರಿಯಾಗಿ ಇಲ್ಲದ ಕಾರಣ ಅನೇಕ ರೈತರು ಬೀದಿಗೆ ಬಂದಂತಾಗಿದೆ. ಅವರು ಬಂಡವಾಳ ಹಾಕಿ ವ್ಯಾಪಾರ ಉದ್ಯೋಗ ಮಾಡುವ ಸ್ಥಿತಿ ಈಗ ಇಲ್ಲದಂತಾಗಿದೆ. ನಬಾರ್ಡ್‌ ಬ್ಯಾಕ್ ಅಂಥವರ ಕಷ್ಟಕ್ಕೆ ಕೈ ಹಿಡಿಯುವ ಕಾರ್ಯ ಮಾಡುತ್ತಿದೆ ಎಂದು ನಬಾರ್ಡ್‌ ಬ್ಯಾಂಕ್‌ ಅಧಿಕಾರಿ ವಿಕಾಸ ರಾಠೋಡ ಹೇಳಿದರು

ಶನಿವಾರ ಗ್ರಾಮದ ಸಾರಂಗಮಠದಲ್ಲಿ ರೈತ ಮಹಿಳೆಯರಿಗಾಗಿ ಆಯೋಜಿಸಿದ್ದ ಮೂರು ದಿನಗಳ ಉಚಿತ ತರಬೇತಿಯಲ್ಲಿ ಕುರಿ ಸಾಕಣೆ ಬಗ್ಗೆ ಅವರು ತಿಳಿಸಿದರು.

‘ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತೇವೆ. ಆರ್ಥಿಕವಾಗಿ ತೊಂದರೆ ಅನುಭವಿಸಿದ ಅನೇಕ ರೈತರು, ಬಡ ಕುಟುಂಬಗಳು, ಮಧ್ಯಮ ವರ್ಗದ ಜನರು ಸೇರಿದಂತೆ ಆನೇಕ ಕ್ಷೇತ್ರಗಳಲ್ಲಿ ನಷ್ಟ ಕಂಡ ಕುಟುಂಬದವರಿಗೆ ಹಲವು ಬ್ಯಾಂಕುಗಳು ಸಾಲ ನೀಡುವ ದೊಡ್ಡ ಯೋಜನೆ ಹೊಂದಿವೆ. ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ಜಿ.ಎಂ. ಬಿರಾದಾರ, ಎಸ್.ಎಂ. ನಾವಿ, ಲಕ್ಷೀ ನಿಂಬಾಳ, ಸುವರ್ಣಾ ಗೊರನಾಳ, ರೇಣುಕಾ ಹಿರೇಕುರಬರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT