ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೇರಳದ ಬಸವಣ್ಣ‘ ನಾರಾಯಣಗುರು

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಔದ್ರಾಮ್ ಅಭಿಮತ
Last Updated 2 ಸೆಪ್ಟೆಂಬರ್ 2020, 13:39 IST
ಅಕ್ಷರ ಗಾತ್ರ

ವಿಜಯಪುರ: ಬ್ರಹ್ಮರ್ಷಿನಾರಾಯಣ ಗುರುಗಳು 19ನೇ ಶತಮಾನದಲ್ಲಿ ಸಾಮಾಜಿಕ ತಾರತಮ್ಯವನ್ನು ಕೊನೆಗೊಳಿಸಿ, ಜನರಲ್ಲಿ ಒಗ್ಗಟ್ಟನ್ನು ಬೆಳಸಲು ಹೋರಾಡಿದ್ದರು. ಹೀಗಾಗಿ ಅವರು ‘ಕೇರಳದ ಬಸವಣ್ಣ’ ಎಂದೇ ಖ್ಯಾತರಾಗಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಔದ್ರಾಮ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಜಿಲ್ಲಾಧಿಕಾರಿ ಸಭಾ ಭವನದಲ್ಲಿ ಬ್ರಹ್ಮರ್ಷಿ ನಾರಾಯಣಗುರು ಅವರ 165ನೇ ಜನ್ಮದಿನಾಚಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

‘ಒಂದೇ ಕುಲ, ಒಂದೇ ಮತ, ಒಂದೇ ದೇವರು ಎಂದು ಸಮಾನತೆಯ ಸಂದೇಶ ಸಾರಿದನಾರಾಯಣ ಗುರುಗಳ ಜೀವನ, ಕಲೆಗಳುಆಧ್ಯಾತ್ಮಿಕತೆ ಹಾಗೂ ಸಮಾಜ ಸುಧಾರಣೆಯ ಉತ್ತಮ ಮಿಶ್ರಣವಾಗಿದೆ ಎಂದರು.

ಧಾರ್ಮಿಕ ಸುಧಾರಣೆಯ ಜೊತೆ, ಜೊತೆಗೆ ಅವರು ಶಿಕ್ಷಣ ಮತ್ತು ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಿದ್ದರು ಎಂದು ಹೇಳಿದರು.

ಬ್ರಹ್ಮರ್ಷಿ ನಾರಾಯಣಗುರುಗಳ ತತ್ವ, ಆದರ್ಶಗಳನ್ನು ನಾವೆಲ್ಲರು ಅಳವಡಿಸಿಕೊಳ್ಳಬೇಕು. ಯುವ ಸಮುದಾಯ ಹಾಗೂ ನಮ್ಮ ಮಕ್ಕಳಿಗೆ ನಾರಾಯಣಗುರು ಅವರ ತತ್ವ ಹಾಗೂ ಆದರ್ಶಗಳ ಬಗ್ಗೆ ತಿಳಿಸಿಕೊಡಬೇಕು ಎಂದರು.

ನಾರಾಯಣಗುರುಗಳ ಹೆಸರಿನಲ್ಲಿ ಅನೇಕ ಸಂಸ್ಥೆಗಳು ಸಮಾಜದ ಏಳಿಗೆಗೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೋತದಾರ ಮಾತನಾಡಿ, ಕೇರಳದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ನಾರಾಯಣಗುರು ಅವರ ಕೊಡುಗೆ ಅಪಾರ. ಇಂದು ಕೇರಳ ರಾಜ್ಯ ಸಾಕ್ಷರತೆಯಲ್ಲಿ ಪ್ರಥಮ ಸ್ಥಾನ ಪಡೆಯುವಲ್ಲಿ ಅವರು ಮಾಡಿದ ಅಂದಿನ ಕಾರ್ಯಗಳು ಒಂದಾಗಿದೆ ಎಂದರು.

ಶೋಷಣೆಗೆ ಒಳಗಾದವನ್ನು ಮೇಲೆತ್ತುವ ಕಾರ್ಯ ಮಾಡಿದ ನಾರಾಯಣ ಗುರುಗಳು ಕೇರಳದಲ್ಲಿ 59 ದೇವಾಲಯಗಳನ್ನು ನಿರ್ಮಿಸಿ, ಅಲ್ಲಿ ಕೆಳವರ್ಗದವರನ್ನು ಅರ್ಚರಕನ್ನಾಗಿ ಮಾಡಿ, ಸಮಾನತೆಗೆ ಹೋರಾಡಿದ ಮಹಾನ್ ಚೇತನ ಎಂದು ಹೇಳಿದರು.

ನಿಂಗಪ್ಪ ಗೋಠೆ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಲೋಣಿ ಹಾಗೂ ಈಡಿಗ ಸಮಾಜದ ಮುಖಂಡರಾದ ಕಲ್ಲಪ್ಪ ಇಳಗೇರ, ಹಣುಮಂತ ಇಳಗೇರ, ಹಾಜಪ್ಪ ಇಳಗೇರ, ಮಾದೇವ ಇಳಗೇರ, ಮಲ್ಲು ಇಳಗೇರ, ಶಿವಾನಂದ ಇಳಗೇರ ಹಾಗೂ ಮುಖಂಡರಾದಅಡಿವೆಪ್ಪ ಸಾಲಗಲ್, ಭೀಮರಾಯ ಜಿಗಜಿಣಿಗಿ, ಸೋಮನಗೌಡ ಕಲ್ಲೂರ, ಕೆ.ಎಫ್ ಅಂಕಲಕಿ, ವೀಣಾ ಅಂಕಲಕಿ, ಗಿರೀಶ ಕುಲಕರ್ಣಿ, ಸೋಮನಾಥ ದೊಡಮನಿ ಉಪಸ್ಥಿತರಿದ್ದರು.

*******

ಜಾತಿ ವೈಷಮ್ಯ, ಮೂಢನಂಬಿಕೆ, ಪ್ರಾಣಿವಧೆ, ಅಸ್ಪೃಶ್ಯತೆ, ಅನಾಚಾರಗಳಿಗೆ ಧಾರ್ಮಿಕತೆಯ ಹಿನ್ನೆಲೆಯಲ್ಲೇ ಪರಿಹಾರವನ್ನು ನಾರಾಯಣಗುರುಗಳು ಕಂಡುಕೊಂಡರು

–ಡಾ.ಔದ್ರಾಮ್, ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT