ಸೋಮವಾರ, ಡಿಸೆಂಬರ್ 6, 2021
25 °C

ಸಿಂದಗಿ: ನೀಲಗಂಗಾದೇವಿ ಜಾತ್ರೆ ಸಂಪನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂದಗಿ: ಗ್ರಾಮ ದೇವತೆ ನೀಲಗಂಗಾದೇವಿ ಜಾತ್ರೆ ಗುರುವಾರ ಅದ್ದೂರಿಯಾಗಿ ಜರುಗಿತು. ಬೆಳಿಗ್ಗೆ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವಕ್ಕೆ ಸಾರಂಗಮಠದ ಪೀಠಾಧ್ಯಕ್ಷ ಡಾ. ಪ್ರಭು ಸಾರಂಗದೇವ ಶ್ರೀ ಚಾಲನೆ ನೀಡಿದರು. ದೇವಸ್ಥಾನದ ಧರ್ಮದರ್ಶಿ ಸಿದ್ಧರಾಮಪ್ಪ ಪವಾಡಿ (ದೇವರಮನಿ) ಇದ್ದರು.

ವಾದ್ಯ ವೈಭವದೊಂದಿಗೆ ಪಲ್ಲಕ್ಕಿ ಉತ್ಸವ ಪಟ್ಟಣದಲ್ಲಿ ಸಾಗಿ ಬಂದಿತು. ಭಕ್ತರು ರಸ್ತೆಯುದ್ದಕ್ಕೂ ನಿಂತುಕೊಂಡು ಪಲ್ಲಕ್ಕಿ ದರ್ಶನ ಪಡೆದರು. ಪಲ್ಲಕ್ಕಿ ಮುಂಚೂಣಿಯಲ್ಲಿ ಛತ್ರ– ಚಾಮರ, ನಂದಿಕೋಲ ರಾರಾಜಿಸುತ್ತಿದ್ದವು. ಪುರವಂತರ ಸೇವೆ ನಡೆಯಿತು.

ಮಹಿಳೆಯರು ಕೈಯಲ್ಲಿ ಆರತಿ ಹಿಡಿದುಕೊಂಡು ಪಲ್ಲಕ್ಕಿ ಜೊತೆ ಸಾಗಿದರು. ಪಲ್ಲಕ್ಕಿ ಹಳೆಯ ಬಜಾರದಲ್ಲಿನ ಬಸವಣ್ಣ ದೇವರ ದೇವಸ್ಥಾನಕ್ಕೆ ತಲುಪಿದ ನಂತರ ಅಲ್ಲಿ ಭಕ್ತರು ದೇವಸ್ಥಾನದ ಸುತ್ತಲೂ ಉರಳು ಸೇವೆ ಭಕ್ತಿ ಸೇವೆ ಸಲ್ಲಿಸಿದರು.

ದೇವಿಯ ಜಾತ್ರೆಯ ಹಿನ್ನೆಲೆಯಲ್ಲಿ ಉಪವಾಸ ವ್ರತ ಕೈಗೊಂಡಿದ್ದ ಮಹಿಳೆಯರು ಇಂದು ದೇವಿಯ ದರ್ಶನದ ನಂತರ ವ್ರತ ಅಂತ್ಯಗೊಳಿಸಿದರು. ಇಡೀ ಪಟ್ಟಣದಾದ್ಯಂತ ಭಕ್ತಿಯ ಪರಾಕಾಷ್ಟೆ ಕಂಡು ಬಂದಿತು. ಬೆಳಿಗ್ಗೆಯಿಂದ ಸಂಜೆಯವರೆಗೂ
ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಬಂದು ದೇವಿಯ ದರ್ಶನ ಪಡೆದುಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು