ಸಿಂದಗಿ: ಪ್ರಯಾಣಿಕರ ಬಹು ದಿನಗಳ ಬೇಡಿಕೆಯಂತೆ ಸಿಂದಗಿ ಬಸ್ ಡಿಪೊಗೆ ಸಂಬಂಧಿಸಿದಂತೆ ಚಾಂದಕವಠೆ ಮಾರ್ಗವಾಗಿ ತಾಂಬಾ-ನಾಗಠಾಣ-ವಿಜಯಪುರಕ್ಕೆ ನೂತನ ಬಸ್‌ಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಇಲ್ಲಿಯ ಬಸ್ ನಿಲ್ದಾಣದಲ್ಲಿ ಮಂಗಳವಾರ ಸಿಂದಗಿ-ತಾಂಬಾ-ನಾಗಠಾಣ-ವಿಜಯಪುರ ಬಸ್‌ಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಮಾತನಾಡಿದರು.
ಬಸ್ ಡಿಪೊ ವ್ಯವಸ್ಥಾಪಕ ರೇವಣಸಿದ್ದ ಖೈನೂರ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಸ್ ಬೆಳಿಗ್ಗೆ 6.30 ಗಂಟೆಗೆ ಸಿಂದಗಿ ಬಸ್ ನಿಲ್ದಾಣದಿಂದ ಹೊರಡುವುದು ಎಂದು ತಿಳಿಸಿದರು.