ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ’ ಪತ್ರಿಕೆಯ ಲಾಂಛನ ‘ನಂದಿ’ ಪರಂಪರೆಯ ಪ್ರತಿಬಿಂಬ: ಪಡಶೆಟ್ಟಿ

ಸಿಂದಗಿಯಲ್ಲಿ ‘ಪ್ರಜಾವಾಣಿ’ ಅಮೃತ ಮಹೋತ್ಸವ ಸಂಭ್ರಮ; 14ನೆಯ ವರ್ಷದ ಪ್ರಜಾವಾಣಿ ಸಮೀಕ್ಷಾ ಸಪ್ತಾಹ ಸಮಾರೋಪ
Last Updated 1 ಡಿಸೆಂಬರ್ 2022, 15:01 IST
ಅಕ್ಷರ ಗಾತ್ರ

ಸಿಂದಗಿ:‘ಪ್ರಜಾವಾಣಿ’ ಪತ್ರಿಕೆಯ ಲಾಂಛನ ನಂದಿ ನಮ್ಮ ಪರಂಪರೆಯ ಬಿಂಬವಾಗಿದೆ ಎಂದುಜಾನಪದ ವಿದ್ವಾಂಸ ಡಾ.ಎಂ.ಎಂ.ಪಡಶೆಟ್ಟಿ ಹೇಳಿದರು.

ಪಟ್ಟಣದ ಅನುಗ್ರಹ ಕಲ್ಯಾಣಮಂಟಪದಲ್ಲಿ ಗುರುವಾರ ಕುವೆಂಪು ವಿದ್ಯಾಲಯ (ಸ್ಟಡಿ ಸರ್ಕಲ್) ಸಹಯೋಗದಲ್ಲಿ ‘ಪ್ರಜಾವಾಣಿ’ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ 14ನೇ ವರ್ಷದ ‘ಪ್ರಜಾವಾಣಿ’ ಸಮೀಕ್ಷಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ನಂದಿಯುಕೃಷಿ ಸಂಸ್ಕೃತಿಯನ್ನು ನಮ್ಮ ನಾಗರಿಕತೆಯ ಬೆಳವಣಿಗೆಯ ಆರಂಭಿಕ ಘಟ್ಟವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಕುವೆಂಪು ವಿದ್ಯಾಲಯದ ಸಂಚಾಲಕ ಮಹೇಶ ದುತ್ತರಗಾಂವಿ ಮಾತನಾಡಿ, ಪ್ರಜಾವಾಣಿ ಎಂದರೇನೆ ವಸ್ತುನಿಷ್ಠ ವರದಿ ಎಂದರ್ಥ. ಈ ಪತ್ರಿಕೆಯಲ್ಲಿ ಲೋಪ-ದೋಷಗಳು ತೀರ ಕಡಿಮೆ. ಇದರಲ್ಲಿನ ಅಂಕಣಗಳು ವಿದ್ಯಾರ್ಥಿಗಳ ವ್ಯಕ್ತಿತ್ವಕ್ಕೆ ಮಾರ್ಗದರ್ಶಿ. ಈ ಪತ್ರಿಕೆ ಓದುವದರಿಂದ ಭಾಷಾ ಪ್ರೌಢಿಮೆ ಹೆಚ್ಚುತ್ತದೆ. ಸಂವಹನ ಕಲೆ ವೃದ್ಧಿಸುತ್ತದೆ ಎಂದು ತಿಳಿಸಿದರು.

‘ಪ್ರಜಾವಾಣಿ’ ಓದುಗ ಪ್ರೊ.ರವಿ ಗೋಲಾ ಮಾತನಾಡಿ, 40 ವರ್ಷಗಳಿಂದ ‘ಪ್ರಜಾವಾಣಿ’ ಒಂದು ದಿನವೂ ತಪ್ಪದೇ ಓದುತ್ತಿರುವೆ. ಅದೆಷ್ಟೋ ಕ್ರಿಕೆಟ್ ಪಟುಗಳು ‘ಪ್ರಜಾವಾಣಿ’ ವರದಿಯಿಂದಲೇ ಬೆಳಕಿಗೆ ಬಂದ್ದು, ರಾಷ್ಟ್ರಮಟ್ಟದಲ್ಲಿ ಮಿಂಚಿದ್ದಾರೆ. ದಿನಪತ್ರಿಕೆಗಳಲ್ಲಿಯೇ ಶ್ರೇಷ್ಠ ಅದು ‘ಪ್ರಜಾವಾಣಿ’ ಎಂದು ತಿಳಿಸಿದರು.

ಕುವೆಂಪು ವಿದ್ಯಾಲಯದ ವಿದ್ಯಾರ್ಥಿನಿ ರಕ್ಷಿತಾ ಪೂಜಾರಿ, ‘ಪ್ರಜಾವಾಣಿ’ ಪತ್ರಿಕೆ ಓದುವುದರಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಆತ್ಮವಿಶ್ವಾಸ ಮೂಡುತ್ತದೆ. ಪತ್ರಿಕೆಯಲ್ಲಿನ ‘ಬೆರಗಿನ ಬೆಳಕು’ ಅಂಕಣದಿಂದ ಮೌಲ್ಯಗಳ ಪರಿಚಯವಾಗುತ್ತದೆ. ‘ಪ್ರಜಾವಾಣಿ’ ವ್ಯಕ್ತಿತ್ವ ವಿಕಸನದಲ್ಲಿ ಗಾಢ ಪ್ರಭಾವ ಬೀರುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿ ರೇಖಾ ಪೂಜಾರಿ ಮಾತನಾಡಿ, ಪಠ್ಯವೇ ಓದಲು ಬೇಸರ ಪಟ್ಟಿಕೊಳ್ಳುವ ನಮಗೆ ಪತ್ರಿಕೆ ಓದುವ ಉತ್ತಮ ಹವ್ಯಾಸ ಬೆಳೆಸಿಕೊಳ್ಳಲು ಪ್ರಜಾವಾಣಿ ಸಹಾಯಕವಾಗಿದೆ.ಗ್ರಾಮ್ಯ ಭಾಷೆ ಬದಲಾಗಿ ಗ್ರಾಂಥಿಕ ಭಾಷೆ, ಬರವಣಿಗೆ ಕೌಶಲ ವೃದ್ಧಿಗೆ ಪತ್ರಿಕೆ ಸಹಾಯಕವಾಗಿದೆ ಎಂದರು.

ಬಹುಮಾನ ವಿತರಣೆ:

‘ಪ್ರಜಾವಾಣಿ’ ಸಮೀಕ್ಷಾ ಸಪ್ತಾಹದಲ್ಲಿ ಅಧಿಕ ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದ ಚಂದ್ರಶೇಖರ ಚಿನ್ನಾಕಾರ, ದ್ವಿತೀಯ ಸ್ಥಾನ ಪಡೆದಿರುವ ಸಂದೀಪ ಬಿರಾದಾರ ಹಾಗೂ ತೃತಿಯ ಸ್ಥಾನ ಪಡೆದ ನಾಗಮ್ಮ ವರ್ಗಿ ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ರಾಷ್ಟ್ರಮಟ್ಟದ ಸೈಕ್ಲಿಂಗ್ ಪಟು ಸಿಂದಗಿ ತಾಲ್ಲೂಕು ಗೊರವಗುಂಡಗಿ ಗ್ರಾಮದ ಸಚಿನ್ ರಂಜಣಗಿ ಅವರನ್ನು ‘ಪ್ರಜಾವಾಣಿ’ಯಿಂದ ಗೌರವಿಸಲಾಯಿತು.

ಸಾರಂಗಮಠ-ಗಚ್ಚಿನಮಠದ ಪೀಠಾಧ್ಯಕ್ಷ ಡಾ.ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಸಮಾರಂಭವನ್ನು ಉದ್ಘಾಟಿಸಿದರು.

ಮನಸೆಳೆದ ನೃತ್ಯ:ಆಕಾಶ ನೇತೃತ್ವದಲ್ಲಿ ಎ.ಕೆ.ಡಾನ್ಸ್ ಕ್ರ್ಯೂ ಅಕಾಡೆಮಿಯ ಪ್ರಿಯಾ, ಅಕ್ಷತಾ, ಸ್ವಪ್ನಾ, ಸೃಷ್ಠಿ, ಅರ್ಪಿತಾ, ಲಕ್ಷ್ಮೀ, ಪ್ರಿಯಾಂಕ, ಸೌಮ್ಯ, ಸಹನಾ, ರಂಜಿತಾ, ಶಾಂತಗೌಡ, ದೇವರಾಜ್, ಪ್ರಜ್ವಲ್, ವಿಕಾಸ ಹಾಗೂ ಪುಟಾಣಿ ಸನ್ನಿಧಿ ಅವರು ಆಕರ್ಷಕ ನೃತ್ಯ ಪ್ರದರ್ಶಿಸಿದರು.ರಾಗರಂಜಿನಿ ಸಂಗೀತ ಅಕಾಡೆಮಿಯ ಡಾ.ಪ್ರಕಾಶ, ಪಲ್ಲವಿ ಹಿರೇಮಠ ಹಾಗೂ ಪೂಜಾರಿ ಹಿರೇಮಠ ಸಂಗೀತ ಕಾರ್ಯಕ್ರಮ ಜನರ ಮನಸೂರೆಗೊಂಡಿತು.

ಸಾಹಿತಿ ಡಾ.ಚೆನ್ನಪ್ಪ ಕಟ್ಟಿ, ‘ಪ್ರಜಾವಾಣಿ’ ಹುಬ್ಬಳ್ಳಿ ಬ್ಯುರೊ ಮುಖ್ಯಸ್ಥೆ ರಶ್ಮಿ ಎಸ್.,‘ಪ್ರಜಾವಾಣಿ’ ಪ್ರಸರಣ ವಿಭಾಗದ ಬಸವರಾಜ ಮಗದುಮ್, ಜಾಹೀರಾತು ವಿಭಾಗದ ಅಮಿತ್‌ ಬದ್ದಿ,ಪತ್ರಕರ್ತರಾದ ರವಿ ಮಲ್ಲೇದ, ಆನಂದ ಶಾಬಾದಿ, ಮಹಾಂತೇಶ ನೂಲಾನವರ, ಗುರು ಮಠ, ಸಿದ್ಧಲಿಂಗ ಕಿಣಗಿ, ಸುದರ್ಶನ ಜಂಗಣ್ಣಿ, ಗುಂಡು ಕುಲಕರ್ಣಿ, ಪುಟ್ಟು ದೇಸಾಯಿ ಉಪಸ್ಥಿತರಿದ್ದರು.

ಪ್ರೆಸ್ ಕ್ಲಬ್ ಅಧ್ಯಕ್ಷ ಶಾಂತೂ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಜಾವಾಣಿ ಜಿಲ್ಲಾ ವರದಿಗಾರ ಬಸವರಾಜ್‌ ಸಂಪಳ್ಳಿ ಅವರು ‘ಪ್ರಜಾವಾಣಿ’ ಆರಂಭ ಮತ್ತು ಬೆಳೆದು ಬಂದ ದಾರಿ ಕುರಿತು ವಿವರಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಸಿಂದಗಿ ತಾಲ್ಲೂಕು ಘಟಕದ ಅಧ್ಯಕ್ಷ ಆನಂದ ಶಾಬಾದಿ ಸ್ವಾಗತಿಸಿದರು. ಪೂಜಾ ಹಿರೇಮಠ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT