ಚುನಾವಣೆಯಲ್ಲಿ ಸೋಲಿಸಲು ಸ್ವಪಕ್ಷದವರಿಂದ ಹಣ ಹಂಚಿಕೆ | ನಾನು ಶಾಸಕನಾದ ಬಳಿಕವೇ ವಿಜಯಪುರ ನಗರ ಅಭಿವೃದ್ಧಿ | ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ

ನಾಲತವಾಡ: ‘ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಸ್ವಪಕ್ಷದವರೇ ಪಿತೂರಿ ನಡೆಸಿ ಹಣ ಹಂಚಿದರು. ಆದರೆ, ಯಾರು ಏನೇ ಮಾಡಿದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ’ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಪಟ್ಟಣದ ವೀರೇಶ್ವರ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ಮಾಜಿ ಸಚಿವ ಜೆ. ಎಸ್. ದೇಶಮುಖ ಹಾಗೂ ಅವರ ಪತ್ನಿ ವಿಮಲಾಬಾಯಿ ದೇಶಮುಖ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಹಾಗೂ ವಿಜಯಪುರ ಕ್ಷೇತ್ರಕ್ಕೆ ಕಡಿಮೆ ಅನುದಾನ ನೀಡಿ ತಾರತಮ್ಯ ಧೋರಣೆ ಅನುಸರಿಸುತ್ತಿದ್ದರು. ಆದರೆ ನಾನು ಇದನ್ನು ಖಂಡಿಸಿ ಹೆಚ್ಚಿನ ಅನುದಾನ ತಂದು ಧೂಳು ತುಂಬಿದ್ದ ವಿಜಯಪುರವನ್ನು ಇಂದು ಮಾದರಿ ನಗರವಾಗಿ ರೂಪಿಸಿದ್ದೇನೆ’ ಎಂದರು.

‘ಚುನಾವಣೆ ಬಂದಾಗ ಸಾಮೂಹಿಕ ವಿವಾಹ ಮಾಡಿಸುವುದು, ಯಾರಾದರೂ ಮೃತಪಟ್ಟರೆ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಹಣ ಹಂಚುವ ಪೊಳ್ಳು ಸಮಾಜ ಸೇವೆ ಹಲವರಲ್ಲಿ ಇದೆ. ಈ ಹಿಂದೆ ನಾನು ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದಾಗ, ಚುನಾವಣೆ ಪ್ರಚಾರದ ವೇಳೆ ಸಮಾಜ ಸೇವಕ ಎಂದು ಹೇಳಿಕೊಳ್ಳವವ ಮಹಿಳೆಯರ ಆರತಿ ತಟ್ಟೆಯಲ್ಲಿ ₹500ರ ನೋಟು ಹಾಕಿ, ಉಚಿತ ಬಸ್ಪಾಸ್ ನಂತಹ ಅಗ್ಗದ ಪ್ರಚಾರ ಮಾಡಿದ್ದರಿಂದ ನಾನು ಸೋಲಬೇಕಾಯಿತು. ಅಂದು ನಾನು ಗೆದ್ದಿದ್ದರೆ ಮುಖ್ಯಮಂತ್ರಿ ಆಗಿರುತ್ತಿದ್ದೆ. ವಿಜಯಪುರ ನಗರವು ನಾನು ಶಾಸಕನಾದ ಮೇಲೆ ಅಭಿವೃದ್ಧಿ ಹೊಂದಿದೆ’ ಎಂದು ಹೇಳಿದರು.

ಸಂಯುಕ್ತ ಜನತಾದಳದ ರಾಜ್ಯಾಧ್ಯಕ್ಷರಾದ ಮಹಿಮಾ ಜೆ. ಪಟೇಲ ಮಾತನಾಡಿ ‘ಜೆ.ಎಸ್. ದೇಶಮುಖ ಹಾಗೂ ವಿಮಲಾಬಾಯಿ ದೇಶಮುಖ ಅವರು ಹಣ, ಜಾತಿ, ಧರ್ಮ, ಕೋಮುವಾದ ಮಾಡದ ಪ್ರಾಮಾಣಿಕ ರಾಜಕಾರಣಿಗಳು. ಇಂದಿನ ಕಲುಷಿತ ಪರಿಸರದ ರಾಜಕಾರಣಕ್ಕೆ ಅವರು ದಿವ್ಯ ಔಷಧವಾಗಿದ್ದಾರೆ’ ಎಂದರು.

ಯಾದಗಿರಿ ಜಿಲ್ಲೆಯ ಗುರಮಿಠಕಲ್ ಶಾಸಕ ಶರಣಗೌಡ ಕಂದಕೂರ, ಕುಂಟೋಜಿಯ ಚೆನ್ನವೀರ ಶಿವಾಚಾರ್ಯರು, ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಡಿ.ಆರ್.ಮಳಖೇಡ ಮಾತನಾಡಿದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು.

ದಾನಪ್ಪ ನಾಗಠಾಣ, ಅಶೋಕ ತಡಸದ, ಮಹಾಂತಪ್ಪ ನಾವದಗಿ, ಸತೀಶ ಓಸ್ವಾಲ, ದ್ಯಾಮನಗೌಡ ಪಾಟೀಲ, ಗುರುಲಿಂಗಪ್ಪಗೌಡ ಪಾಟೀಲ, ಎಂ.ಎಸ್.ಪಾಟೀಲ, ಬಿ.ಎಂ.ತಾಳಿಕೋಟಿ, ಶಶಿಧರ ಬಂಗಾರಿ, ಮುತ್ತು ಅಂಗಡಿ, ರಾಜು ಹಾದಿಮನಿ, ಮಹಾನಂದಾ ಅಮ್ಮಾಜಿಗೋಳ, ವೀರೇಶ ವಾಲಿ ಇದ್ದರು.

ರೈತರ ಬಗ್ಗೆ ಮಾಹಿತಿ ಇಲ್ಲದೇ ಮಾತನಾಡುವವನನ್ನು ಹೈಬ್ರಿಡ್ ತಳಿಯ ಮನುಷ್ಯ ರೊಕ್ಕಾ ಮಾಡಿಕೊಂಡವ ಡೋಂಗಿ ರಾಜಕಾಣಿ ಅಂತ ತಿಳಕೋಬೇಕು
ಬಸನಗೌಡ ಪಾಟೀಲ ಯತ್ನಾಳ ವಿಜಯಪುರ ನಗರ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.