ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಶೀಲ ಪಾದಯಾತ್ರೆ

Last Updated 30 ನವೆಂಬರ್ 2020, 7:27 IST
ಅಕ್ಷರ ಗಾತ್ರ

ವಿಜಯಪುರ: ಭಗವಾನ್‌ ಬುದ್ಧರ ಬೋಧನೆ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಅವರ ಸಮಾನತೆಯ ಮಾರ್ಗವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಭಿಕ್ಕು ಸಂಘದ ನೇತೃತ್ವದಲ್ಲಿ ರಾಜ್ಯದಾದ್ಯಂತ 'ಪಂಚಶೀಲ ಪಾದಯಾತ್ರೆ' ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಚಾಮರಾಜನಗರದ ನಳಂದ ಬುದ್ಧಿಸ್ಟ್ ವಿಶ್ವವಿದ್ಯಾಲಯದ ಸಂಸ್ಥಾಪಕ ಭಂತೆ ಬೋಧಿದತ್ತ ಥೇರೊ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 2021ರ ಮೇ ತಿಂಗಳ ಬುದ್ಧಪೂರ್ಣಿಮೆಯಂದು ಬೆಂಗಳೂರಿನ ವಿಧಾನಸೌಧದ ಮುಂಭಾಗದಿಂದ ಆರಂಭಗೊಳ್ಳುವ ಪಾದಯಾತ್ರೆಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಮಾರು ಒಂದು ವರ್ಷಗಳ ಕಾಲ ಸಂಚರಿಸಿ 2022ರ ಬುದ್ಧ ಪೂರ್ಣಿಮೆಯಂದು ಚಾಮರಾಜನಗರದಲ್ಲಿ ಸಮಾರೋಪಗೊಳ್ಳಲಿದೆ ಎಂದರು. ಬಳಿಕ ಚಾಮರಾಜನಗರದಲ್ಲಿ ವಿಶ್ವ ಬೌದ್ಧ ಸಮಾವೇಶ ನಡೆಯಲಿದ್ದು, ಥಾಯ್ ಲ್ಯಾಂಡ್ ಅಧ್ಯಕ್ಷ, ರಾಜಕುಮಾರ, ಕಾಂಬೋಡಿಯಾದ ರಾಜಕುಮಾರಿ, ಶ್ರೀಲಂಕಾ ಪ್ರಧಾನಿ, ಬೌದ್ಧಧರ್ಮ ಗುರು ದಲೈಲಾಮಾ, ಸುತ್ತೂರು, ಆದಿಚುಂಚನಗಿರಿ, ಚಿತ್ರದುರ್ಗದ ಮುರುಘಾ ಶರಣರು, ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.ಈ ಸಮಾವೇಶ ಮುಗಿದು ಒಂದು ವರ್ಷದ ಬಳಿಕ ನಾಗಪುರದಿಂದ ಆರಂಭವಾಗಲಿರುವ ಪಂಚಶೀಲ ಪಾದಯಾತ್ರೆ ಸುಮಾರು ಆರು ವರ್ಷಗಳ ಕಾಲ ದೇಶದ ಎಲ್ಲ ರಾಜಧಾನಿಗಳಲ್ಲಿ ಸಂಚರಿಸಿ, ಬಿಹಾರದ ಬುದ್ಧಗಯಾದಲ್ಲಿ ಸಮಾರೋಪಗೊಳ್ಳಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT