ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೆಟ್ರೋಲ್‌ 100 ನಾಟೌಟ್‌’ ಪ್ರತಿಭಟನೆ

ಕಾಂಗ್ರೆಸ್‌ ಅಭ್ಯರ್ಥಿ ಅಶೋಕ ಮನಗೂಳಿ ನೇತೃತ್ವ; ಗೋಲಗೇರಿ, ಯಂಕಂಚಿಯಲ್ಲಿ ಆಕ್ರೋಶ
Last Updated 13 ಜೂನ್ 2021, 12:46 IST
ಅಕ್ಷರ ಗಾತ್ರ

ವಿಜಯಪುರ: ಕೇಂದ್ರ ಬಿಜೆಪಿ ಸರ್ಕಾರ ಪೆಟ್ರೊಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಗೋಲಗೇರಿ ಮತ್ತುಯಂಕಂಚಿಯಲ್ಲಿ ಸಿಂದಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ ಮನಗೂಳಿ ನೇತೃತ್ವದಲ್ಲಿ ‘ಪೆಟ್ರೋಲ್‌ 100 ನಾಟೌಟ್‌’ ಪ್ರತಿಭಟನೆ ನಡೆಸಲಾಯಿತು.

ಕೋವಿಡ್‌ ಲಾಕ್‌ಡೌನ್‌ನಿಂದ ದುಡಿಮೆಯಿಲ್ಲದೆ ಬಡವರು, ರೈತರು, ಶ್ರಮಿಕರು ಕಂಗಾಲಾಗಿದ್ದಾರೆ. ಇದರ ಬೆನ್ನಲ್ಲೆ ಎಲ್ಲ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೆರಿವೆ. ಬಡ ಜನರು ಬದುಕುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಜನರ ನೆರವಿಗೆ ಬರಬೇಕಾದ ಕೇಂದ್ರ ಸರ್ಕಾರ ತೈಲದರ ಹೆಚ್ಚಳ ಮಾಡಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ ಎಂದು ಅಶೋಕ ಮನಗೂಳಿ ಆರೋಪಿಸಿದರು.

ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ತೈಲದರ ಏರಿಕೆ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಇದರ ಜೊತೆಗೆ ಎಲ್‌ಪಿಜಿ ದರವೂ ಏರಿಕೆಯಾಗಿದೆ ಎಂದು ದೂರಿದರು.

ಸಿಂದಗಿ ಪುರಸಭೆ ಉಪಾಧ್ಯಕ್ಷ ಹಸೀಂ ಆಳಂದ, ಯುವ ಕಾಂಗ್ರೆಸ್‌ ಅಧ್ಯಕ್ಷ ಇರ್ಫಾನ್ ಆಳಂದ, ಕಾಂಗ್ರೆಸ್‌ ಮುಖಂಡರಾದ ಮಲ್ಲಣ್ಣ ಸಾಲಿ, ಗೊಲ್ಲಾಳಪ್ಪಗೌಡ ಪಾಟೀಲ ಮಾಗಣಗೇರಿ, ರವಿರಾಜ ದೇವರಮನಿ, ಶಿವು ಹತ್ತಿ, ಬಸವರಾಜ ಮಾರಲಬಾವಿ, ದಯಾನಂದ ಪಟ್ಟಣಶೆಟ್ಟಿ, ಶಿವಯೋಗೆಪ್ಪ ಹತ್ತರಕಿ, ಮಹಬೂರಿ ಹಳಿಮನಿ, ಮಹಾದೇವ ರಾಠೋಡ್, ಕುಮಾರ ಗೋಂದಳಿ, ಸಲೀಮ ಮುಲ್ಲಾ, ಶ್ರೀಶೈಲ ಜಲವಾದಿ, ಪ್ರಕಾಶಗೌಡ ಬಿರಾದಾರ, ಮಡು ನಾಯ್ಕೊಡಿ, ನಿಂಗನಗೌಡ ಪಾಟೀಲ ಡವಳಾರ, ನಿಂಗಣ್ಣ ಸಾಲಿ, ರುಕ್ಮಉದ್ದೀನ್ ಹಳಿಮನಿ, ಶರಣಗೌಡ ಪಾಟೀಲ ಡಂಬಳ, ಚಂದಪ್ಪಗೌಡ ವಂದಾಲ ಡವಳಾರ, ಎ.ಡಿ.ಕೋರವಾರ, ಗೊಲ್ಲಾಳಪ್ಪ ಛಲವಾದಿ, ಭೀಮನಗೌಡ ಚಿಂಚೋಳ್ಳಿ, ವಿಶ್ವಾರಾಧ್ಯ ಮಠ, ಬಾಬುಗೌಡ ಬಿರಾದಾರ, ಪ್ರಭುಗೌಡ ದೇವೂರ ಡವಳಾರ, ಸದ್ದಾಂ ಆಲಗೂರ, ಮಹಿಬೂಬ ದೊಡಮನಿ ಪಾಲ್ಗೊಂಡಿದ್ದರು.

***
ಪ್ರಧಾನಿ ಮೋದಿ ಅವರು ಅಚ್ಛೇ ದಿನ್‌ ಎಂಬ ಸುಳ್ಳು ಭರವಸೆ ಕೊಟ್ಟು ಜನರಿಗೆ ಮೋಸ ಮಾಡಿದ್ದು, ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು
–ಅಶೋಕ ಮನಗೂಳಿ, ಕಾಂಗ್ರೆಸ್‌ ಅಭ್ಯರ್ಥಿ, ಸಿಂದಗಿ ವಿಧಾನಸಭಾ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT