ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಯ್ಯನ ದರ್ಶನಕ್ಕೆ ತಾಂಬಾ ಭಕ್ತರ ಪಾದಯಾತ್ರೆ

ಓಂ ಶ್ರೀ ಸಾಯಿ ಗಜಾನನ ಮಿತ್ರ ಮಂಡಳಿಯಿಂದ ಅನ್ನಪ್ರಸಾದದ ವ್ಯವಸ್ಥೆ
Published 31 ಮಾರ್ಚ್ 2024, 5:49 IST
Last Updated 31 ಮಾರ್ಚ್ 2024, 5:49 IST
ಅಕ್ಷರ ಗಾತ್ರ

ತಾಂಬಾ:  ಎಲ್ಲಿ ನೋಡಿದರಲ್ಲಿ ಭಕ್ತರ ದಂಡು, ಓಂ ನಮ ಶಿವಾಯ ಎಂಬ ಮಂತ್ರ ಪಠಣ, ಯಾತ್ರಾರ್ಥಿಗಳ ಸೇವೆ ಮಾಡುವುದೇ ನಮ್ಮ ಭಾಗ್ಯ ಎಂದು ರಸ್ತೆಯುದ್ದಕ್ಕೂ ಅನ್ನ ಸಂತರ್ಪಣೆ ಮಾಡುವ ತಾಂಬಾ ಗ್ರಾಮದ ಓಂ ಶ್ರೀ ಸಾಯಿ ಗಜಾನನ ಮಿತ್ರ ಮಂಡಳಿ ಭಕ್ತರು...

ಈ ದೃಶ್ಯ ಕಂಡುಬಂದಿದ್ದು ತಾಂಬಾ ಗ್ರಾಮದಲ್ಲಿ. ಯುಗಾದಿ ಹಬ್ಬದ ಸಂದರ್ಭದಲ್ಲಿ ನಡೆಯುವ ಶ್ರೀಶೈಲದ ಜಾತ್ರೆಗೆ ತಾಂಬಾ ಗ್ರಾಮದಿಂದ ಶ್ರೀಶೈಲ ಕ್ಷೇತ್ರದತ್ತ ಅನೇಕರು ಪಾದಯಾತ್ರೆ ಕೈಗೊಂಡಿದ್ದು, ಹಲವರು ಅವರಿಗೆ ಸೇವೆ ಮಾಡುವಲ್ಲಿ ನಿರತರಾಗಿದ್ದಾರೆ.

ಹಗಲು, ರಾತ್ರಿ,ಕಲ್ಲು, ಮುಳ್ಳು, ಎನ್ನದೆ ಉತ್ಸಾಹದಿಂದ ಶ್ರೀಶೈಲದತ್ತ ಹೆಜ್ಜೆ ಹಾಕುತ್ತಿರುವ ಭಕ್ತರು,
ಸಿರಿಗಿರಿಯ ಮಲ್ಲಯ್ಯನಿಗೆ ಜೈ..ಎಂದು ಜೈಕಾರ ಹಾಕುತ್ತ ಸಾಗುವುದರಿಂದ ಪ್ರತಿದಿನ ತಾವು ಕ್ರಮಿಸಿದ ದೂರ ಎಷ್ಟು ಎಂಬುದು ಗೊತ್ತಾಗುವುದೇ ಇಲ್ಲ. ಭಕ್ತಿಯ ಉನ್ಮಾದ ಹಾಗೂ ಹೊಸ ಚೈತನ್ಯದೊಂದಿಗೆ ಶ್ರೀಶೈಲ ಪಾದಯಾತ್ರೆ ಕೈಗೊಂಡವರಿಗೆ ಮಧ್ಯದಲ್ಲಿ ಹಲವು ಭಕ್ತರು ಅನ್ನ ಪ್ರಸಾದದ ವ್ಯವಸ್ಥೆ ಹಾಗು ವಸತಿ ಸೌಲಭ್ಯ ಒದಗಿಸುತ್ತಾರೆ.

ಯಾತ್ರಾರ್ಥಿಗಳು ನಿತ್ಯ 50ರಿಂದ 55ಕಿ.ಮೀ ದೂರ ಕ್ರಮಿಸಿ, 15 ದಿನದೊಳಗೆ 800ಕಿ.ಮೀ ದೂರದ ಶ್ರೀಶೈಲ ಕ್ಷೇತ್ರ  ತಲುಪುತ್ತಾರೆ.

ತಾಂಬಾ ಸಮೀಪದ ಕನ್ನುರ ಗ್ರಾಮದ ಯುವಕರು ಮರಗಾಲ ಕಟ್ಟಿಕೊಂಡು ಮಲ್ಲಯ್ಯನ ಶ್ರೀಶೈಲಕ್ಕೆ ಪಾದಯಾತ್ರೆ ಹೊರಟ ಭಕ್ತರು
ತಾಂಬಾ ಸಮೀಪದ ಕನ್ನುರ ಗ್ರಾಮದ ಯುವಕರು ಮರಗಾಲ ಕಟ್ಟಿಕೊಂಡು ಮಲ್ಲಯ್ಯನ ಶ್ರೀಶೈಲಕ್ಕೆ ಪಾದಯಾತ್ರೆ ಹೊರಟ ಭಕ್ತರು

ರಾಜ್ಯದ ಬಯಲು ಸೀಮೆಯ ನಂತರ ಆಂಧ್ರಪ್ರದೇಶದ ಗಡಿ ದಾಟಿ ನಾಲ್ಕರಿಂದ ಐದು ದಿನ ಕಳೆದ ನಂತರ, ಅಲ್ಲಿಯ ಸಿದ್ದಪುರಂ ಬಳಿ ಕಡಿ ಬಾಗಿಲಿನ ವೀರಭದ್ರೇಶ್ವರ ದರ್ಶನ ಪಡೆದು, ಗಿರಿ ಬೆಟ್ಟ ಏರಬೇಕಾಗುತ್ತದೆ. ಈ ಮಾರ್ಗದಲ್ಲಿ ಅಂಬಲಿಹಳ್ಳ, ಗಂಗನಹಳ್ಳಿ ನಂತರ ಡೊಂಕ ಮಲ್ಲಯ್ಯನ ಬಾವಿ ನೀರು ಕುಡಿದು ಭೀಮನಕೊಳ್ಳ ದಾಟ್ಟಿ, ಕೈಲಾಸ ಬಾಗಿಲ ಸಮೀಪಕ್ಕೆ ಹೋದಾಗ ಸ್ವರ್ಗವೇ ನಮ್ಮ ಹತ್ತಿರದಲ್ಲಿದೆ ಎಂದು ಭಾಸವಾಗುತ್ತದೆ. ಮುಂದೆ ಅಡಿಕೇಶ್ವರ, ಪಂಚದಾರಿಪಲ್ಲ ದಾರಿಯಲ್ಲಿ ಚಲಿಸಿದ ನಂತರ ಸಿಗುವುದೇ ಶ್ರೀಶೈಲ ಮಲ್ಲಯ್ಯನ ದೇವಸ್ಥಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT