ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಾಳಿಕೋಟೆ: ಪರೀಕ್ಷಾ ಕೇಂದ್ರ ರದ್ದು ಖಂಡಿಸಿ ಪ್ರತಿಭಟನೆ

ಪುನರ್ ಆರಂಭಿಸಲು ವಿವಿಧ ಸಂಗೀತ ಶಾಲೆಯ ಮುಖ್ಯಸ್ಥರ ಒತ್ತಾಯ
Published : 3 ಆಗಸ್ಟ್ 2024, 16:20 IST
Last Updated : 3 ಆಗಸ್ಟ್ 2024, 16:20 IST
ಫಾಲೋ ಮಾಡಿ
Comments

ತಾಳಿಕೋಟೆ: ಪಟ್ಟಣದ ಶ್ರೀ ಖಾಸ್ಗತೇಶ್ವರ ಸಂಗೀತ ಮಹಾವಿದ್ಯಾಲಯದಲ್ಲಿ 40 ವರ್ಷಗಳಿಂದ ನಡೆಯುತ್ತಿರುವ ಹಿಂದುಸ್ತಾನಿ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷಾ ಕೇಂದ್ರವನ್ನು ರದ್ದುಗೊಳಿಸಿರುವುದನ್ನು ಖಂಡಿಸಿದ ವಿವಿಧ ಸಂಗೀತ ಶಾಲೆಯ ಮುಖ್ಯಸ್ಥರು, ಅದನ್ನು ಮತ್ತೆ ಪುನರ್ ಆರಂಭಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ಶನಿವಾರ ಶಾಂತಿಯುತ ಪ್ರತಿಭಟನೆ ನಡೆಸಿದರು.

ನಂತರ ತಹಶೀಲ್ದಾರ್ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ, ಸಂಗೀತ ಮತ್ತು ಪ್ರಾದೇಶಿಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಕುಲಪತಿಗಳಿಗೆ ಮನವಿ ಸಲ್ಲಿಸಿದರು.

ಕಳೆದ 40 ವರ್ಷಗಳಿಂದ ಈ ಭಾಗದಲ್ಲಿರುವ ಅಂಧರು, ಅನಾಥರು ಹಾಗೂ ನಿರ್ಗತಿಕರಿಗೆ ಊಟ ವಸತಿ ವ್ಯವಸ್ಥೆ  ಕಲ್ಪಿಸಿ ಸಂಗೀತ ವಿದ್ಯೆಯನ್ನು ನೀಡಿ, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಖಾಸ್ಗತೇಶ್ವರ ಸಂಗೀತ ಮಹಾವಿದ್ಯಾಲಯದಲ್ಲಿ ನಡೆಯುತ್ತಿದ್ದ ಪರೀಕ್ಷಾ ಕೇಂದ್ರವನ್ನು ಏಕಾಏಕಿ ರದ್ದುಗೊಳಿಸಿದ್ದು ಖಂಡನೀಯ ಎಂದರು.

ಪ್ರತಿಭಟನೆಯಲ್ಲಿ ಖಾಸ್ಗತೇಶ್ವರ ಮಠದ ಆಡಳಿತಾಧಿಕಾರಿ ಮುರುಘೇಶ ವಿರಕ್ತ ಮಠ, ಆದಯ್ಯ ಹಿರೇಮಠ, ದಿಲೀಪಸಿಂಗ ಹಜೇರಿ, ಸಂಗಮೇಶ ಶಿವಣಗಿ ಮುದ್ದೇಬಿಹಾಳ, ಕಾಶೀನಾಥ್ ಕಾರಗನೂರು. ವಿನೋದ ಕುಮಾರ ಚಿಕ್ಕಮಠ ಗೋಪಾಲ್ ಕಟ್ಟಿಮನಿ, ದೇವರಾಜ್ ಯರಿಕ್ಯಾಳ, ಅಮರೇಶ್ ಇಂಗಳಗಿ, ಈಶ್ವರ್ ಬಡಿಗೇರ, ನಿಂಗಣ್ಣ ಪತ್ತಾರ ಕೊಡೆಕಲ್, ಪ್ರವೀಣ ಪತ್ತಾರ ಹುಣಸಗಿ, ಗುರು ಬಿರಾದಾರ ಹುಣಸಗಿ, ಬಸವರಾಜ್ ಸಾವಳಗಿ ಮುದ್ದೇಬಿಹಾಳ, ಶ್ವೇತಾ ಯರಗಲ್, ರಿಯಾಜ್ ಮುಲ್ಲಾ , ಪರುಶುರಾಮ್ ಚಳ್ಳಗಿ, ನಾಗರಾಜ್ ಹೂಗಾರ, ಸುರೇಶ್ ಹೂಗಾರ, ಯಲ್ಲಪ್ಪ ವೀರೇಶ್ ಬಡಿಗೇರ, ಹನುಮಂತ ಭಂಟನೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT