ಮುದ್ದೇಬಿಹಾಳ: ನಾಲತವಾಡ ಸಮುದಾಯ ಆರೋಗ್ಯಕೇಂದ್ರದಲ್ಲಿ ಮೂರು ತಿಂಗಳಿನಿಂದ ಒಳ್ಳೆಯ ಸೇವೆ ನೀಡುತ್ತಿದ್ದ ವೈದ್ಯ ರಂಗನಾಥ ಅವರನ್ನು ವರ್ಗಾವಣೆ ಮಾಡಿರುವ ಕ್ರಮವನ್ನು ವಿರೋಧಿಸಿ ನವ ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಪದಾಧಿಕಾರಿಗಳು ಪಟ್ಟಣದ ತಾಲ್ಲೂಕು ಆರೋಗ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ನಾಲತವಾಡ ಪಟ್ಟಣದಿಂದ ಮುದ್ದೇಬಿಹಾಳಕ್ಕೆ ಬಂದು ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ವೇದಿಕೆ ಅಧ್ಯಕ್ಷ ಮೈಬೂಬ ಕುಳಗೇರಿ, ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಿಗೆ ವೈದ್ಯರು ಬರುವುದಕ್ಕೆ ಹಿಂದೇಟು ಹಾಕುತ್ತಾರೆ. ಇಂತಹ ಸಮಯದಲ್ಲಿ ಡಾ.ರಂಗನಾಥ ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದರು.

ಆರೋಗ್ಯ ಇಲಾಖೆ ಸಿಬ್ಬಂದಿ ಎಂ.ಪಿ.ಹಿಂಗೋಲೆ ಮನವಿ ಪತ್ರ ಸ್ವೀಕರಿಸಿದರು. ವೇದಿಕೆಯ ಕಾರ್ಯಕರ್ತರಾದ ಮಹಿಬೂಬ್ ಕುಳಗೇರಿ, ಯಲ್ಲಪ್ಪ ಮುದ್ದೇಬಿಹಾಳ, ಗೊಲ್ಲರ, ರಾಜು, ಅಶೋಕ ಆಲಮೇಲ, ರಾಜು ಮನಗೂಳಿ, ರವಿ ದೇವರಹಿಪ್ಪರಗಿ, ರಾಮು ಕುಂಟೋಜಿ, ಆಕಾಶ ಹೂವಿನಹಿಪ್ಪರಗಿ, ಸಂತೋಷ ಹುಣಸಗಿ ಭಾಗವಹಿಸಿದ್ದರು.

ವೈದ್ಯರ ವರ್ಗಾವಣೆ ಮಾಡಬಾರದು ಎಂದು ಯುವಜನ ಸೇನೆ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ವಾಲಿ, ನಾಲತವಾಡ ವಲಯ ಕರವೇ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ರಫೀಕ್ ತೆಗ್ಗಿನಮನಿ ಕೂಡಾ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.