ಶುಕ್ರವಾರ, ನವೆಂಬರ್ 27, 2020
20 °C

ತಾಳಿಕೋಟೆ: ಮುಕ್ತಿ ವಾಹನಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಾಳಿಕೋಟೆ: ಪಟ್ಟಣದ ಬಜಾರ ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಸುಮಾರು ₹10 ಲಕ್ಷ ವೆಚ್ಚದಲ್ಲಿ ಖರೀದಿಸಲಾದ ಮುಕ್ತಿ ವಾಹನವನ್ನು ದಸರಾ ಹಬ್ಬದಂದು ಖಾಸ್ಗತ ಮಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿ ಪೂಜಿಸಿ ಸಾರ್ವಜನಿಕ ಸೇವೆಗೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಜಾರ ಬಸವೇಶ್ವರ ದೇವ ಸ್ಥಾನ ಸಮಿತಿ ₹10 ಲಕ್ಷ ವೆಚ್ಚ ಮಾಡಿ ಮುಕ್ತಿ ವಾಹನ ಖರೀದಿಸಿ ಬಹುದಿನಗಳ ಅಪೇಕ್ಷೆ ಈಡೇರಿಸಿದೆ ಎಂದರು.

ಕಾಶಿನಾಥ ಮುರಾಳ, ಅಶೋಕ ಹಂಚಲಿ ಮಾತನಾಡಿದರು. ಮುಕ್ತಿ ವಾಹನವನ್ನು ಸ್ಥಳೀಯ ಬಳಕೆಗೆ ₹1,500 ಹಾಗೂ ತಾಲ್ಲೂಕಿನ ಹೊರ ಗ್ರಾಮಗಳಿಗೆ ಬೇಕಾದವರು ₹2,500 ಪಾವತಿಸಬೇಕು.  ಹಿರಿಯರಾದ ಎಸ್.ಎ.ಸರೂರ, ಬಿ.ಎಸ್.ಗಬಸಾವಳಗಿ, ವಿ.ಬಿ.ಸಜ್ಜನ, ಎಂ.ಎಸ್.ಸರಶೆಟ್ಟಿ, , ಕಾಶಿನಾಥ ಸಜ್ಜನ, ಪರಶುರಾಮ ತಂಗಡಗಿ, ವಾಸುದೇವ ಹೆಬಸೂರ, ಶಶಿಧರ ಡಿಸಲೆ, ಗಂಗಾಧರ ಕಸ್ತೂರಿ , ಬಾಬು ಹಜೇರಿ, ಬಾಬು ಕಾರಜೋಳ, ನಾಗಣ್ಣ ಚಿನಗುಡಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.