ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ಸೈನಿಕರಿಗೆ ಅದ್ಧೂರಿ ಸ್ವಾಗತ

Last Updated 9 ಫೆಬ್ರುವರಿ 2021, 13:39 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ಸೇವಾ ನಿವೃತ್ತಿ ಹೊಂದಿದ ಬಳಿಗ ಪಟ್ಟಣಕ್ಕೆ ಬಂದ ಸೈನಿಕರಾದ ಮೀಟು ಜಾಧವ್ ಹಾಗೂ ಯಲ್ಲಪ್ಪ ಆರೇರ ಅವರಿಗೆ ಸೋಮವಾರ ಅದ್ಧೂರಿ ಸ್ವಾಗತ ನೀಡಲಾಯಿತು.

ವಿವೇಕ ಬ್ರಿಗೇಡ್ ಸಂಘಟನೆಯ ನೇತೃತ್ವದಲ್ಲಿ ನಿವೃತ್ತ ಸೈನಿಕರನ್ನು ಆತ್ಮೀಯವಾಗಿ ಬರಮಾಡಿಕೊಂಡು ಮೆರವಣಿಗೆ ಮಾಡಲಾಯಿತು.

ನಂತರ ವಿರಕ್ತಮಠದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಡಿವೈಎಸ್ಪಿ ಶಾಂತವೀರ, ನಿವೃತ್ತಿ ನಂತರ ಸ್ವಗ್ರಾಮಕ್ಕೆ ಬರುವ ಸೈನಿಕರನ್ನು ಸನ್ಮಾನಿಸುವುರೊಂದಿಗೆ ಅವರು ಸೈನಿಕ ವೃತ್ತಿಯ ಅನುಭವಗಳನ್ನು ಹಂಚಿಕೊಳ್ಳುವುದರಿಂದ ಇತರರಲ್ಲಿ ದೇಶಭಕ್ತಿ ಮೂಡಿಸಿದಂತಾಗುತ್ತದೆ ಎಂದು ಹೇಳಿದರು.

ದೇಶದ ರಕ್ಷಣೆಗಾಗಿ ಯುವಕರು ಸೇನೆಗೆ ಸೇರುತ್ತಾರೆ. ಮಳೆ–ಗಾಳಿ ಶೀತವನ್ನು ಲೆಕ್ಕಿಸದೇ ಪ್ರಾಣ ಪಣಕ್ಕಿಟ್ಟು ಪ್ರತಿ ಭಾರತೀಯನು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳುವ ಯೋಧರು ದೇವರಿಗೆ ಸರಿಸಮಾನರು ಎಂದು ಹೇಳಿದರು.

ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಬರುವ ಸೈನಿಕರು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಯುವಕರಿಗೆ ಮಾರ್ಗದರ್ಶನ ಮಾಡಿ, ಸುಂದರ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.

ವಿವೇಕ ಬ್ರಿಗೇಡ್‌ನ ವಿನೂತ ಕಲ್ಲೂರ, ಪುರಸಭೆ ಸದಸ್ಯ ರಾಜು ಬೂತನಾಳ, ನಿವೃತ್ತ ಸೈನಿಕರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಐ.ಬಿರಾದಾರ, ಪತಂಜಲಿ ಯೋಗ ಸಮೀತಿ ತಾಲ್ಲೂಕು ಪ್ರಭಾರಿ ಕಾಶಿನಾಥ ಅವಟಿ, ಬಸವರಾಜ ಹಡಪದ, ನಿವೃತ್ತ ಸೈನಿಕರಾದ ಯಲ್ಲಪ್ಪ ಆರೇರ, ಮೀಟು ಜಾಧವ ಮಾತನಾಡಿದರು.

ರೈತ ಮುಖಂಡ ಅರವಿಂದ ಕುಲಕರ್ಣಿ, ಡಿಎಸ್ಎಸ್ ಮುಖಂಡ ಸುರೇಶ ಮಣ್ಣೂರ, ಅಶೋಕ ಚಲವಾದಿ, ಅಮರಯ್ಯ ಹಿರೇಮಠ ಇದ್ದರು.

ಶಿಕ್ಷಕ ಕೋಟ್ರೆಶಿ ಹೆಗಡ್ಯಾಳ ಸ್ವಾಗತಿಸಿ, ಪ್ರಭಾಕರ ಖೇಡದ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT